ಬಾಳು ಒಂದು ಬೆಳಕಿನಾಟ ,ಆಸೆಯೊಂದು ಕತ್ತಲಾಟ
ಸಾಗಿದೆ ಇದರೊಳಗೆ ,ಬೆಳಕು ಕತ್ತಲೋಟ || ಬಾಳು ಒಂದು ||
ಹಕ್ಕಿ ರೆಕ್ಕೆ ಬಿಚ್ಚಿ ತಾನು , ಹರುಷದಲ್ಲಿ ಹಾರುವಂತೆ
ಮನಸು ತನ್ನ ಆಸೆ ಹೊತ್ತು , ಸಾಗುತಿಹುದು ಎತ್ತರಕೆ
ಎಲ್ಲೇ ಇಲ್ಲ ಬಾನಿನಲ್ಲಿ ,ಹಕ್ಕಿಗಿಲ್ಲ ನೆಲೆಯು ಅಲ್ಲಿ
ಕೊನೆಯೇ ಇಲ್ಲ ಆಸೆಗೆಂದು,ತಿಳಿಯದೇಕೆ ಮನಸಿಗಿಂದು || ಬಾಳು ಒಂದು ||
ನದಿಯು ಕಡಲ ಸೇರಲೆಂದು ,ತವಕದಲ್ಲಿ ಓಡುವಂತೆ
ಓಡುತಿಹುದು ಮನಸು ಏಕೆ ,ಆಸೆ ಎಂಬ ಕಡಲಿಗಿಂದು
ಯಾವ ನದಿಯು ಆದರೇನು,ಕದಲಿನೊಳಗೆ ಸಿಗುವುದೇನು
ಆಸೆ ತನ್ನ ಮಿತಿಯ ಮೀರಿ ,ನೂಕುತಿಹುದು ಆಳದಲ್ಲಿ || ಬಾಳು ಒಂದು ||
ಬಾನಿಗಿಲ್ಲ ಎಲ್ಲೇ ಅಲ್ಲಿ ,ಆಸೆಗಿಲ್ಲ ಕೊನೆಯು ಇಲ್ಲಿ
ಏಕೆ ಕನಸು ಕಾಣುತಿಹುದು ,ಮನಸು ತಾನು ನೋವಲಿಂದು
ನಿಜವನರಿತು ಸಾಗುತಿರಲು ,ಹರುಷವಿಂದು ಬಾಳಿನಲ್ಲಿ
ತಾಪವಿಲ್ಲ ಸೆಳಸವಿಲ್ಲ ,ಆಸೆ ತೊರೆದ ಮನಸಲೆಂದು || ಬಾಳು ಒಂದು ||

No comments :
Post a Comment