Pages

Tuesday, September 17, 2013

AnantaChaturdashi Vrata In Kannada

ಈ ವ್ರತವನ್ನು ಭಾದ್ರಪದ ಶುಕ್ಲ ಚತುರ್ದಶಿ ದಿನ  ಆಚರಿಸಬೇಕು . ಸೂರ್ಯೋದಯ ಕಾಲದಲ್ಲಿ ಚತುರ್ದಶಿಯೂ ಒಂದು ಘಳಿಗೆ ಇದ್ದರೂ ಈ ದಿನವೇ ವ್ರತ ಮಾಡಬೇಕು . ಹಿಂದಿನ ದಿನ ಚತುರ್ದಶಿ ಇದ್ದರೂ ಪರದಿನದಲ್ಲೇ ಮಾಡತಕ್ಕದ್ದು ,ಎರಡೂ  ದಿನಗಳಲ್ಲಿ ಸೂರ್ಯೋದಯಕ್ಕೆ ಚತುರ್ದಶಿಯಿದ್ದರೂ  ಮುಂದಿನ ದಿನವೇ ವ್ರತಾಚರಣೆ ಶ್ರೇಷ್ಠ . ಕೆಲವರು ಎರಡು ಕಲಶವನ್ನಿಟ್ಟು  ಪೂಜಿಸುತ್ತಾರೆ . ಕೆಲವರು ಒಂದೇ ಕಲಶವನ್ನಿಟ್ಟು  ಪೂಜಿಸುವ ಪದ್ಧತ್ತಿಯೂ ಇದೆ . ಅವರವರ ಪದ್ಧತಿ ಪ್ರಕಾರ ನಡೆದುಕೊಳ್ಳಬಹುದು . ಏಳು ಧರ್ಭೆಗಳ ತುದಿಗೆ ಗಂಟು ಹಾಕಿ ಹೆಡೆಯಂತೆ ಮಾಡಿ ಕಲಶದ  ಹತ್ತಿರ ಇಡಬೇಕು . ಎರಡು ಕಲಶ ಇಟ್ಟವರು  ಧರ್ಭೆಯ ಸರ್ಪವನ್ನು ಎರಡು ಕಲಶಗಳ ಮಧ್ಯೆ ಇರಿಸಬೇಕು . ಅನಂತನ ಚಿತ್ರ ಮುದ್ರಿಸಿರುವ ಬಿಳಿವಸ್ತ್ರವನ್ನು  ಕಲಶದ  ಮೇಲೆ ಹಾಸಿ ಅದರ ಮೇಲೆ ತೆಂಗಿನಕಾಯಿಯನ್ನು ಇರಿಸಬೇಕು . ಮೊದಲು ಯಮುನಾ ಪೂಜೆಯನ್ನು  ಮಾಡಿ ಆ ನೀರನ್ನು ಕಲಶದೊಳಕ್ಕೆ  ಹಾಕಿ ಪೂಜಿಸಬೇಕು . ಯಮುನಾ ಪೂಜೆಯನ್ನು ತುಳಸಿ ಕಟ್ಟೆಯ  ಬಳಿ ಮಾಡಿ ನಂತರ ಆ ಕಲಶದ  ನೀರನ್ನು ಅನಂತನ ಕಳಶಗಳಿಗೆ ಹಾಕಬೇಕು .

ಅಥ ವ್ರತವಿಧಾನಂ

ಭೋ ದೀಪದೇವೀ  ರೂಪಸ್ತ್ವಂ ಕರ್ಮಸಾಕ್ಷೀ  ಹ್ಯ ವಿಘ್ನಕೃತ್ ।
ಯಾವತ್ಪೂಜಾ ಸಮಾಪ್ತಿಸ್ಯಾತ್ ತಾವತ್ವಂ ಸುಸ್ಥಿರೋ  ಭವ ।।

ಇತಿ ದೀಪಂ  ಪ್ರಜ್ವಾಲ್ಯ ।ದೀಪಂ ನಮಸ್ಕೃತ್ಯ ।ದೀಪಗಳನ್ನು ಬೆಳಗಿ ನಮಸ್ಕರಿಸುವುದು .

ಕರ್ತಾ ಆಚಮ್ಯ ।ವ್ರತವನ್ನು ಆಚರಿಸುವವರು ಆಚಮನ ಮಾಡುವುದು .

ಆಗಮಾರ್ಥಂ  ತು  ದೇವಾನಾಂ  ಗಮನಾರ್ಥಂ ತು ರಕ್ಷಸಾಮ್ ।
ಕುರ್ವೇ  ಘಂಟಾರವಂ  ತತ್ರ ದೇವತಾಹ್ವಾನಲಾಂಛನಮ್ ।।

ಇತಿ ಘಂಟನಾದಂ  ಕೃತ್ವಾ । ಘಂಟೆಯನ್ನು  ಬಾರಿಸುವುದು .

