Pages

Wednesday, December 11, 2013

Aarati Sri Raghuramana

ಆರತಿ ಶ್ರೀ ರಘುರಾಮನ ಪಾದಕೆ। ।ಪ।
ಇನಕುಲ ಕೀರುತಿ ಬೆಳಗಿದ ಪಾದಕೆ ।। ।।ಅ .ಪ ।।

ದಶರಥ ನಂದನ ರಾಮಗೆ ಆರತಿ
ಕೌಸಲ್ಯಾಸುತ  ರಾಮಗೆ ಆರತಿ ।
ಲಕ್ಷ್ಮಣಾಗ್ರಜಗೆ  ಬೆಳಗುವ ಆರತಿ
ಸೀತಾಪತಿಗೆ  ಮಂಗಳ ಆರತಿ ।।ಆರತಿ।।

ಅಹಲ್ಯೋದ್ದಾರಕ  ರಾಮಗೆ ಆರತಿ
ಹನುಮದ್ಸೇವಿತ  ಸ್ವಾಮಿಗೆ ಆರತಿ।
ರಾಕ್ಷಸಮರ್ಧನ ದೇವಗೆ ಆರತಿ
ಅಯೋಧ್ಯ ರಾಮಗೆ  ಮಂಗಳ ಆರತಿ ।।ಆರತಿ।।

ರಘುಕುಲೋತ್ತಮ ರಾಮಗೆ ಆರತಿ
ಪುರುಷೋತ್ತಮನಿಗೆ  ಬೆಳಗುವ ಆರತಿ ।
ಆತ್ಮರಾಮಗೆ ಭಕುತಿಯ ಆರತಿ
ಜಾನಕಿಪ್ರಿಯನಿಗೆ ಮಂಗಳ ಆರತಿ ।।ಆರತಿ।।

ಕಾಂಚನ ಹರಿಣಿ  ಹರನಿಗೆ  ಆರತಿ
ಭರತ  ವಂದಿತನಿಗೆ  ಬೆಳಗುವ ಆರತಿ ।
ಕನಕಾಂಬರಧರ  ಸ್ವಾಮಿಗೆ ಆರತಿ
ರಾವಣ ಹರಣಗೆ ಮಂಗಳ ಆರತಿ ।।ಆರತಿ।।

No comments :

Post a Comment