Pages

Saturday, September 7, 2013

Sri Swarna Gowri Vrata




                    ಶ್ರೀ ಸ್ವರ್ಣ ಗೌರಿ ವ್ರತ  ಹೆಸರೇ ಸೂಚಿಸುವಂತೆ  ಸ್ವರ್ಣ ಅಂದರೆ ಬಂಗಾರ ; ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ  ಗೌರಿ  ಎಂದು ಅರ್ಥ.  ಅಂತಹ  ಜಗನ್ಮಾತೆಯಾದ ಗೌರಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷ  ತೃತೀಯ ತಿಥಿಯಂದು  ಷೋಡಶೋಪಚಾರದಿಂದ ಪೂಜಿಸಬೇಕು .ಈ ಹಬ್ಬವನ್ನು ಹೆಣ್ಣುಮಕ್ಕಳು ಮುತ್ತೈದೆಯರು  ಪ್ರಾಚೀನ ಕಾಲದಿಂದಲೂ  ಆಚರಿಸುತ್ತಾ  ಬಂದಿದ್ದಾರೆ .

                           ಈ ಹಬ್ಬದ ಆಚರಣೆಯ ರೀತಿ ಹೀಗಿದೆ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು  ಪಾಡ್ಯ   ತಿಥಿಯಂದು  ಅಭ್ಯಂಜನ ಮಾಡಿ , ಮೊರದ ಬಾಗಿನಕ್ಕೆ ಅಣಿಯಾದ  ಮೊರವನ್ನು ಶುಭ್ರಗೊಳಿಸಿ  ಅದಕ್ಕೆ ಅರಿಶಿನ,ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು ,ತೆಂಗಿನಕಾಯಿ,ಬಳೆಬಿಚ್ಚೋಲೆ,ಕನ್ನಡಿ ,ಬಳೆಗಳು ,೫ ಬಗೆಯ ಹಣ್ಣುಗಳು ,ರವಿಕೆ ಕಣ ,ತಾಯಿಗೆ ಹಾಗೆ ಅತ್ತಿಗೆ ,ನಾದಿನಿಯರಿಗೆ  ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು  (ಯಥಾ ಶಕ್ತಿ ಏನಾದರು ಕೊಡಬಹುದು ) ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು .ನಂತರ ಮನೆಯನ್ನು ಶುಚಿಗೊಳಿಸಿ  ರಂಗವಲ್ಲಿ ಹಾಕಿ ,ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,ಗೌರಿ ಮೂರ್ತಿಯನ್ನು ಶೃಂಗರಿಸಿ ,ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು  ಅಲಂಕರಿಸಬೇಕು . ಪತ್ರೆಗಳನ್ನು ,ಹೂವುಗಳನ್ನು ,ಹೂವಿನ ಮಾಲೆಗಳನ್ನು ಕಟ್ಟಿ , ೫ ತೆಂಗಿನಕಾಯಿ  ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ,ಚಂದನ,ಅಡಿಕೆ,ದಶಾಂಗಂ ,೫ ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ,ಗೆಜ್ಜೆವಸ್ತ್ರಗಳು ,೧೬ ಎಳೆಯ ಗೆಜ್ಜೆವಸ್ತ್ರ ಹಾಗೆ ೧೬ ಎಳೆ  ದೋರ  ಗ್ರಂಥಿಗಳನ್ನು ತಯಾರಿಸಬೇಕು ಅದಕ್ಕೆ ೧೬ ಗಂಟನ್ನು ಹಾಕಿ ದೋರವನ್ನು ಸಿದ್ಧ ಪಡಿಸಬೇಕು . ಪಂಚಾಮೃತ ಅಭಿಷೇಕ ,ಮಧುಪರ್ಕ ,ಮಂಗಳಾರತಿ ಬತ್ತಿಗಳು . ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ ೨ ತೆಂಗಿನಕಾಯಿಗಳು  ನಾಲ್ಕು ವಿಳ್ಳೆ ದೆಲೆ ,ಅಡಿಕೆಗಳು ,ದಕ್ಷಿಣೆ,  ಸ್ವಲ್ಪ ಅಕ್ಕಿ ಅದನ್ನು  ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ  ಉಪಯೋಗಿಸಬೇಕು  .

