Pages

Monday, June 1, 2015

Enna Binnapa Kelu Dhanvantri




                                           ಗೋಪಾಲದಾಸರು ಪ್ರತಿ ವರ್ಷವೂ ತಿರುಪತಿಯ ಬ್ರಹ್ಮೋತ್ಸವಕ್ಕೆ  ಹೋಗುವ ಪದ್ಧತಿಯನ್ನು ರೂಢಿಸಿ ಕೊಂಡಿದ್ದರು. ಒಮ್ಮೆ ಶ್ರೀನಿವಾಸಚಾರ್ಯರು (ಭಾವಿ ಜಗನ್ನಾಥ ದಾಸರು) ಅವರೊಂದಿಗೆ ಹೊರಟರು ಬ್ರಹ್ಮೋತ್ಸವಕ್ಕೆ ಕಾಲ್ನಡಿಗೆಯಲ್ಲಿಯೇ  ಬೆಟ್ಟವನ್ನು ಹತ್ತಿದರು ಅದರ ಪರಿಣಾಮವಾಗಿ  ಶ್ರೀನಿವಾಸಚಾರ್ಯರು ಸಾಯುವ ಪರಿಸ್ಥಿತಿಗೆ ತಲುಪಿದರಂತೆ ;ಆಗ ಗೋಪಾಲದಾಸರು ತಮ್ಮ ಗುರುಗಳಾದ ವಿಜಯ ದಾಸರನ್ನು ಸ್ಮರಿಸಿ ಅವರ ಆದೇಶದ ಮೇರೆಗೆ ಈ ಕೆಳಕಂಡ ಧನ್ವಂತ್ರಿ ಸ್ತೋತ್ರವನ್ನು ಹಾಡಿ  ತಮ್ಮ ಆಯುಷ್ಯದಲ್ಲಿ ೪೦ ವರ್ಷದಷ್ಟು  ಶ್ರೀನಿವಾಸಚರ್ಯರಿಗೆ  ದಾನ ಮಾಡಿದರೆಂದು ಪ್ರತೀತಿ ಇದೆ. 


ಎನ್ನ ಬಿನ್ನಪ ಕೇಳೋ  ಧನ್ವಂತ್ರಿ ದಯಾಮಡೋ -ಸಣ್ಣವನು ಇವ ಕೇವಲ |ಪ|
ಬನ್ನಬಡಿಸುವ ರೋಗವನ್ನು ಮೋಚನ ಮಾಡಿ-ಚೆನ್ನಾಗಿ ಪಾಲಿಸುವುದೂ ಕರುಣಿ ||ಅನು||

