ಒಲ್ಲನೋ ಹರಿ ಕೊಳ್ಳನೋ ।(ಪ)
ಎಲ್ಲಾ ಸಾಧನವಿದ್ದು ತುಳಸಿ ಇಲ್ಲದ ಪೂಜೆ ।।(ಅ. ಪ.)
ಸಿಂಧು ಶತಕೋಟಿ ಗಂಗೋದಕವಿದ್ದು
ಗಂಧ ಸುಪರಿಮಳ ವಸ್ತ್ರಗಳಿದ್ದು ।
ಚಂದುಳ್ಳ ಆಭರಣ ಧೂಪಗಳಿದ್ದು
ಬೃಂದಾವನ ಶ್ರೀ ತುಳಸಿಯಿಲ್ಲದ ಪೂಜೆ ।।೧।।
ದಧಿ ಕ್ಷೀರ ಮೊದಲಾದ ಅಭಿಷೇಕಗಳಿದ್ದು
ಮಧುಪರ್ಕ ಪಂಚೋಪಚಾರವಿದ್ದು ।
ಮುದದಿಂದ ಮುದ್ದು ಶ್ರೀ ಕೃಷ್ಣನ ಪೂಜೆಗೆ
ಸದಮದಳಾದ ಶ್ರೀ ತುಳಸಿಯಿಲ್ಲದ ಪೂಜೆ ।।೨।।
ಮಂತ್ರ ಮಹಾ ಮಂತ್ರ ಪುರುಷಸೂಕ್ತಗಳಿದ್ದು
ತಂತು ತಪ್ಪದೆ ತಂತ್ರಸಾರವಿದ್ದು ।
ಸಂತತ ನಿಜ ಸಂಪೂರ್ಣನ ಪೂಜೆಗೆ
ಅತ್ಯಂತ ಪ್ರಿಯಳಾದ ತುಳಸಿಯಿಲ್ಲದ ಪೂಜೆ ।।೩।।
ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ
ವಿಮಲ ಘಂಟೆ ಪಂಚ ವಾದ್ಯಗಳಿದ್ದು।
ಅಮಲ ಪಂಚಭಕ್ಷ್ಯ ಪರಮಾನ್ನಗಳಿದ್ದು
ಕಮಲನಾಭನು ಪ್ರಿಯ ಶ್ರೀ ತುಳಸಿಯಿಲ್ಲದೆ ಪೂಜೆ ।।೪।।
ಪೂಜೆಯ ಮಾಡದ ತುಳಸಿಮಂಜರಿಯಿಂದ
ಮೂಜಗದೊಡೆಯ ಮುರಾರಿಯನ್ನು ।
ರಾಜಾಧಿರಾಜನೆಂಬ ಮಂತ್ರ ಪುಷ್ಪಗಳಿಂದ
ಪೂಜಿಸಿದರು ಒಲ್ಲ ಪುರಂದರವಿಠಲನು ।।೫।।
Youtube
ollanO hari kollanO
Listen to the beautiful rendering of this song by Ranjani Hebbar
ReplyDeletehttps://www.youtube.com/watch?v=zIM47vlRIt4
Nice rendition!Thanks for posting the link Vasuki.
DeletePhilosophically what does Tulasi represent in this composition?.
ReplyDelete