Pages

Friday, January 31, 2014

Krishnamoorti Kanna Munde

ರಚನೆ : ಪುರಂದರ ದಾಸ
ರಾಗ : ಅರಭಿ
ತಾಳ : ಮಿಶ್ರ ಛಾಪು



ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।
ಕಷ್ಟಗಳೆಲ್ಲವ ಪರಹರಿಸಿ ಮನ -
-ದಿಷ್ಟಾರ್ಥಗಳನೆಲ್ಲಾ  ಕೊಟ್ಟು ರಕ್ಷಿಸುವಂತ ।।ಅ ಪ ।।


ಮಸ್ತಕದಲಿ ಮಾಣಿಕದ  ಕಿರೀಟ
ಕಸ್ತೂರಿ ತಿಲಕದಿಂ  ಹೊಳೆವ ಲಲಾಟ
ಶಿಷ್ಟಿಲಿ  ಕೊಳಲನೂದುವ ಓರೆನೋಟ
ಕೌಸ್ತುಭ ಎಡಬಲದಲಿ ಓಲಾಟ।।   \\೧\\


ಮಗಮಘಿಸುವ  ಸೊಬಗಿನ ಸುಳಿಗುರುಳು
ಚಿಗುರು ತುಳಸಿ ವನಮಾಲೆಯು ಕೊರಳೊಳು
ಬಗೆ ಬಗೆ ಹೊನ್ನುಂಗುರವಿಟ್ಟ  ಬೆರಳು
ಸೊಬಗಿನ ನಾಭಿಯ ತಾವರೆಯರಳು ।।  \\೨\\


ಉಡುದಾರ ಒಡ್ಯಾನ  ನಿಕಿಲಾಭರಣ
ಉಡುಗೆ  ಪೀತಾಂಬರ ಶತರವಿ  ಕಿರಣ
ಕಡಗ ನೂಪುರ ಗೆಜ್ಜೆಗಳನಿಟ್ಟ  ಚರಣ
ಒಡೆಯ ಪುರಂದರ ವಿಠಲನ ಕರುಣಾ ।।  \\೩\\



                                 

No comments :

Post a Comment