ಬಿಡೆನು ಬಿಡೆನು ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ...
ಬಿಡೆನು ಬಿಡೆನು ನಿನ್ನಾ ..... ।।ಪ।।
ಬಲಿಯ ದಾನವ ಬೇಡಿ ಅಳೆಯೇ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೇ
ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ ಹರಿಪಾದ ತೀರ್ಥವನು ಕರಹರಿಸಿದನಾಗ ।।೧।।
।।ಪ।।
ಆ ಪತಿ ಶಾಪದಿ ಅಹಲ್ಯೆ ಸಾಸಿಗಯುಗ ಪಾಷಾಣವಾಗುತ್ತಾ ಪಥದೊಳಗಿರಲು
ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು ಪಾಪರಹಿತಳಾಗಿ ಪದವಿ ಕಂಡಳಾಗ । ।।೨।। ।ಪ।।
ವಜ್ರಾಂಕುಶ ಧ್ವಜ ಪದುಮರೇಖೆಗಳಿಂದ ಪ್ರಜ್ವಲಿಸುವ ನಿನ್ನ ಪಾದ ಪದ್ಮವವನು
ಗರ್ಜಿಸಿ ಭಜಿಸುವೆ ಹಯವದನನೇ ಭವ ಜರ್ಜರ ಬಿಡಿಸುವೆನೆಂದು ನಂಬಿದೆನಾಗಿ ।।೩।। ।।ಪ।।
*************************************************************
biDenu biDenu ninna charana kamalava enna hrudaya madhyadoLittu bhajisuve anudina
biDenu biDenu ninnaa.... ||pa||
baliya daanava beDi aLEyE brahmaanDava naLinOdbhava bandu paadava tOLeyE
ugirina kOnEyinda udisidaLa gange haripada teerthavendu karaharisidanaaga ||1|| ||pa||
aa pati shaapadi ahalye saasigayuga paashaanavagutta patadoLagiralu
sripati ninnaya sripada sOkalu paparahitaLaagi padavi kanDaLaaga ||2|| ||pa||
vajraankusha dhwaja padumarEkhegaLinda prajwalisuva ninna paada padmavavanu
garjisi bhajisuve hayavadanane bhava jarjara biDisuvenendu nambidenaagi||3|| ||pa||
Audio Link:
http://Sri+Vidyabhushana/Sankeertana+Sowrabha_song16
No comments :
Post a Comment