Pages

Friday, January 31, 2014

Kallu Sakkare KOllirO

ರಚನೆ : ಪುರಂದರ ದಾಸ
ರಾಗ : ಕಲ್ಯಾಣಿ
ತಾಳ :ಮಿಶ್ರ ಛಾಪು



ಕಲ್ಲು ಸಕ್ಕರೆ ಕೊಳ್ಳಿರೋ  ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೋ ।। ಪ ।।

ಕಲ್ಲು ಸಕ್ಕರೆ ಸವಿ ಬಲ್ಲವರೇ  ಬಲ್ಲರು
ಪುಲ್ಲ ಲೋಚನ ಶ್ರೀ  ಕೃಷ್ಣ  ನಾಮವೆಂಬ ।।ಅ ಪ ।।


ಎತ್ತು ಹೇರುಗಳಿಂದ  ಹೊತ್ತು ಮಾರುವುದಲ್ಲ
ಒತ್ತತ್ತಿ  ಗೋಣಿಯೊಳು ತುಂಬುವುದಲ್ಲ
ಎತ್ತ  ಹೋದರು ಬಾಡಿಗೆ  ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿಲಾಭಬರುವಂತ \\೧\\

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ದರೂ  ಬೆಲೆ  ರೊಕ್ಕವಿದಕಿಲ್ಲ
ಕಟ್ಟಿರುವೆಯು  ತಿಂದು ಕಡಿಮೆಯಾಗುವುದಲ್ಲ
ಪಟ್ಟಣದೊಳಗೆ  ಪ್ರಸಿದ್ಧವಾಗಿರುವಂತ \\೨\\

ಸಂತೆ ಸಂತೆಗೆ ಹೋಗಿ  ಶ್ರಮಪಡಿಸುವುದಲ್ಲ
ಸಂತೆಯೊಳಗೆ ಇಟ್ಟು  ಮಾರುವುದಲ್ಲ
ಸಂತತ ಭಕುತರ ನಾಲಿಗೆ  ಸವಿಗೊಂಬ
ಕಾಂತ  ಶ್ರೀ ಪುರಂದರ ವಿಠಲ  ನಾಮವೆಂಬ \\೩\\

Audio :
   Kallu sakkare kOllirO_youtube

No comments :

Post a Comment