Pages

Friday, January 31, 2014

Bandanene ranga bandanene

ರಚನೆ : ಪುರಂದರ ದಾಸ
ರಾಗ : ಶ್ರೀ
ತಾಳ : ಆದಿ


ಬಂದನೇನೆ  ರಂಗ  ಬಂದನೇನೆ  ಎನ್ನ ।।ಪ॥
ತಂದೆ ಬಾಲ ಕೃಷ್ಣ  ನವನೀತ ಚೋರ ।।ಅ  ಪ ।।


ಘಲು ಘಲು ಘಲುರೆಂಬ  ಪೊನ್ನಂದಿಗೆ  ಗೆಜ್ಜೆ
ಹೊಳೆ ಹೊಳೆ ಹೊಳೆಯುವ  ಪಾದವನೂರುತ
ನಲಿ ನಲಿ ನಲಿದಾಡುತ ಉಂಗುರ ಅರಳೆಲೆ
ಥಳ  ಥಳ  ಥಳ  ಹೊಳೆಯುತ  ಶ್ರೀ ಕೃಷ್ಣ ।। \\೧\\


ಕಿಣಿ ಕಿಣಿ ಕಿಣಿರೆಂಬ  ಕರದ ಕಂಕಣ ಬಳೆ
ಝಣ  ಝಣ ಝಣರೆಂಬ   ನಡುವಿನ ಘಂಟೆ
ಢಣ  ಢಣ  ಢಣರೆಂಬ ಪಾದದ ತೊಡವಿನ
ಕುಣಿ ಕುಣಿ  ಕುಣಿ ಕುಣಿದಾಡುತ  ಶ್ರೀ ಕೃಷ್ಣ ।। \\೨\\


ಹಿಡಿ ಹಿಡಿ ಹಿಡಿಯೆಂದು  ಪುರಂದರ ವಿಠಲನ
ದುಡು  ದುಡು  ದುಡು  ದುಡನೆ  ಓಡುತ
ನಡಿ  ನಡಿ  ನಡಿಯೆಂದು  ಮೆಲ್ಲನೆ  ಪಿಡಿಯಲು
ಬಿಡಿ ಬಿಡಿ ಬಿಡಿ  ದಮ್ಮಯ್ಯ  ಎನ್ನುತ  ಶ್ರೀ  ಕೃಷ್ಣ ।। \\೩\\


Audio  Link :
bandanene ranga_youtube


No comments :

Post a Comment