ಆರತಿ ಬೆಳಗಿರಿ ಮಂಜುನಾಥನಿಗೆ
ಆರತಿ ಬೆಳಗಿರಿ ಭಕ್ತಪ್ರೀತನಿಗೆ ।।
ಕಾಮಿತದಾತನಿಗೆ ಪರಮಪುನೀತನಿಗೆ
ಭಾಗ್ಯವಿಧಾತನಿಗೆ ಮಹಿಮೋಪೇತನಿಗೆ ।।
(ಆರತಿ)
ಏಕಾದಶ ರುದ್ರತನಯನಿಗೆ ಏಕರೂಪದಲಿ ಮೆರವವಗೆ
ಏಕಾಂಬರದಾತನಾದವಗೆ ಏಕಾರತಿಯನು ಬೆಳಗಿರಿ ।।
(ಆರತಿ)
ಮೂರು ಕಣ್ಣುಗಳು ಉಳ್ಳವಗೆ ಮೂರು ಲೋಕಗಳ ಪೊರೆವವಗೆ
ಮೂರು ಮೂರ್ತಿಗಳ ಮೊದಲವಗೆ ಮೂರು ಗುಣಗಳ ಗೆದ್ದವಗೆ (೨)
ಮೂರಾರತಿಯನು ಬೆಳಗಿರಿ ।।
(ಆರತಿ )
ಪಂಚಾಕ್ಷರಿಯ ಒಡೆಯನಿಗೆ ಪಂಚಮುಖಗಳು ಇರುವವಗೆ
ಪಂಚಭೂತಗಳ ನಾಥನಿಗೆ ಪಂಚಬಾಣ ಮೊಗ ನಕ್ಷನಿಗೆ
ಪಂಚಾರತಿಯನು ಬೆಳಗಿರಿ ।।
(ಆರತಿ)
ಧರ್ಮಸ್ಥಳದ ಏಕನಿಗೆ ಧರ್ಮರಕ್ಷಣಾಧೀಶನಿಗೆ
ಭಕ್ತರ ಹೃದಯದಿ ಇರುವವಗೆ ಮಂಜುನಾಥನಿಗೆ
ಮುದದಿಂದ ಮಂಗಳಾರತಿಯನು ಬೆಳಗಿರಿ ।।
(ಆರತಿ)
Audio Link :
Aarati belagiri_hungama
No comments :
Post a Comment