ಶುಕ್ಲಾಂಬರಧರಂ  ವಿಷ್ಣುಂ ಶಶಿವರ್ಣಂ ಚತುರ್ಭುಜಂ ।
ಪ್ರಸನ್ನವದನಮ್  ಧ್ಯಾಯೇತ್  ಸರ್ವವಿಘ್ನೋಪಶಾಂತಯೇ ।।

ಅಭೀಪ್ಸಿತಾರ್ಥ ಸಿದ್ದ್ಯರ್ಥಂ ಪೂಜಿತೋ ಯಸ್ಸುರೈರಪಿ ।
ಸರ್ವವಿಘ್ನಚ್ಛಿದೇ  ತಸ್ಮೈ ಗಣಾಧಿಪತೆಯೇ  ನಮಃ ।।

 ಇತಿ ಗಣಪತಿಂ ಧ್ಯಾತ್ವಾ । ಗಣಪತಿಗೆ  ಕೈ ಮುಗಿಯುವುದು .

ಓಂ  ವಿಷ್ಣು ಶಕ್ತಿ  ಸಮೋಪೇತೇ  ಸರ್ವವರ್ಣೇ  ಮಹೀತಲೇ ।
ಅನೇಕ  ರತ್ನಸಂಭೂತೇ  ಭೂಮಿದೇವಿ  ನಮೋಸ್ತುತೇ ।।

ಇತಿ ಭೂಮಿಂ ಸ್ಫೃಷ್ಟ್ವಾ  ಸಂಪ್ರಾರ್ಥ್ಯ ।। ಕುಳಿತಿರುವ  ಪೀಠದ ಕೆಳಗೆ  ಭೂಮಿಯನ್ನು ಮುಟ್ಟಿ  ಕೈಗಳನ್ನು ಜೋಡಿಸಿ ಪ್ರಾರ್ಥಿಸಿಕೊಳ್ಳುವುದು .

ಪೃಥ್ವಿ ತ್ವಯಾ ಧೃತಾ ಲೋಕಾಃ  ದೇವಿ ತ್ವಂ ವಿಷ್ಣುನಾ  ಧೃತಾ ।
ತ್ವಂ ಚ ಧಾರಯ  ಮಾಂ  ದೇವಿ ಪವಿತ್ರಂ ಕುರು ಚಾಸನಂ ।।

ಓಂ ಆಸನಾಯ ನಮಃ ।ಓಂ ಅನಂತಾಸನಾಯ  ನಮಃ ।ಓಂ ಕೂರ್ಮಾಸನಾಯ  ನಮಃ ।ಓಂ ವಿಮಲಾಸನಾಯ ನಮಃ ।ಓಂ ಕಮಲಾಸನಾಯ ನಮಃ ।ಓಂ ಮಧ್ಯೇ  ಶ್ರೀ ಪರಮಸುಖಾಸನಾಯ ನಮಃ ।ಓಂ ಭೂಭು೯ವಸ್ಸುವಃ ।ಇತ್ಯಾಸನೇ  ಉಪವಿಶ್ಯ ।। ಆಸನದಲ್ಲಿ ಕುಳಿತುಕೊಳ್ಳುವುದು .

ಸಂಕಲ್ಪ :

ಯಮುನಾ ಪೂಜೆಗಾಗಿ ಮಾಡುವುದು . (ಸಂಕಲ್ಪ ವಿಧಾನವನ್ನು  ವರಮಹಾಲಕ್ಷ್ಮೀ  ವ್ರತದಲ್ಲಿ ವಿವರಿಸಲಾಗಿದೆ )

ತದಂಗ ಕಲಶಪೂಜಾಂ  ಶಂಖಪೂಜಾಂ ಚ ಕರಿಷ್ಯೇ ।

ಯಮುನಾ ಕಲಶಕ್ಕೆ ಪೂಜೆ -

(ಯಮುನಾ ಕಲಶದ ಪೂಜೆಯ  ವಿವರಣೆಯನ್ನು ವರಮಹಾಲಕ್ಷ್ಮೀ ವ್ರತದಲ್ಲಿ ಉಲ್ಲೇಖಿಸಿದೆ  ಅದನ್ನು ನೋಡಿ ಯಮುನಾ ಪೂಜೆಯನ್ನು ಮಾಡತಕ್ಕದ್ದು ).

ಶ್ರೀ ಅನಂತಪದ್ಮನಾಭಸ್ವಾಮಿ ವ್ರತ ವಿಧಾನ

ಭೋ ದೀಪದೇವೀ  ರೂಪಸ್ತ್ವಂ ಕರ್ಮಸಾಕ್ಷೀ  ಹ್ಯ ವಿಘ್ನಕೃತ್ ।
ಯಾವತ್ಪೂಜಾ ಸಮಾಪ್ತಿಸ್ಯಾತ್ ತಾವತ್ವಂ ಸುಸ್ಥಿರೋ  ಭವ ।।

ಇತಿ ದೀಪಂ ಪ್ರಜ್ವಾಲ್ಯ ।ದೀಪಂ ನಮಸ್ಕೃತ್ಯ ।ದೀಪಗಳನ್ನು ಬೆಳಗಿ ನಮಸ್ಕರಿಸುವುದು .

