ಆಷಾಢದಲ್ಲಿ ಬಹುಶಃ ಯಾವುದೇ ಶುಭಕಾರ್ಯ ಮಾಡುವ ಸಂಪ್ರದಾಯವಿಲ್ಲ. ಆಷಾಢ ಶುಕ್ರವಾರಗಳಲ್ಲಿ ಲಕ್ಷ್ಮೀಪೂಜೆ, ಗುರುಪೂರ್ಣಿಮೆ ಬಿಟ್ಟರೆ, ಆಷಾಢದಲ್ಲಿ ಕೆಲವರು ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳುತ್ತಾರೆ. ಆದರೆ, ಆಷಾಢ ಕೊನೆಗೆ ಬರುವ ಅಮಾವಾಸ್ಯೆ ಮಾತ್ರ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆಗೊಳಲ್ಪಡುತ್ತದೆ. ಈ ವರ್ಷ 26 /೨೬ ನೇ ತಾರೀಖು ಜುಲೈ ತಿಂಗಳಲ್ಲಿ ಜ್ಯೋತಿರ್ ಭೀಮೇಶ್ವರ ವ್ರತವನ್ನು ಆಚರಣೆ ಮಾಡಬೇಕು. ಸೌರಮಾನ ಪದ್ಧತಿ ಅಚರಿಸುವವರು, ಕನ್ನಡ ಜಿಲ್ಲೆಗಳಲ್ಲಿ ಆಟಿ ಅಮಾವಾಸ್ಯೆ ಆಚರಣೆ ಇರುತ್ತದೆ. ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.