ರಚನೆ : ಪುರಂದರದಾಸರು
ರಾಗ : ರೇಗುಪ್ತಿ
ತಾಳ : ಅಟ್ಟ
ವೀರ ಹನುಮ ಬಹು ಪರಾಕ್ರಮಾ ||ಪ||
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||
ರಾಮ ದೂತನೆನೆಸಿಕೊಂಡೆ ನೀ
ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆ ಇತ್ತು ಜಗತ್ತಿಗೆಲ್ಲ ಹರುಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುತ್ತೆನಿಸಿಬರುವ ||೧||
ಗೋಪಿಸುತನ ಪಾದಪೂಜಿಸಿ
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||೨||
ಮಧ್ಯಗೇಹನಲ್ಲಿ ಜನಿಸಿ ನೀ
ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ ||೩||
Youtube Link :
Sri Mysore Ramachandrachar
Lyrics In English
Veera Hanuma bahu parakramaa ||pa||
sugnanaavittu paalisEnna jeevarOttama ||a.pa||
Rama dhoota nEnEsikOnDE nee
rakshasara vanavanElla kittu bandE nee
JanakigE mudrE ittu jagattigElla harushavittu
chooDamaNiya Ramagittu lOkakE muttEnisibaruva ||1||
gopisutana paadapoojisi
gadEya dharisi Bakasurana samharisidE
Droupadiya mOrE kELi Keechakanna mattE kOndu
BheemanEmba naama dharisi sangrama dheeranaagi jagadi ||2||
madhyagEhanalli janisi nee
baalyadalli matsariya roopagOnDE nee
Satyavatiya sutana bhajisi sammukkadi bhashya maaDi
sajjanara pOreva muddu PurandaraviThalana daasa ||3||
Please post meaning of the song
ReplyDeletePlease can you give the meaning of this Powerful Shloka/song
ReplyDelete