Pages

Showing posts with label Chaitra Gowri pooje. Show all posts
Showing posts with label Chaitra Gowri pooje. Show all posts

Tuesday, April 1, 2014

Tadige Gowri Vrata

ತದಿಗೆ ಗೌರಿ ಪೂಜೆಯೂ  ಚೈತ್ರ ಶುದ್ಧ  ತೃತೀಯ, ಚೈತ್ರ ಶುದ್ಧ   ಬಹುಳ ಹಾಗು ವೈಶಾಖ  ಶುದ್ಧ  ತೃತೀಯ  ದಂದು ಆಚರಣೆ ಮಾಡುವರು . ಈ ವರುಷ ಜಯ  ನಾಮ ಸಂವತ್ಸರದಲ್ಲಿ ಏಪ್ರಿಲ್ ೨ನೇ  ತಾರೀಖು  ೨೦೧೪ ಮೊದಲನೇ ತದಿಗೆ,ಏಪ್ರಿಲ್ ೧೭ ನೇ  ತಾರೀಖು  ತದಿಗೆ ಹಾಗೂ  ಮೇ ೨ನೇ  ತಾರೀಖು ಕೊನೆಯ ತದಿಗೆ ಅಂದರೆ ಅಕ್ಷಯ ತದಿಗೆ/ತೃತೀಯ . (ಈ ಮೇಲ್ಕಂಡ ತಾರೀಖುಗಳು  ಆ ಆ  ಪ್ರಾಂತ್ಯದ ಪಂಚಾಂಗವನ್ನು ಆಧರಿಸಿ ಆಚರಣೆ ಮಾಡಬೇಕು ) ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು  ತಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸಿ ನಂತರ ಅರಿಶಿನದಿಂದ ಗೌರಿಯನ್ನು ತಯಾರಿಸಿ ಅದನ್ನು ಎರಡು ವೀಳ್ಯದೆಲೆಯನ್ನು ಬೆಲ್ಲದಚ್ಚು  ಮೇಲೆ ಸ್ಥಾಪಿಸಿ ಜೊತೆಗೆ ಎರಡು ಬಟ್ಳಡಿಕೆ ,ಬಳೆಬಿಚ್ಚೋಲೆ ,ಕನ್ನಡಿ ,ಒಂದು ಪುಟ್ಟ ಕಳಸ  ಅದಕ್ಕೆ ೫ ವೀಳ್ಯದೆಲೆ ,ನೀರು,ಅರಿಶಿನ ,ಕುಂಕುಮ, ಹೂವು,ಮಂತ್ರಾಕ್ಷತೆ, ಹಾಗು ಕಳಸಕ್ಕೆ ಸುಣ್ಣ. ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು . ಇವಿಷ್ಟು  ಬೇಕಾದ ಪದಾರ್ಥಗಳು (ಕೆಲವರ ಮನೆಯಲ್ಲಿ ಎರಡು ಅರಿಶಿನಿದ ಗೌರಿಯನ್ನು ಮಾಡುವ ಪದ್ಧತಿ  ಇರುತ್ತೆ ಹಾಗಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಹಾಗು ಗುರು ಹಿರಿಯರಲ್ಲಿ ಕೇಳಿ ಆಚರಣೆ ಮಾಡಬೇಕು. )

                                 ತದಿಗೆ ಗೌರಿಯನ್ನು ಸ್ಥಾಪಿಸಿ ,ಆವಾಹನೆ ಮಾಡಿ  ಪೂಜಿಸಬೇಕು . ನೈವೇದ್ಯಕ್ಕಾಗಿ ಭಕ್ಷ್ಯಗಳು, ಪಾಯಸ ,ಹಣ್ಣುಗಳು,ಪಾನಕ ,ಕೋಸಂಬರಿ  ತಮ್ಮ ತಮ್ಮ ಕೈಲಾದಂತೆ ಯಾವುದಾದರೂ ಮಾಡಿ ನೈವೇದ್ಯ ಮಾಡಿ ,ಹಾಗು ೫ ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು . ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತ್ಯಾನುಸಾರ ಬಾಗಿನ ಕೊಡಬಹುದು .