Pages

Sunday, September 1, 2013

Govinda Salahennanu

ರಚನೆ : ಕನಕದಾಸರು
ರಾಗ :ನಾದನಾಮಕ್ರಿಯ
ತಾಳ : ಛಾಪು






ಗೋವಿಂದ ಸಲಹೆನ್ನನು
ಸದಾನಂದಾ  ಗೋವಿಂದ ಸಲಹೆನ್ನನು ।।ಪ॥


ಗೋವಿಂದ ಸಲಹೆನ್ನ  ಕುಮುದ ಲೋಚನ
ನಿನ್ನ  ಸೇವಕರಡಿಯ  ಸೇವಕನಯ್ಯ  ಹರಿಯೇ ।।ಅ.ಪ ।।

ತಮನ ಸಂಹರಿಸಿ  ವೇದವ  ತಂದೆ ಗೋವಿಂದ
ಅಮರರಿಗೆ  ಒಲಿದು  ಅಮೃತವನಿತ್ತೆ  ಗೋವಿಂದ
ರಮಣಿಯ  ತಂದೆ ವರಹ  ರೂಪಿ ಗೋವಿಂದ
ಭ್ರಮಿಸಿ ಕಂಭದೊಳು  ಉದ್ಭವಿಸಿದೆ ಗೋವಿಂದ
ಕ್ಷಮೆಯನೆಳೆಯ  ಬ್ರಹ್ಮಚಾರಿ  ಆದೆ ಗೋವಿಂದ
ಸಮರದಲ್  ಅಖಿಲ ರಾಜರ  ಕೊಂದೆ  ಗೋವಿಂದ
ಕಮಲಾಕ್ಷ  ಕಡಲ ಕಟ್ಟಿದ  ದಿಟ್ಟ ಗೋವಿಂದ
ಮಮತೆಯೊಳ್  ಇಳೆಯ  ಗೋಗಳ  ಕಾಯ್ದೆ  ಗೋವಿಂದ
ರಮಣಿಯರಿಗೆ  ಒಲಿದು  ಬತ್ತಲೆ  ನಿಂತೆ  ಗೋವಿಂದ
ಅಮಿತ ವಾಹನ ಗೋವಿಂದ
ನಿಂದಿಪರಿಗೆ  ಶಮನನಂತಿಹ ಗೋವಿಂದ
ಇಂಗಡಲೊಳು  ರಮಿಸಿ ನಿದ್ರಿಪ ಗೋವಿಂದ
ಅರಿಯದಂತೆ  ವಿಮಲ ಜ್ಯೋತಿ ಗೋವಿಂದ
ಅಚ್ಯುತ ಸರ್ವೋತ್ತಮನೇ  ಚಿನ್ಮಯ ಗೋವಿಂದ
ಅಚಲ ಮುಕ್ತಿ  ಕ್ರಮವ ಭೋದಿಪ  ಗೋವಿಂದ
ಸತತ ಕಾಯೋ  ಕಮಲಾಲಿಂಗಿತ  ಗೋವಿಂದ
ಭಕುತಿಯಿಂದ ನಮೋಯೆಂಬೇ  ದಶಾವತಾರದ  ಗೋವಿಂದ ।।೧।।


ನರ  ಬೊಂಬೆಗಳ ಮಾಡಿ ಕುಣಿಸುವೆ ಗೋವಿಂದ
ನರರ  ನೋಡಿ  ನೋಡಿ ನಗುತಿಪ್ಪೆ ಗೋವಿಂದ
ಅರಿಯದಂತಖಿಳದೊಳಗಿಪ್ಪೆ ನೀ ಗೋವಿಂದ
ಪರಮ ಪಾವನನೆಂಬ ಬಿರುದುಳ್ಳ  ಗೋವಿಂದ
ಪರಮಾತ್ಮ  ಕರಿಯ ಮೇಘವ ಪೋಲ್ವ  ಗೋವಿಂದ
ಪರಮ ಪುರುಷೋತ್ತಮ  ನೀನೇ  ಗೋವಿಂದ
ಕರಿರಾಜ ಕರಿಯಲದಹಿ  ಬಂದೆ ಗೋವಿಂದ
ಮೊರೆ   ಹೊಕ್ಕ  ಭಕುತರ ಸಲಹೋದೆ  ಗೋವಿಂದ
ಅರಿಯನು ನಾನು  ನಿನ್ನವನೈಯ್ಯ ಗೋವಿಂದ
ಗರುಡ ವಾಹನ ಗೋವಿಂದ
ನಿನ್ನರಸಿಯು  ಅರಿಯದಂತಿಹೆ  ಗೋವಿಂದ
ಸತತ ನಿನ್ನ  ಸ್ಮರಣೆಗೈವೆನೋ  ಗೋವಿಂದ
ಸಾಸಿರ ಕೋಟಿ  ಸುರರ ಪೊರೆವ ಗೋವಿಂದ
ಗಂಗೆಯ ಪಡೆದ  ಚರಣ ನಿರ್ಗುಣ  ಗೋವಿಂದ
ಮುಕ್ತಿಯು ನಿನ್ನ ಚರಣವಲ್ಲವೇ  ಗೋವಿಂದ
ಶ್ರೀ ವೈಕುಂಠ  ಪುರದಲ್ಲಿರುವ ಗೋವಿಂದ
ಶರಣು ಸಿರಿ  ವರ ಕಾಗಿನೆಲೆ  ಆದಿಕೇಶವ ಶ್ರೀ ಕೃಷ್ಣ ।।೨।।



Youtube  Link :
Govinda salahennanu sadaananda

 

No comments :

Post a Comment