ನನ್ನೊಳು ನಾ.. ನಿನ್ನೊಳು ನೀ ...
ಒಲಿವ ಮುಂತಿಂತೆ ನಾ ... ನೀ ..
ನಿನ್ನೊಳು ನಾ... ನನ್ನೊಳು ನೀ ...
ಒಲಿದ ಮೇಲಿಂತೆ ನಾ ... ನೀ ...
ಇದೇ ಒಲವಿನ ಸ ರಿ ಗ ಮ ಪ ದ ನಿ ..... ।। (ಪ )
(ನನ್ನೊಳು )
ಚೆಲುವು ಮುನ್ನ ಹೊಳಲಿಟ್ಟಿತು ನನ್ನ
ಇಂದು ಚೆಲುವು ಹೊಳಲಿಡುವುದು ನಿನ್ನ ..... ಆ .. ಆ
ಬಯಕೆ ನಾ.. ಸಲಿಕೆ ನೀ ...
ಒಲಿದ ಮೇಲಿಂತೆ ನಾ... ನೀ ...
ಇದೇ ಒಲವಿನ ಸ ರಿ ಗ ಮ ಪ ದ ನಿ .......।।
(ನನ್ನೊಳು )
ಒಲಿವ ಮುನ್ನ ಜಗಕೆಲ್ಲಕೂ ನಾ...
ಒಲಿದ ಮೇಲೆ ಜಗಕೆಲ್ಲಕೂ ನೀ ... ಆ ... ಆ
ಹಿನ್ನಲೆ ನಾ... ಮುನ್ನಲೆ ನೀ ...
ಒಲಿದ ಮೇಲಿಂತೆ ನಾ ... ನೀ ...
ಇದೇ ಒಲವಿನ ಸ ರಿ ಗ ಮ ಪ ದ ನಿ .... ।।
(ನನ್ನೊಳು )
Youtube -
No comments :
Post a Comment