ಮೂಲ ಬೃಂದಾವನ
ಶ್ರೀಪಾದರಾಜಗುರುಭ್ಯೋನಮ:।
ಜ್ಞಾನವೈರಾಗ್ಯ ಭಕ್ತ್ಯಾದಿ ಕಲ್ಯಾಣಗುಣಶಾಲಿನ: |
ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ಮಮ ||
ಆಚಾರ್ಯ ಮಧ್ವರ ನೇರ ಶಿಷ್ಯರಾದ ಶ್ರೀಪದ್ಮನಾಭತೀರ್ಥರ ಪರಂಪರೆಯಲ್ಲಿ ವಿರಾಜಮಾನರಾಗಿದ್ದ, ಆಚಾರ್ಯ ಮಧ್ವರ ನಂತರದ ೮ನೇ ಯತಿಗಳಾದ, ವ್ಯಾಸಸಾಹಿತ್ಯ ಮತ್ತು ದಾಸಸಾಹಿತ್ಯವೆರಡರಲ್ಲೂ ಕುಶಲರಾಗಿದ್ದ, ವ್ಯಾಸರಾಜರೆಂಬ ಅಮೂಲ್ಯ ವಜ್ರವನ್ನು ನೀಡಿದ, ಶ್ರೀ ಶ್ರೀಪಾದರಾಜರ ಆರಾಧನ ನಿಮಿತ್ತ ಲೇಖನ -
ಶೇಷಗಿರಿಯಪ್ಪ ಮತ್ತು ಗಿರಿಯಮ್ಮ ದಂಪತಿಗಳಲ್ಲಿ ಅಬ್ಬೂರಿನಲ್ಲಿ ಕ್ರಿ.ಶಕ. 1406ರಲ್ಲಿ “ಲಕ್ಷ್ಮೀನಾರಾಯಣ”ರೆಂಬ ನಾಮಧೇಯದಿಂದ ಜನಿಸಿ, 1411ರಲ್ಲಿ ಉಪನಯನಗೊಂಡು. 1412ರಲ್ಲಿ ಶ್ರೀರಂಗದಲ್ಲಿ ಶ್ರೀ ಸ್ವರ್ಣವರ್ಣತೀರ್ಥರ ಉತ್ತರಾಧಿಕಾರಿಯಾಗಿ ಸನ್ಯಾಸವನ್ನು ಸ್ವೀಕರಿಸಿ, “ಲಕ್ಷ್ಮೀನಾರಾಯಣ ಮುನಿ” ಎಂಬ ಆಶ್ರಮನಾಮವನ್ನು ಸ್ವೀಕರಿಸಿ, ನಂತರ, ಭಾಸ್ಕರಕ್ಷೇತ್ರವೆಂದು ಪ್ರಖ್ಯಾತವಾಗಿದ್ದ, ವಿಜಯನಗರದ ಅರಸರ ಎರಡನೇ ರಾಜಧಾನಿಯಾಗಿದ್ದ, ತಿರುಪತಿಯ ಪೂರ್ವದ ಬಾಗಿಲು ಎಂದು ಪ್ರಖ್ಯಾತವಾದ “ಮುಳಬಾಗಿಲು” ಕ್ಷೇತ್ರದಲ್ಲಿ 154ರಲ್ಲಿ ಜ್ಯೇಷ್ಟ ಶುಕ್ಲ ಚತುರ್ದಶಿಯಂದು ವೃಂದಾವನಸ್ಥರಾದರು.
“ಶ್ರೀಪಾದರಾಜರು”
श्रीपूर्णबोध कुलवार्धि सुधाकराय श्रीव्यासराज गुरवे यतिशेखराय |
श्रीरंगविट्ठल पदांबुज बंभराय श्रीपादराजगुरवेस्तु नमश्युभाय ॥
ज्ञानवैराग्य भक्त्यादि कल्याणगुणशालिन: ।
लक्ष्मीनारायणमुनीन्वंदे विद्यागुरून्मम ॥
तं वंदे नरसिंहतीर्थनिलयं श्रीव्यासराट् पूजितं ।
ध्यायंतं मनसा नृसिंहचरणम् श्रीपादराजं गुरुं ॥
ಶ್ರೀಪೂರ್ಣಬೋಧ ಕುಲವಾರ್ಧಿ ಸುಧಾಕರಾಯ ಶ್ರೀವ್ಯಾಸರಾಜ ಗುರವೇ ಯತಿಶೇಖರಾಯ |
ಶ್ರೀರಂಗವಿಟ್ಠಲ ಪದಾಂಬುಜ ಬಂಭರಾಯ ಶ್ರೀಪಾದರಾಜಗುರವೇಸ್ತು ನಮಶ್ಯುಭಾಯ ||
ಜ್ನಾನವೈರಾಗ್ಯ ಭಕ್ತ್ಯಾದಿ ಕಲ್ಯಾಣಗುಣಶಾಲಿನಃ |
ಲಕ್ಷ್ಮೀನಾರಾಯಣಮುನೀನ್ವಂದೆ ವಿದ್ಯಾಗುರುನ್ಮಮ ||
ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀವ್ಯಾಸರಾಟ್ ಪೂಜಿತಂ |
ಧ್ಯಾಯಂತಂ ಮನಸಾ ನೃಸಿಂಹಚರಣಮ್ ಶ್ರೀಪಾದರಾಜಂ ಗುರುಂ |
ರಚನೆ : ಶ್ರೀಪಾದರಾಜರು
ರಾಗ : ಆನಂದಭೈರವಿ
ತಾಳ : ಝಂಪೆ
ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ । (ಪ )
ಲಾಲಿ ಮುನಿವಂದ್ಯ ಲಾಲಿ ಜಾನಕಿ
ರಮಣ ಶ್ರೀ ರಾಮ ಲಾಲಿ ।। ( ಅ. ಪ )
ಕನಕರತ್ನಗಳಲ್ಲಿ ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯ ಮಾಡಿ
ಶ್ರೀಕಾಂತನ ಉಯ್ಯಾಲೆಯನು ವಿಚಾರಿಸಿದರು ।।೧।।