ಕೀರ್ತನಕಾರರು : ಗೋಪಾಲದಾಸರು
ದಯವಿರಲಿ ದಯವಿರಲಿ ದಾಮೋದರ (೨) ||ಪ||
ಸಯವಾಗಿ ಬಿಡದೆನ್ನ ಸಾಕು ಶ್ರೀಕ್ರಷ್ಣ ||ಅ.ಪ||
ಹೋಗಿ ಬರುವೆನಯ್ಯ ಹೋದ ಹಾಗೆಲ್ಲ
ಸಾಗುವನಲ್ಲ ನಾ ನಿನ್ನ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲಿ ನಿಲ್ಲುವುದು
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।।೧।। ।।ಪ।।
ಇದ್ದಲ್ಲೇ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ಬಂದವನಲ್ಲ
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ।।೨।। ।।ಪ।।
ಎನಗೆ ಆವುದು ಬಲ್ಲೇ ಎಲ್ಲೆಲ್ಲಿ ಪೋದರು
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೋ
ಚಿನುಮಯ ಮೂರುತಿ ಗೋಪಾಲವಿಠ್ಠಲ
ಘನಕರುಣಿ ಮಧ್ವಮುನಿ ಮಂದಿರನಿವಾಸ ।।ಪ ।। ।।೩।।
Audio Link:
http://Jagodaddarana.php_song5
ದಯವಿರಲಿ ದಯವಿರಲಿ ದಾಮೋದರ (೨) ||ಪ||
ಸಯವಾಗಿ ಬಿಡದೆನ್ನ ಸಾಕು ಶ್ರೀಕ್ರಷ್ಣ ||ಅ.ಪ||
ಹೋಗಿ ಬರುವೆನಯ್ಯ ಹೋದ ಹಾಗೆಲ್ಲ
ಸಾಗುವನಲ್ಲ ನಾ ನಿನ್ನ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲಿ ನಿಲ್ಲುವುದು
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।।೧।। ।।ಪ।।
ಇದ್ದಲ್ಲೇ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ಬಂದವನಲ್ಲ
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ।।೨।। ।।ಪ।।
ಎನಗೆ ಆವುದು ಬಲ್ಲೇ ಎಲ್ಲೆಲ್ಲಿ ಪೋದರು
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೋ
ಚಿನುಮಯ ಮೂರುತಿ ಗೋಪಾಲವಿಠ್ಠಲ
ಘನಕರುಣಿ ಮಧ್ವಮುನಿ ಮಂದಿರನಿವಾಸ ।।ಪ ।। ।।೩।।
Audio Link:
http://Jagodaddarana.php_song5
hare srinivasa. ee Haadu 7 nudigalinda ide. dayavittu poorti madi _/\_
ReplyDelete