ಆಗಮಾರ್ಥಂ  ತು  ದೇವಾನಾಂ  ಗಮನಾರ್ಥಂ ತು ರಕ್ಷಸಾಮ್ ।
ಕುರ್ವೇ  ಘಂಟಾರವಂ  ತತ್ರ ದೇವತಾಹ್ವಾನಲಾಂಛನಮ್ ।।

ಇತಿ ಘಂಟನಾದಂ  ಕೃತ್ವಾ । ಘಂಟೆಯನ್ನು  ಬಾರಿಸುವುದು .

ಶುಕ್ಲಾಂಬರಧರಂ  ವಿಷ್ಣುಂ ಶಶಿವರ್ಣಂ ಚತುರ್ಭುಜಂ ।
ಪ್ರಸನ್ನವದನಮ್  ಧ್ಯಾಯೇತ್  ಸರ್ವವಿಘ್ನೋಪಶಾಂತಯೇ ।।

ಅಭೀಪ್ಸಿತಾರ್ಥ ಸಿದ್ದ್ಯರ್ಥಂ ಪೂಜಿತೋ ಯಸ್ಸುರೈರಪಿ ।
ಸರ್ವವಿಘ್ನಚ್ಛಿದೇ  ತಸ್ಮೈ ಗಣಾಧಿಪತೆಯೇ  ನಮಃ ।।

ಇತಿ ಗಣಪತಿಂ ಧ್ಯಾತ್ವಾ । ಈ ರೀತಿ ಗಣಪತಿಯನ್ನು ಪ್ರಾರ್ಥಿಸಿರಿ .

ಓಂ  ವಿಷ್ಣು ಶಕ್ತಿ  ಸಮೋಪೇತೇ  ಸರ್ವವರ್ಣೇ  ಮಹೀತಲೇ ।
ಅನೇಕ  ರತ್ನಸಂಭೂತೇ  ಭೂಮಿದೇವಿ  ನಮೋಸ್ತುತೇ ।।

ಇತಿ  ಭೂಮಿಂ  ಸ್ಫೃಷ್ಟ್ವಾ  ಸಂಪ್ರಾರ್ಥ್ಯ ।। ಕುಳಿತಿರುವ  ಪೀಠದ ಕೆಳಗೆ  ಭೂಮಿಯನ್ನು ಮುಟ್ಟಿ  ಕೈಗಳನ್ನು ಜೋಡಿಸಿ ಪ್ರಾರ್ಥಿಸಿಕೊಳ್ಳುವುದು .

ಪೃಥ್ವಿ ತ್ವಯಾ ಧೃತಾ ಲೋಕಾಃ  ದೇವಿ ತ್ವಂ ವಿಷ್ಣುನಾ  ಧೃತಾ ।
ತ್ವಂ ಚ ಧಾರಯ  ಮಾಂ  ದೇವಿ ಪವಿತ್ರಂ ಕುರು ಚಾಸನಂ ।।

ಓಂ ಆಸನಾಯ ನಮಃ ।ಓಂ ಅನಂತಾಸನಾಯ  ನಮಃ ।ಓಂ ಕೂರ್ಮಾಸನಾಯ  ನಮಃ ।ಓಂ ವಿಮಲಾಸನಾಯ ನಮಃ ।ಓಂ ಕಮಲಾಸನಾಯ ನಮಃ ।ಓಂ ಮಧ್ಯೇ  ಶ್ರೀ ಪರಮಸುಖಾಸನಾಯ ನಮಃ ।ಓಂ ಭೂಭು೯ವಸ್ಸುವಃ ।ಇತ್ಯಾಸನೇ  ಉಪವಿಶ್ಯ ।। ಆಸನದಲ್ಲಿ ಕುಳಿತುಕೊಳ್ಳುವುದು .

ಸಂಕಲ್ಪ :
ಶುಭೇ  ಶೋಭನೇ ....... ಪೂಜಾಂ ಕರಿಷ್ಯೇ ।।

ಕಲಶ ಪೂಜಾಂ :
ಕಲಶ ಪೂಜೆಯನ್ನು ಮಾಡಿ ತದನಂತರ  ಶಂಖಾರ್ಚನೆ ಪೂಜೆ ಮಾಡಲು ಈ ಕೆಳಕಂಡ  ಲಿಪಿಯನ್ನು ನೋಡಿ -

Anantachaturdashi vrata vidhanam

Anantapadmanabha Swamy Vrata Katha
 
No comments :

Post a Comment