Pages

Wednesday, December 11, 2013

Anjana DevigE


                                                                 



ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ ನಿನಗೆ ನಮೋ ನಮೋ
ಹನುಮ ನಿನಗೆ ನಮೋ ನಮೋ । ಹನುಮ ನಿನಗೆ ನಮೋ ನಮೋ ।।ಅಂಜನಾ ।।
ಅಂಜಾದ್ರಿ  ಸೀತೆಗೆ ಉಂಗುರವಿಟ್ಟ  ನಿನ್ನ ಚರಣ ಕಮಲಕೆ ನಮೋ ನಮೋ ।।ಅಂಜನಾ ।।

ದುರುಳಾಕ್ಷಯನ  ಕೊರಳನು ಕೊಯ್ದ ಶೂರ ಧೀರ ನಮೋ ನಮೋ ।
ಭರದಿ ಲಂಕಾಪುರವನು ಹರಣಕೆ  ಆಹುತಿ ಇಟ್ಟನೆ  ನಮೋ ನಮೋ ।।ಅಂಜನಾ ।।

ನಂದನ ಕಂದನ ಸುಂದರ ವದನನ  ನೆಂಟ ನಿನಗೆ ನಮೋ ನಮೋ ।
ಅಮೃತಶ್ರೀ ಸೌಗಂಧಿಕೆ ತಂದಿಟ್ಟ  ಕುಂತಿಯ ಕುಮಾರ ನಮೋ ನಮೋ ।।ಅಂಜನಾ ।।

ಯತಿಯಾಗಿ ಶ್ರೀಪತಿಯ ಪ್ರೀತಿಯ ಪಡೆದ ಮಧ್ವರಾಯ  ನಿನಗೆ ನಮೋ ನಮೋ ।
ಗತಿತೋರುವ ತಂದೆ ಪುರಂದರ ವಿಠಲನ ದಾಸಾದಾಯಿಯೇ ನಮೋ ನಮೋ ।।ಅಂಜನಾ ।।


1 comment :