Pages

Thursday, August 13, 2015

Paaliso Shankaraa......

ರಾಗ : ದರ್ಬಾರಿ ಕಾನಡ
ತಾಳ: ಆದಿ




ಪಾಲಿಸೋ  ಶಂಕರಾ ..... ನಿನ್ನ ।
ಪಾದ  ಆಶ್ರಿತರನು ।।


ಪಾಲ ಲೋಚನನೇ  ಪಾರ್ವತಿ ರಮಣನೇ ।
ಪಾಹಿ ಪಾಹಿ  ಪಾಹಿಮಾಂ  ಪರಮೇಶ್ವರನೇ ।। ಪಾಲಿಸೋ।।

ಭುಜಗ ಭೂಷಣನೇ  ಭಜಕರಿಗೊಲಿವನೇ ।
ಭವವಾರಿಧಿಯಲಿ  ಭಯಪಡುವವರನು ।।ಪಾಲಿಸೋ।।

ಭಯನಿವಾರಣನೇ  ಭವನೇ  ಮೃಢನೇ ।
ಭೂತನಾಥನೇ ಭಸ್ಮ  ಭೂಷಿತನೇ ।।ಪಾಲಿಸೋ।। 

 ವಿಶ್ವಸ್ಥಿತಿಲಯ  ಹೇತುಭೂತನೇ ।
ವಿಷ್ಣುಮೂರ್ತಿಪ್ರಿಯ ವಿಶ್ವನಾಥನೇ ।।ಪಾಲಿಸೋ।।















No comments :

Post a Comment