ಬರಬೇಕು ಸ್ವಾಮಿ ಬರಬೇಕು ।
ಇಂದು ಮುದದಿಂದ ಮನೆಗೆ ನೀ ಬರಬೇಕು।।
ಒಲವಿಂದ ವರಗಳನು ತರಬೇಕು ।
।।ಬರಬೇಕು ।।
ಮಲ್ಲಿಗೆಯ ಜಾಜಿ ಸಂಪಿಗೆಯ ಹೂವ ಮಾಲೆಯನು ನೀಡುವೆನು ಗಣಪತಿಯೇ ।
ಗರಿಕೆ ಹುಲ್ಲನು ಪತ್ರದೆಲೆಯನು ಪೂಜಿಸುವೆ ಸ್ವಾಮಿ ನಿನ್ನ ಪದಗಳಿಗೆ ।।
।।ಬರಬೇಕು ।।
ಚಕ್ಕುಲಿಯ ಬೆಲ್ಲ ಮೋದಕವ ನಾ ನೈವೇದ್ಯ ನೀಡುವೆನು ಪ್ರಭು ನಿನಗೆ ।
ಏಕಾರತಿ ಪಂಚಾರತಿ ದಿವ್ಯಾರತಿ ಬೆಳಗುವೆನು ಹೇ ವಿನಾಯಕ ನೀನು ಒಲಿಯೋ ನಮಗೆ ।।
।।ಬರಬೇಕು ।।
ಭಕ್ತಿಯಲಿ ನಿನ್ನ ಅರ್ಚಿಸುವೆ।
ನಾ ಮಂತ್ರಪುಷ್ಪ ನೀಡುವೆನು ಗಣಪತಿಗೆ ।।
ಸಾಷ್ಟಾಂಗ ನಮಸ್ಕಾರ ಮಾಡುವೆನು ಗಣಕನಿಗೆ ।
ಸ್ವೀಕಾರ ಮಾಡು ನೀ ಬಂದು ನಮ್ಮನೆಗೆ ।।
ಬರಬೇಕು ಸ್ವಾಮಿ ಬರಬೇಕು ।
ಇಂದು ಮುದದಿಂದ ಮನೆಗೆ ನೀ ಬರಬೇಕು ।
ಒಲವಿಂದ ವರಗಳನು ತರಬೇಕು ।।
।।ಬರಬೇಕು ।।
Audio Link :
http://www.kannadaaudio.com/Songs/Devotional/GanapathiGeethamala-SPB/Barabeku.ram
No comments :
Post a Comment