ರಚನೆ : ಕುವೆಂಪು
ಓ ! ತ್ರಿಶಿತ ಚಂಚರೀಕ
ಬಾರ ಹೃದಯ ಪುಂಡರೀಕ
ನಿನ್ನನರಳಿ ಕಾದಿದೆ ।
ಎದೆಯ ತುಂಬ ಮಧುವನಿಟ್ಟು
ದಾರಿಯೆಡೆಗೆ ದಿಟ್ಟಿ ಇಟ್ಟು
ಬಯಸಿ ನೋಡಿ ಕಾದಿದೆ ।।
ಉದಯಾಚಲದಲ್ಲಿ ರವಿ
ಬರುವ ಚಿಹ್ನೆ ಅರುಣ ಚವಿ
ಓಕುಳಿಯನೇ ಚಲ್ಲಿದೆ ।
ಸರೋವರದ ಸಲಿಲ ಮುಖಕೆ
ಪ್ರಿಯ ಜನರ ಪ್ರೇಮ ಸುಖಕೆ
ಓಕುಳಿಯನೇ ಚೆಲ್ಲಿದೆ ।।
ಮೂಡನೆಲರು ತೀಡುತಿದೆ
ಕೆರೆಯ ನೀರು ನಡುಗುತಿದೆ
ಹೂಬಟ್ಟಲು ಬಳುಕಿದೆ ।
ಮಧುಬಾರಕೆ ಪದುಮ ಪಾತ್ರೆ
ಪೂರ್ವ ಪಶ್ಚಿಮಕ್ಕೆ ಯಾತ್ರೆ
ಮಕರಂದವು ತುಳುಕಿದೆ ।।
ಬಾರಬೇಗ ಚಂಚರೀಕ
ಬಾರಹೃದಯ ಪುಂಡರೀಕ
ಹಂಬಲಿಸಿದೆ ನಿನ್ನನೇ ।
ಬೇಗ ಹಿಂಡಿ ಹೀರು ನನ್ನ
ಜೇನು ಸೋರಿ ಹೋಗೋ ಮುನ್ನ
ಪ್ರೇಮ ಪಾನ ಧನ್ಯನೇ ।।
Youtube Link :
ಓ ! ತ್ರಿಶಿತ ಚಂಚರೀಕ
ಬಾರ ಹೃದಯ ಪುಂಡರೀಕ
ನಿನ್ನನರಳಿ ಕಾದಿದೆ ।
ಎದೆಯ ತುಂಬ ಮಧುವನಿಟ್ಟು
ದಾರಿಯೆಡೆಗೆ ದಿಟ್ಟಿ ಇಟ್ಟು
ಬಯಸಿ ನೋಡಿ ಕಾದಿದೆ ।।
ಉದಯಾಚಲದಲ್ಲಿ ರವಿ
ಬರುವ ಚಿಹ್ನೆ ಅರುಣ ಚವಿ
ಓಕುಳಿಯನೇ ಚಲ್ಲಿದೆ ।
ಸರೋವರದ ಸಲಿಲ ಮುಖಕೆ
ಪ್ರಿಯ ಜನರ ಪ್ರೇಮ ಸುಖಕೆ
ಓಕುಳಿಯನೇ ಚೆಲ್ಲಿದೆ ।।
ಮೂಡನೆಲರು ತೀಡುತಿದೆ
ಕೆರೆಯ ನೀರು ನಡುಗುತಿದೆ
ಹೂಬಟ್ಟಲು ಬಳುಕಿದೆ ।
ಮಧುಬಾರಕೆ ಪದುಮ ಪಾತ್ರೆ
ಪೂರ್ವ ಪಶ್ಚಿಮಕ್ಕೆ ಯಾತ್ರೆ
ಮಕರಂದವು ತುಳುಕಿದೆ ।।
ಬಾರಬೇಗ ಚಂಚರೀಕ
ಬಾರಹೃದಯ ಪುಂಡರೀಕ
ಹಂಬಲಿಸಿದೆ ನಿನ್ನನೇ ।
ಬೇಗ ಹಿಂಡಿ ಹೀರು ನನ್ನ
ಜೇನು ಸೋರಿ ಹೋಗೋ ಮುನ್ನ
ಪ್ರೇಮ ಪಾನ ಧನ್ಯನೇ ।।
Youtube Link :
No comments :
Post a Comment