ರಚನೆ : ಕಮಲೇಶ ವಿಠಲದಾಸ
ರಾಗ : ವೀಣಾಧರಿ
ತಾಲ್ಲ : ಆದಿ
ಕರೆದರೆ ಬರಬಾರದೇ ಗುರುವೇ ।
ವರಮಂತ್ರಾಲಯ ಪುರ ಮಂದಿರದೊಳು
ಚರಣ ಸೇವಕರು ಕರವ ಮುಗಿದು ನಿನ್ನ ।। ಕರೆದರೆ ।।
ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯಿ ತೆರೆದು ಕೂಗಿ ನಿನ್ನ ।। ಕರೆದರೆ ।।
ಭೂಷಣಪಿತ ಕಮಲೇಶ ವಿಠಲನ
ದಾಸಾಗ್ರೇಸರರು ಈ ಸಮಯದಿ ನಿನ್ನ ।। ಕರೆದರೆ ।।
Audio Link :
karedare barabarade_Bombay sisters
No comments :
Post a Comment