   ಕಲಶದ  ವಿಧಾನ :
                                                                                                                                                             ಇನ್ನು ಕೆಲವರು  ಮರಳಗೌರಿಯನ್ನು ,ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ . ಅವರವರ ಸಂಪ್ರದಾಯದಂತೆ  ಜಗನ್ಮಾತೆಯನ್ನು ಸ್ಥಾಪಿಸಿ  ಪೂಜೆ ಮಾಡಬೇಕು . ಹಾಗೆಯೇ ಕಲಶದಲ್ಲಿ ಗಂಗೆಯನ್ನು ಅದಕ್ಕೆ ೫ ವಿಳ್ಳೆದೆಲೆಯನ್ನು ಇಟ್ಟು  ಹಾಗೆ ಯಾವುದಾದರು ಹಣ್ಣನ್ನು ಕಳಸದಲಿ ಇಡಬೇಕು ಕಲಶದ  ಸುತ್ತ ಬಿಳಿ ಸುಣ್ಣ  ಹಚ್ಚಿ
ಅದಕ್ಕೆ ೪ ಕಡೆ  ಅರಿಶಿನ ಕುಂಕುಮ ಹಚ್ಚಬೇಕು . ಒಂದು ತಟ್ಟೆಯಲ್ಲಿ ಹಳದಿ ( ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು ) ವಸ್ತ್ರವನ್ನು ಹಾಸಿ , ಎರೆಡು  ವಿಳ್ಳೆದೆಲೆಯ   ಜೊತೆ ಎರೆಡು  ಬಟ್ಳಡಿಕೆ ಇಟ್ಟು  ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು  ಜೊತೆಯಲ್ಲಿ ಸಿದ್ಧಪಡಿಸಿದ    ಕಲಶವನ್ನು    ಸ್ಥಾಪನೆ ಮಾಡಬೇಕು .

                     ಇನ್ನು ಉಪ್ಪಕ್ಕಿ ಇಡುವ  ಸಂಪ್ರದಾಯವಿದ್ದರೆ   ತೊಗರಿಬೇಳೆ ಮತ್ತೆ ಅಕ್ಕಿಯನ್ನು   ಬಳಸಿ ೩ ಬಾರಿ ಈ ಕೆಳಕಂಡ  ಮಂತ್ರದಿಂದ  ಉಪ್ಪಕ್ಕಿ ಇಡಬೇಕು - " ಅತ್ತೆ ಆಜ್ಞೆ ಇರಲಿ ,ಮಾವನ ಆಜ್ಞೆ ಇರಲಿ ,ಗಂಡನ ಆಜ್ಞೆ ಇರಲಿ ಸ್ವರ್ಗಕ್ಕೆ ಹೋದರು ಸವತಿ ಕಾಟ  ಬೇಡ ( ಇಲ್ಲದಿರಲಿ )".

                      ಮೊರದ  ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು  ಶ್ರದ್ಧಾಪೂರ್ವಕವಾಗಿ ಹೇಳಿ  ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು  ಹೇಳಿಕೆಯಿದೆ .

"ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ  ಮಯಾದತ್ತಾಣಿ ಸೂರ್ಪಾಣಿ  ಗೃಹಾಣೇಮಾನಿ  ಜಾನಕಿ '.


                     ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು . ಅದಕ್ಕೆ ಬೇಕಾಗುವ ಸಾಮಾಗ್ರಿಗಳು : ತೆಂಗಿನಕಾಯಿ,(ತೆಂಗಿನಕಾಯಿ ಇಲ್ಲದಿದ್ದಲ್ಲಿ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ )ಬೆಲ್ಲದಚ್ಚು ,ಬಳೆ  ಬಿಚ್ಚೋಲೆ , ವಿಳ್ಳೆ ದೆಲೆಗಳು ,ಅಡಿಕೆಗಳು,ದಕ್ಷಿಣೆ,ಸೀರೆ ,ಎರೆಡು ರವಿಕೆ ಕಣಗಳು ,ಹಣ್ಣುಗಳಾದ  ದಾಳಿಂಬೆ ,ಛೇಪೆ ಹಣ್ಣು ,ಸೀತಾ ಫಲ ,ಸಪೋಟ ,ಮೂಸಂಬಿ ,ಕಿತ್ತಳೆ ಫಲ . ನಂತರ ಮಂಗಳಾರತಿ ಮಾಡಿ  ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು . ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ  ಸೇವಿಸಬೇಕು .



 ಶ್ರೀ ಸ್ವರ್ಣಗೌರಿ ವ್ರತ ಮತ್ತು ಕಥಾ ಶ್ರವಣ -

http://www.kannadaaudio.com/Songs/Devotional/home/SwarnaGowriVratha.php

ಗೌರಿ ಪೂಜೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ :

Gowri Pooje Vaishistya By Purandara Acharya Hayagreeva

2 comments :

  1. "ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತೇ ನಿರಾಮುಖಿ ಮಯಾ ದತ್ತಾನಿ ಶೂರ್ಪಾಣಿ ಗೃಹಾಣೇಮಾನಿ ಜಾನಕಿ!

    ReplyDelete