ಹೂವ ತನ್ನಿರಿ ಎಲ್ಲರು ಹೂವ ತನ್ನಿರಿ ಪಾದ ಪೂಜೆಯ ಮಾಡೋಣ
ಗುರು ಪಾದ ಪೂಜೆಯ ಮಾಡೋಣ ।।
ತೋಂಟದಾರ್ಯನೆ ಸಲಹು ಯೋಗಿವರ್ಯನೆ ಸಲಹು
ಸಿದ್ಧಲಿಂಗ ಯತಿ....... ನೀನೆ ಎನಗೆ ಗತಿ ರಕ್ಷಿಸೆಂದು ಬೇಡಿಕೊಳ್ಳುತ
ಪಾದ ಪೂಜೆಯ ಮಾಡೋಣ ಗುರು ಪಾದ ಪೂಜೆಯ ಮಾಡೋಣ ।।ಹೂವ।।
ಮನದ ಕಳವಳ ನೀಗುಯೆನ್ನುತ ಮಲ್ಲಿಗೆ ಮಾಲೆ ಹಾಕೋಣ
ಶಾಂತಿ ನೆಮ್ಮದಿ ನೀಡು ಎನ್ನುತ ಶಾವಂತಿಗೆ ಹೂ ಹಾಕೋಣ
ತುಂಬು ಭಕ್ತಿಯ ಹೃದಯದಿ...... ಎನ್ನುತ ತುಂಬೆ ಹೂವನು ಹಾಕೋಣ
ಸೇವೆ ಮಾಡುವ ಭಾಗ್ಯ ಬೇಡುತ ಸಂಪಿಗೆ ಹೂವ ಹಾಕೋಣ ।।ಹೂವ।।
Audio Link :
http://kannadamasti.net_hoova tanniri song

No comments :
Post a Comment