ರಚನೆ : ಪುರಂದರ ದಾಸರು
ರಾಗ : ಹಂಸನಂದಿ
ತಾಳ : ಆದಿ
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ।।ಪ ।।
ಮಂಧರ ಮೃಗಧರ ಪಿನಾಕ ಧನುಕರ ಗಂಗಾ ಶಿರ ಗಜಚರ್ಮಾಂಬರಧರ ನಮೋ ನಮೋ ।।ಅ . ಪ ।।
ನಂದಿವಾಹನ ಆನಂದದಿಂದ ಮೂಜಗದಿ ಮೆರೆವ ನೀನೇ
ಅಂದು ಅಮೃತ ಘಟದಿಂದು ಉದಿಸಿದ ವಿಷ ತಂದು ಭುಜಿಸಿದವ ನೀನೇ ।।
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀ ರಾಮನ ನಾಮವ ಚಂದದಿ ಪೊಗಳುವ ನೀನೇ ।।
ಬಾಲಮೃಕಂಡನ ಕಾಲನು ಎಳೆವಾಗ ಪಾಲಿಸಿದವ ನೀನೇ
ಕಾಲಕೂಟವನು ಪಾನಮಾಡಿದ ನೀಲಕಂಠನು ನೀನೇ ।।
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ
ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ ।।
ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರ ವಾಸನು ನೀನೇ
ಕರದಲ್ಲಿ ವೀಣೆಯ ಗಾನವ ಮಾಡುವ ಉರಗಭೂಷಣ ನೀನೇ।।
ಕೊರಳೊಲಿ ಭಸ್ಮ ರುದ್ರಾಕ್ಷವ ಧರಿಸಿದ ಪರಮ ವೈಷ್ಣವ ನೀನೇ।।
ಗರುಡಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೇ ।।
youtube link :
chandrachooda shiva shankara_song

No comments :
Post a Comment