ಅರೋಗ್ಯ ಆಯುಷ್ಯ ಐಶ್ವರ್ಯವೆಂಬ ಈ-ಮೂರುವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ-ಪೂರಣವಾಗಿಪ್ಪವೋ
ಘೋರ ವ್ಯಭಿಚಾರ ಪರನಿಂದೆ ಪರವಿತ್ತಪ-ಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರುವಿಧದಿಂದಲಿ ಕಾರಣನು ನೀನೆ ದುಷ್ಕರ್ಮ-ಪರಿಹರಿಸುವುದು  ಹರಿಯೇ    ||೧||
ವಸುಮತಿಯ ಮೇಲಿನ್ನು ಅಸುರ ಜನರೇ ಬಹಳ-ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ-ಶಿಶುಗಳು ನಾವಿಪ್ಪವು
ಅಸುರಾರಿ ನಿನ್ನ ಕರುಣಾಮೃತದ ಮಳೇಗರೆದು-ಕುಶಲದಲ್ಲಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಥವು-ಅಸುನಾಥ ಹರಿಯೇ ಸಲಹೋ  ಸ್ವಾಮಿ  ||೨||
ಅನ್ಯರನು ಭಜಿಸದಲೇ  ನಿನ್ನನ್ನೆ ಸ್ಮರಿಸುತ್ತ-ನಿನ್ನ ಚಿಹ್ನೆಗಳನ್ನೇ  ಧರಿಸಿ
ನಿನ್ನನಾಮೋಚ್ಚರಿಸಿ ನಿನ್ನವರವನೆನಿಸಿ-ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯವು ಅಲ್ಪವು ಆಗೆ ಅನ್ಯರಿಗೆ-ಇನ್ನು ಆಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕುತರನು ಪೋಷಿಪೆನೆಂದು-ಘನ್ನ ಬಿರುದನ್ನು ಉಳುಹೂ ಸ್ವಾಮಿ ||೩||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ-ಭಾದೆಗೌಷಧವು ನೀನೇ
ಹೇ ದೇವ ನಿನ್ನ ಕರಕಮಲದಿಂ ಸುಧೆಗರೆದು-ಸಾಧುಗಳ ಪಾಲಿಸುವ ನೀನೇ
ಮೋದಬಡಿಸುವಿ ನಿನ್ನ ಸಾಧಿಸುವವರಿಗೆ ಶುಭೋದಯಂಗಳ ನೀಡಿ
ಆದರಿಸಿ ಅವಗೆ ತವ ಪಾದ ಧ್ಯಾನವನಿತ್ತು-ಸಾಧುಗಳೊಳಗಿರಿಸಿ ಮೋದ ಕೊಡು ಸರ್ವದಾ  ||೪||
ನಿನ್ನವರಲಿ ಇವಗೆ ಇನ್ನು ರತಿಯನು ಕೊಡೂ-ನಿನ್ನವನೆಂದು ಅರಿದು
ನಿನ್ನ ಪ್ರಾರ್ಥಿಸಿದೆ ನಾನನ್ಯರಿಗೆ ಆಲ್ಪರಿಯೆ-ಎನ್ನ ಪಾಲಿಸುವ ದೊರೆಯೇ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು-ಮನ್ನಿಸ ಬೇಕು ಕರುಣಿ

ಅನಂತ ಗುಣಪೂರ್ಣ "ಗೋಪಾಲವಿಠ್ಠಲ"-ಇನ್ನಿದನೆ ಪಾಲಿಸುವುದೂ ಪ್ರಭುವೇ                    ||೫||


Lyrics In English
RachaneshrI gOpaala daasaru
RaagabhauLi
TaaLajhaMpe

Enna binnapa kELu dhanvaMtri dayamaaDu saNNavanu iva kEvala
bannabaDisuva rOgavannu mOchanE maaDi chennaagi paalisuvudu karuNI ||pa||

aarOgya aayuShya aishvaryaveMbo I ee mUruvidhavastugaLu
naarayaNana bhajakaraadavara saadhanake pUrNavaagippuvu
ghOra vyabhichaara paraniMde para vittaapahaaramaaDida dOShadi
daridraraaguvaru mUru vidhadiMdali kaaraNanu nIne duShkarma pariharisuvudu hariye     ||1||

vasumatiya mElinnu asura janara bahaLa vashavalla kaliya baadhe
bisiliMda pIDitavaada sasigaLaMte shishugaLu naavippevu
asuraari ninna karuNaamRutada maLegaredu kushaladi paalisuvusu
kesariMda kesaru toLedaMte karmada pathavu asunaatha hariye poreyo swaami       ||2||

aadivyaadhigaLu unmaada vibhrama naanaa baadhegauShadhavu nIne
hE dEva ninna karakalasha sudheveredu saadhugaLa saMtaisuvi
mOdabaDisuvi ninna saadhisuvarige shubhOdayaMgaLanIvi
aadarisi ivage tavapaadadhyaanavanittu saadhugaLoLagiTTu mOdakoDu sarvadaa ||3||

anyaranu bhajisadale ninnane stutisuta ninna cihnegaLa dharisi
ninnavaranenisi ninna naamOccarisi ninniMda upajIvisi
anna aarOgyakke alpa jIvigaLige innu aalpariyabEke
ninna saMkalpa bhaktara pOShakaneMba ghanna birudinnu uLuho salaho  ||4||

ninnavarali ivage innu ratiyannukoTTu ninnavaneMdu aridu
ninna naa praarthisida anyarige alpariye enna paalisuva doreye
enna maatallavidu enna hiriyara maatu mannisabEku karuNi
anaMta guNapUrNa gOpaala viThala innidane paalisuvudo prabhuvE            ||5||

No comments :

Post a Comment