ಪೂಜಾ ಸಂಕಲ್ಪವನ್ನು " ಸಟಿಕಾ ವ್ರತರತ್ನಂ "ಪುಸ್ತಕದಲ್ಲಿ ವಿಸ್ತಾರವಾಗಿ ತಿಳಿಸಿದ್ದಾರೆ ಆದರೆ ಪಶ್ಚಿಮೋತ್ತರ ದೇಶದಲ್ಲಿ ನೆಲಸಿರುವ ಭಾರತೀಯರಿಗೆ ಅದು ಅನ್ವಯಿಸುವುದಿಲ್ಲಾ ಹಾಗಾಗಿ ಈ ಕೆಳಕಂಡ ಸಂಕಲ್ಪವು ಉಪಯೋಗ ಬರುವುದೆಂದು ನಾನು ಇಲ್ಲಿ ಸೂಚಿಸಿದ್ದೇನೆ .
ಇದರಲ್ಲಿ ಏನಾದರು ತಪ್ಪಿದ್ದರೆ ಕ್ಷಮಿಸಿ ಹಾಗೆ ಯಾರಿಗಾದರು ಸರಿಯಾದ ಮಾಹಿತಿ ಗೊತ್ತಿದ್ದಲ್ಲಿ ತಿಳಿಸಬಹುದು .
ಸಂಕಲ್ಪ -
ಮಮ ಉಪಾತ್ತ ಸಮಸ್ತದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಶುಭೇ ಶೋಭನೇ ಮುಹೂರ್ತೇ , ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ , ಕಲಿಯುಗೇ ,ಪ್ರಥಮಪಾದೇ , ಅಷ್ಟವಿಂಶತಿ ಮೇ ಕ್ರೌನ್ಚದ್ವೀಪೇ , ರಮಣಕ ವರ್ಷೇ , ಐoದ್ರ ಖಂಡೇ , ರಮ್ಯಕ ಪಶ್ಚಿಮತೀರೇ , ಮೇರೊಹ್ ಪಶ್ಚಿಮ ಪಾರ್ಶ್ವದಿಗ್ಭಾಗೆ ,ದಕ್ಷಿಣ -ಪೂರ್ವ (Georgia ನಾಮ ಮಹಾನಗರೇ Atlanta ಕ್ಷೇತ್ರೇ ), ಸಪ್ತ ಸಮುದ್ರಾನ್ತರೇ , ಚಾಂದ್ರಮಾನೇನ ವ್ಯಾವಹಾರಿಕೆ ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಮಧ್ಯೆ ........ ಸಂವತ್ಸರೇ ....... ಅಯನೇ ...... ಋತೌ........ ಮಾಸೇ ........ ಪಕ್ಷೇ ......... ತಿಥೌ,..... ವಾಸರಃ ವಾಸರಸ್ತು ಶುಭ ವಾಸರ ಯುಕ್ತಾಯಾಂ ಶುಭ..... ತಿಥೌ ಶುಭ ನಕ್ಷತ್ರ ಶುಭ ಯೋಗ ,ಶುಭ ಕರ್ಣ ಏವಂ ಗುಣ ವಿಶಿಷ್ಟಯಾಮ್ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ಧೈರ್ಯ ವಿಜಯ ಆಯುರಾರೋಗ್ಯ ಸಿದ್ಯರ್ಥಂ ,ಮನೋವಾಂಛಾ ಸಿದ್ಯರ್ಥಂ ದುರಿತೋಪಶಾಂತ್ಯರ್ಥಂ, ಸಮಸ್ತ ಮಂಗಳಾವಾಪ್ತ್ಯರ್ಥಂ ,ಧರ್ಮಾರ್ಥಕಾಮ ಮೋಕ್ಷಾದಿ ಚತುರ್ವಿಧ
ಫಲ ಪುರುಷಾರ್ಥ ಸಿದ್ಯರ್ಥಂ ,ಸತ್ಸಂತಾನ ಸೌಭಾಗ್ಯ ಫಲಾವಾಪ್ತ್ಯರ್ಥಂ ....... ಪ್ರಯುಕ್ತಾಂ ....... ಮುದ್ದಿಶ್ಯ ....... ಪ್ರೀತ್ಯರ್ಥಂ ಭವಿಷ್ಯೋತ್ತರ ಪುರಾಣಕಲ್ಪೋಕ್ತ ಪ್ರಕಾರೇಣ ಯಾವಚ್ಛಕ್ತಿ ಧ್ಯಾನ ಆವಾಹನಾದಿ ಶೋಡಶೋಪಚಾರ ಪೂಜಾಂ ಕರಿಷ್ಯೇ ।।