Pages

Monday, May 25, 2015

Hyange Madalayya Krishna









ರಚನೆ : ಗೋಪಾಲದಾಸರು




ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮಂಗಳಾಂಗ ಭವಭಂಗ  ಬಿಡಿಸಿ ನಿನ್ನ  ಡಿಂಗರಿಗನ  ಮಾಡೋ  ಅನಂಗಜನಕ ।। ಪ ।।



ಯೇಸು ಜನುಮದ ಸುಕೃತದ  ಫಲವೋ  ತಾನು  ಜನಿಸಲಾಗಿ
ಭೂಸುರದೇಹದ  ಜನುಮವು ಎನಗೆ  ಸಂಭವಿಸಿದೆಯಾಗಿ ।
ಮೋದತೀರ್ಥ  ಮತ ಚಿಹ್ನಿತನಾಗದೆ  ದೋಷಕೆ  ಒಳಗಾಗಿ
ಲೇಶಸಾಧನವ ಕಾಣದೆ ದುಃಸಹವಾಸದಿಂದಲೇ  ದಿನ ದಿನ ಕಳದೆ ।।೧।।


ಶಶಿಮುಖ ಕನಕದ ಆಶೆಗೆ ಬೆರೆತು  ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ  ಕೃಪೆಯ ಗಳಿಸದೆ ಕೆಟ್ಟೆನಯ್ಯ  ।
ನಿಶೆಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ  ಜೀಯ
ಕುಸುರಿದೆ ನೆಲವೋ  ಸರ್ವಕಾಲ ನಿನ್  ಒಡೆತನವೆಂಬುವ  ಬಗೆಯನು ಅರಿಯದೆ ।।೨।।


ನೆರೆನಂಬಿದ  ಪಾವಟಿಗಳು ಎಲ್ಲಾ  ಸರಿದು ಹೋದವಲ್ಲಾ
ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು  ಇಲ್ಲಾ ।
ಪರಿಪರಿ ವಿಷಯದ ಆಶೆಯು ಎನಗೆ ಕಿರಿದು  ಆಯಿತಲ್ಲಾ
ಹರಿಯೇ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು  ಇಲ್ಲವಲ್ಲಾ  ।।೩।।


ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲಾ
ಪವನಾತ್ಮಕ  ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲಾ  ।
ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲಾ
ರವಿನಂದನ ಕೇಳಿದರ  ಉತ್ತರ ಕೊಡೆ ವಿವರಸರಕು ಒಂದಾದರು ಇಲ್ಲಾ  ।।೪।।


ಭಾಗವತರೊಡಗೂಡಿ ಉಪವಾಸ ಜಾಗರ ಒಂದುದಿನ ಮಾಡಲಿಲ್ಲಾ
ರಾಗದಿ ಶುಕಮುನಿ ಪೇಳ್ದ ಹರಿಕಥೆ  ಸಂಯೋಗವೆಂಬೋದಿಲ್ಲಾ ।
ನೀಗುವಂತ ಭವ ಭಯವ ಭಕುತಿ ವೈರಾಗ್ಯವೆಂಬೋದಿಲ್ಲಾ
ಯೋಗಿವಂದ್ಯ  ಗೋಪಾಲವಿಠಲ.....ಗೋಪಾಲವಿಠಲ; ವಿಠಲ ವಿಠಲ ಗೋಪಾಲವಿಠಲ
ಯೋಗಿವಂದ್ಯ  ಗೋಪಾಲವಿಠಲ ತಲೆ ಭಾಗಿ  ನಿನ್ನನೇ  ಬೇಡಿಕೊಂಬೆ ।।೫।।

Lyrics In English

HyangE maaDalayya krushNa hOgutidE aayushya
mangalAnga bhavabhanga biDisi ninna Dingarigana maaDo ananga janaka||pa||

yEsu janumada sukrutada phalavO taanu janisalAgi
bhoosuradehada janumavu enagE sambhavisidEyAgi|
mOdateertha mata chihnitanAgadE dOshakE OLagAgi
lEshasAdhanava kANadE duHsahavAsadindalE dina dina kAledE||1||


shashimukha kanakada aashegE bErEtu vasupati ninnaDiya
hasanAgi ninna nEnEyadE krupEya gaLisadE keTtEnayya|
nishEhagalu sthiravEndu tanuvanu pOshisalAshisi jEEya
kusuridE nElavO sarvakAla nin oDEtanavEmbuva bagEyanu ariyadE||2||


nErEnambidE paavaTigaLu ella saridu hOdavalla
maraLi E pariya janumavu baruva bharavasEyantu illa|
paripari vishayada aashEyu enagE kiridu aayitalla
hariyE jagadi neenObbanalladE pOrevarinnaru illavalla||3||


avani OlagE puNyakshEtra charisuva havaNike enagilla
pavanaatmaka guru madhwa shastrada pravachana kELalilla|
tavakadinda guru hiriyara sEvisi avara Olisalilla
ravinandana keLidara uttara kODe vivarasaraku ondaadaru illa||4||


bhAgavatarODagUDi upAvAsa jAgara ondudina maaDalilla
raagadi shukamuni pElDa harikathE samyOgavEmbOdilla|
neeguvanta bhava bhayava bhakuti vairAgyavEmbOdilla
yOgivandya gOpAlaviThala.... gOpAlaviThala; viThala viThala gOpalaviThala
yOgivandya gOpAlaviThala talE bhaagi ninnanne bEDikOmbE||5||

Audio Link 

hyange-madalayya-krishna-by-puttur-narasimha-nayak

12 comments :