Pages

Showing posts with label Bhavageethe. Show all posts
Showing posts with label Bhavageethe. Show all posts

Sunday, September 15, 2013

Preeti Kotta Radhege

ರಚನೆ : ಹೆಚ್ . ಎಸ್ . ವೆಂಕಟೇಶ್  ಮೂರ್ತಿ
ಗಾಯನ : ಎಂ . ಡಿ . ಪಲ್ಲವಿ


ಪ್ರೀತಿ ಕೊಟ್ಟ ರಾಧೆಗೆ  ಮಾತು ಕೊಟ್ಟ ಮಾಧವ ।      (ಪಲ್ಲವಿ )
ತನ್ನನಿತ್ತ   ಕೊಳಲಿಗೆ  ರಾಗ ತೆತ್ತ ಮಾಧವ
ತನ್ನನಿತ್ತ   ಕೊಳಲಿಗೆ  ರಾಗ ತೆತ್ತ ಮಾಧವ ।।          (ಅ. ಪ )

Saturday, September 14, 2013

Nannolu naa....


ನನ್ನೊಳು ನಾ..   ನಿನ್ನೊಳು ನೀ ...
ಒಲಿವ ಮುಂತಿಂತೆ  ನಾ ... ನೀ ..
ನಿನ್ನೊಳು ನಾ...  ನನ್ನೊಳು  ನೀ ...
ಒಲಿದ ಮೇಲಿಂತೆ  ನಾ ... ನೀ ...
ಇದೇ  ಒಲವಿನ  ಸ  ರಿ  ಗ  ಮ ಪ ದ ನಿ ..... ।।       (ಪ )


                                                  (ನನ್ನೊಳು )

Tunge Dadadalli.......


ತುಂಗೆ ದಡದಲ್ಲಿ  ಹೊಂಗೆ  ನೆರಳಲ್ಲಿ
ಹರಟೆ ಹೊಡೆಯಬೇಕು ....  ಹರಟೆ  ಹೊಡೆಯಬೇಕು    (ಪಲ್ಲವಿ )
ಮಾತು ಸಾಕಾಗಿ  ಮೌನ ಬೇಕಾಗಿ ...
ಮಾತು ಸಾಕಾಗಿ  ಮೌನ ಬೇಕಾಗಿ
ನದಿಯ ನೋಡಬೇಕು ..... ನದಿಯ ನೋಡಬೇಕು     (ಅ. ಪ )

                                                       (ತುಂಗೆ ದಡದಲ್ಲಿ )

Mathige Maatilla




ಮಾತಿಗೆ ಮಾತಿಲ್ಲ ಮೌನವೇ ಮಾತೆಲ್ಲಾ 
ಇಂಗಿತವೇ  ಇಂಗಿರಲು  ವೇದನೆಯೇ  ತಂಗಿರಲು ....   (ಪಲ್ಲವಿ )
ಭಾವ  ಬರಿದಾಗಿ  ಬರಡಾಗಿದೆ
ಭಾದೆ ಅಳಿಸಲಿ  ಮುಡಿಪಾಗಿದೆ         (ಅ. ಪ )
ನಾನು ಮನ ಮೌನ.....
ಇಂಗಿತವೇ  ಇಂಗಿರಲು  ವೇದನೆಯೇ ತಂಗಿರಲು
ಮಾತಿಗೆ ಮಾತಿಲ್ಲ ಮೌನವೇ ಮಾತೆಲ್ಲಾ ... ।।

Hinde Hege Chimmutittu

ಹಿಂದೆ ಹೇಗೆ ಚಿಮ್ಮುತಿತ್ತು !
ರಚನೆ - ಎನ್ . ಎಸ್ .  ಲಕ್ಷ್ಮಿನಾರಾಯಣ ಭಟ್ಟ
ಗಾಯಕರು - ಸಿ . ಎಸ್  . ಅಶ್ವಥ್

ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ !
ಈಗ ಯಾಕೆ ಜ್ವಲಿಸುತ್ತಿದೆ
ಏನೋ ಶಂಕೆ ಭೀತಿ !

Sunday, August 4, 2013

O ! Trishita Chancharika

 ರಚನೆ : ಕುವೆಂಪು



ಓ ! ತ್ರಿಶಿತ  ಚಂಚರೀಕ
ಬಾರ ಹೃದಯ ಪುಂಡರೀಕ
ನಿನ್ನನರಳಿ  ಕಾದಿದೆ ।
ಎದೆಯ ತುಂಬ ಮಧುವನಿಟ್ಟು
ದಾರಿಯೆಡೆಗೆ  ದಿಟ್ಟಿ ಇಟ್ಟು
ಬಯಸಿ ನೋಡಿ ಕಾದಿದೆ ।।

Mouna Tabbitu Nelava

 ಮೌನ  ತಬ್ಬಿತು  ನೆಲವ
 ರಚನೆ :ಗೋಪಾಲಕೃಷ್ಣ ಅಡಿಗ
ಗಾಯನ: ಸಿ . ಅಶ್ವಥ್



ಮೌನ ತಬ್ಬಿತು ನೆಲವ ಚುಂಬನೆ  ಪುಳಕಗೊಂಡಿತು  ಧಾರಿಣಿ ।
ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ ।। ಮೌನ।।

Saturday, June 15, 2013

Baalu Ondu Belakinaata

ಬಾಳು  ಒಂದು  ಬೆಳಕಿನಾಟ ,ಆಸೆಯೊಂದು  ಕತ್ತಲಾಟ
ಸಾಗಿದೆ ಇದರೊಳಗೆ ,ಬೆಳಕು ಕತ್ತಲೋಟ  ||  ಬಾಳು ಒಂದು ||