ರಚನೆ : ಶ್ರೀ ಗೋಪಾಲದಾಸರು
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೇ ।।
ಪಾರ್ವತಿ ಭಕ್ತರ ಸಾರಥಿ ವಂದಿಪೆ ।
ಸುಪತಿ ಗಜಮುಖ ಮೂರುತಿ ಮಾತೆ ।।
ಮನದಭಿಮಾನಿಯೇ ನೆನೆವೆನೇ ನಿನ್ನನು ।
ಅನುಗ್ರಹಿಸೆನ್ನನು ಅಂಬುಜ ಪಾಣಿ ।।
ಮಂಗಳೇ ಮೃಡನ ಅಂತರಂಗಳೇ ಹರಿಪದ ।
ಭೃಂಗಳೇ ತುಂಗಳೇ ಪನ್ನಂಗ ವೇಣಿ ।।
ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ ।
ಕಾಣಿಸಿ ಕೊಡುವಂತ ಶೂಲಿಯ ರಾಣಿ ।।ಪಾರ್ವತಿ ।।
Audio Link :
Vidyabhushan
No comments :
Post a Comment