ಕರ್ಪೂರ ಬೆಳಗುವೆನು ಕಾರುಣ್ಯಮಯಿ ನಿನಗೆ ।
ಕುಂಕುಮಾಂಕಿತಳೇ ಕಮಲದಳ ಲೋಚನೆ ।।ಕರ್ಪೂರ।।
ಕಮಲದಿ ನೆಲಸಿರುವ ಕೋಮಲಾಂಗಿಯೇ ನಿನ್ನಾ ।
ಚರಣ ಕಮಲಕೆ ಪರಮ ಭಕ್ತಿಯೊಳು ।।ಕರ್ಪೂರ।।
ದಾಸಾನುದಾಸರಿಗೆ ಪೊರೆವ ಶ್ರೀ ಹರಿವಲ್ಲಭೇ ।।
ಶಾರದೇ ತಾಯಿ ನಿನಗೆ ವಂದಿಪೆ ಜಗತ್ ಪ್ರಭೇ ।।ಕರ್ಪೂರ ।।
ಕರ್ಪೂರ ಕರಗುವಂತೆ ಎನ್ನ ಕರ್ಮ ಕರಗಿಸು ।।
ಎನ್ನ ಕರ್ಮ ಕರಗಿಸು ಕರ್ಪೂರ ಕರಗುವಂತೆ ।।೨।।
।।ಕರ್ಪೂರ।।
No comments :
Post a Comment