ದೇವರನಾಮ: ರೊಕ್ಕ ಎರಡಕ್ಕು
ರಚನೆ: ಶ್ರೀ ಪುರಂದರ ದಾಸರು
ರಾಗ: ಪಂತುವರಾಳಿ
ತಾಳ: ಆಟ
ರೊಕ್ಕ ಎರಡಕ್ಕು ದುಃಖ ಕಾಣಕ್ಕ ||ಪ||
ರಚನೆ: ಶ್ರೀ ಪುರಂದರ ದಾಸರು
ರಾಗ: ಪಂತುವರಾಳಿ
ತಾಳ: ಆಟ
ರೊಕ್ಕ ಎರಡಕ್ಕು ದುಃಖ ಕಾಣಕ್ಕ ||ಪ||
ಮಕ್ಕಳ ಮರಿಗಳ ಮಾಡೋದು ರೊಕ್ಕ |
ಸಕ್ಕರೆ ತುಪ್ಪವ ಸವಿಸೋದು ರೊಕ್ಕ |
ಕಕ್ಕುಲತೆಯನು ಬಿಡಿಸೋದು ರೊಕ್ಕ |
ಘಕ್ಕನೆ ಹೋದರೆ ಘಾತಕ ಕಾಣಕ್ಕ।। ||೧||
ನೆಂಟರ ಇಷ್ಟರ ಮರೆಸೋದು ರೊಕ್ಕ |
ಕಂಟಕಗಳ ಪರಿಹರಿಸೋದು ರೊಕ್ಕ ||
ಗಂಟು ಕಟ್ಟಲಿಕ್ಕೆ ಕಲಿಸೋದು ರೊಕ್ಕ |
ತುಂಟತನಗಳ ಬಲಿಸೋದು ರೊಕ್ಕ ।। ||೨||
ಇಲ್ಲದ ಗುಣಗಳ ತರಿಸೋದು ರೊಕ್ಕ |
ಸಲ್ಲದ ನಾಣ್ಯವ ನಡಿಸೋದು ರೊಕ್ಕ ।।
ಬೆಲ್ಲಕಿಂತಲೂ ಬಹು ಸವಿಯಾದ ರೊಕ್ಕ |
ಇಲ್ಲದಿರಲು ಬಹು ದುಃಖ ಕಾಣಕ್ಕ ।। ||೩||
ಉಂಟಾದ ಗುಣಗಳ ಮರೆಸೋದು ರೊಕ್ಕ |
ಬಂಟರನೆಲ್ಲರ ಬರಿಸೋದು ರೊಕ್ಕ ||
ಕಂಠಿ ಸರಿಗೆಯನ್ನು ಗಳಿಸೋದು ರೊಕ್ಕ |
ಒಂಟೆ ಕುದುರೆ ಆನೆ ತರಿಸೋದು ರೊಕ್ಕ।। ||೪||
ವಿದ್ಯವ ಮನುಜರ ಕಲೆಸೋದು ರೊಕ್ಕ |
ಹೊದ್ದಿದ ಜನರನು ಬಿಡಿಸೋದು ರೊಕ್ಕ ||
ಮುದ್ದು ಪುರಂದರ ವಿಠಲನ ಮರೆಸುವ |
ಬಿದ್ಹೋಗೋ ರೊಕ್ಕವ ಸುಡು ನೀನಕ್ಕ ।। ||೫||
ಪುರಂದರ ದಾಸರು ಅಂದು ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಸಾಮಾನ್ಯ ಜನರಿಗೆ ರೊಕ್ಕದ ಮಹತ್ವ ಸರಳ ಭಾಷೆಯಲ್ಲಿ ಅರ್ಥ ಮಾಡಿಸಿದರು . ಕಾಲ ಕಳೆದಂತೆ ಹಲವಾರು ಗಾಯಕರು ದಾಸರು ರಚನೆ ಮಾಡಿದ ಹಾಡುಗಳನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಿ ಜನರನ್ನು ರಂಜಿಸಿದ್ದಾರೆ . ಈಗ ಶ್ರೀಮತಿ . ಪಲ್ಲವಿ ಅರುಣ್ ರವರು ಹೊಸ ಶೈಲಿಯಲ್ಲಿ ದೇವರನಾಮವನ್ನು ಈಗಿನ ಯುವ ಪೀಳಿಗೆಗೆ ಇಷ್ಟವಾಗುವಂತೆ ಹಾಡಿದ್ದಾರೆ .

Youtube -
No comments :
Post a Comment