ರಚನೆ :ಆರ್ . ಎನ್ . ಜಯಗೋಪಾಲ್
ಗಾಯಕರು : ಎಸ್ . ಪಿ . ಬಾಲಸುಬ್ರಮಣ್ಯಂ
ವಾತಾಪಿವಾಸ ಚಿದಾನಂದಹಾಸ ಲೀಲಾವಿಲಾಸ ನವಕೇಳಿ ವಿಕಾಸ ।
ಸುಪ್ರಭಾತ ಗೀತೆಯನು ಹಾಡುವೆ ನಾ ಸ್ವಾಮಿ ಕೇಳು ಹೇ ಪ್ರಭು
ನೀ ಕೇಳು ಹೇ ಪ್ರಭು ।।
।।ಸುಪ್ರಭಾತ ।।
ಮೂಡಣ ಕೆಂಪೇರಿದೆ ನಿನಗೆ ಆರತಿ ಬೆಳಗಿದೆ
ಮಾಯಾ ನಿದ್ರೆಯು ಸಾಕು ಕಣ್ಣನು ತೆರೆಯೋ ।।
ಬಾನಾಡಿ ಹಾಡುತಿಹ ಸುಪ್ರಭಾತ ಕೇಳು
ದಿನಚರ್ಯ ಆರಂಭ ನೀ ಮಾಡು ಸ್ವಾಮಿ ನೀ ಮಾಡು ಸ್ವಾಮಿ ।।
।।ಸುಪ್ರಭಾತ ।।
ಹೂಗಳು ಕಾಯುತಿವೆ ಚರಣ ಸ್ಪರ್ಶಕೆ
ರಂಗೋಲಿಯು ಹಾಕಿದೆ ನಿನ್ನ ಬರುವಿಗೆ ।।
ತಂಗಾಳಿಯು ಹಾಕುತಿದೆ ಬಿಳಿಯ ಚಾಮರ
ಕೈ ಮುಗಿದು ಬೇಡುತಿಹೆ ಸ್ವಾಮಿ ಎದ್ದೇಳು ಸ್ವಾಮಿ ಎದ್ದೇಳು ।।
।।ಸುಪ್ರಭಾತ ।।
ಅಭಿಷೇಕ ಮಾಡಿರುವೆ ಆರತಿಯ ಬೆಳಗಿರುವೆ
ನೈವೇದ್ಯವ ಸ್ವೀಕರಿಸೋ ಒಲಿದು ಪ್ರಭುವೇ ।।
ಭಾದ್ರಪದ ಚೌತಿ ದಿನ ನಿಷ್ಠೆಯಿಂದ ಪೂಜಿಸುವ
ಭಕ್ತರಿಗೆ ವರ ಮಳೆಯ ಕರೆ ನೀ ಪ್ರಭುವೇ ।।
।।ವಾತಾಪಿವಾಸ ।।
Audio Link :
vatapivasasong_1
ಗಾಯಕರು : ಎಸ್ . ಪಿ . ಬಾಲಸುಬ್ರಮಣ್ಯಂ
ವಾತಾಪಿವಾಸ ಚಿದಾನಂದಹಾಸ ಲೀಲಾವಿಲಾಸ ನವಕೇಳಿ ವಿಕಾಸ ।
ಸುಪ್ರಭಾತ ಗೀತೆಯನು ಹಾಡುವೆ ನಾ ಸ್ವಾಮಿ ಕೇಳು ಹೇ ಪ್ರಭು
ನೀ ಕೇಳು ಹೇ ಪ್ರಭು ।।
।।ಸುಪ್ರಭಾತ ।।
ಮೂಡಣ ಕೆಂಪೇರಿದೆ ನಿನಗೆ ಆರತಿ ಬೆಳಗಿದೆ
ಮಾಯಾ ನಿದ್ರೆಯು ಸಾಕು ಕಣ್ಣನು ತೆರೆಯೋ ।।
ಬಾನಾಡಿ ಹಾಡುತಿಹ ಸುಪ್ರಭಾತ ಕೇಳು
ದಿನಚರ್ಯ ಆರಂಭ ನೀ ಮಾಡು ಸ್ವಾಮಿ ನೀ ಮಾಡು ಸ್ವಾಮಿ ।।
।।ಸುಪ್ರಭಾತ ।।
ಹೂಗಳು ಕಾಯುತಿವೆ ಚರಣ ಸ್ಪರ್ಶಕೆ
ರಂಗೋಲಿಯು ಹಾಕಿದೆ ನಿನ್ನ ಬರುವಿಗೆ ।।
ತಂಗಾಳಿಯು ಹಾಕುತಿದೆ ಬಿಳಿಯ ಚಾಮರ
ಕೈ ಮುಗಿದು ಬೇಡುತಿಹೆ ಸ್ವಾಮಿ ಎದ್ದೇಳು ಸ್ವಾಮಿ ಎದ್ದೇಳು ।।
।।ಸುಪ್ರಭಾತ ।।
ಅಭಿಷೇಕ ಮಾಡಿರುವೆ ಆರತಿಯ ಬೆಳಗಿರುವೆ
ನೈವೇದ್ಯವ ಸ್ವೀಕರಿಸೋ ಒಲಿದು ಪ್ರಭುವೇ ।।
ಭಾದ್ರಪದ ಚೌತಿ ದಿನ ನಿಷ್ಠೆಯಿಂದ ಪೂಜಿಸುವ
ಭಕ್ತರಿಗೆ ವರ ಮಳೆಯ ಕರೆ ನೀ ಪ್ರಭುವೇ ।।
।।ವಾತಾಪಿವಾಸ ।।
Audio Link :
vatapivasasong_1
No comments :
Post a Comment