ಮೌನ ತಬ್ಬಿತು ನೆಲವ
ರಚನೆ :ಗೋಪಾಲಕೃಷ್ಣ ಅಡಿಗ
ಗಾಯನ: ಸಿ . ಅಶ್ವಥ್
ಮೌನ ತಬ್ಬಿತು ನೆಲವ ಚುಂಬನೆ ಪುಳಕಗೊಂಡಿತು ಧಾರಿಣಿ ।
ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ ।। ಮೌನ।।
ಹಕ್ಕಿಕೊರಳಿನ ಸುರತ ಗಾನಕೆ ಬಿಗಿಯು ನಸುವೆ ಸಡಿಲಿತು ।
ಬೆಚ್ಚ ಬೆಚ್ಚನೆ ಉಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ।।ಮೌನ ।।
ಇರುಳ ಸೆರಗಿನ ನೆಳಲು ಚಾಚಿತು ಬಾನು ತೆರೆಯಿತು ಕಣ್ಣನ್ನು ।
ನೆಲವು ತಣಿಯಿತು ಬೆವರು ಹನಿಯಿತು ಬಾಷ್ಪ ನೆನೆಸಿತು ಹುಲ್ಲನು ।।ಮೌನ ।।
ಮೌನ ಉರುಳಿತು ಹೊರಳಿ ತೆದ್ದಿತು ಗಾಳಿ ಭೋರನೆ ಬೀಸಿತು ।
ತೆಂಗು ಗರಿಗಳ ಚಾಮರಕೆ ಹಾ ! ಎಂದು ಮೌನವು ಮಲಗಿತು ।।ಮೌನ ।।
Youtube Link :

No comments :
Post a Comment