Pages

Thursday, August 15, 2013

Varamahalakshmi Vrata



                                   ನಮಸ್ತೇಸ್ತು ಮಹಾಮಾಯೆ  ಶ್ರೀಪೀಠೇ  ಸುರಪೂಜಿತೇ ।
                                   ಶಂಖ ಚಕ್ರಗಧಾಹಸ್ತೇ  ಮಹಾಲಕ್ಷ್ಮೀ  ನಮೋಸ್ತುತೇ ।।


                                                                  

                              ಲಕ್ಷ್ಮೀ  ಕ್ಷೀರಸಮುದ್ರ ರಾಜತನಾಯಾಂ  ಶ್ರೀ ರಂಗಧಾಮೇಶ್ವರೀಮ್ 
                              ದಾಸಿಭೂತ  ಸಮಸ್ತ ದೇವವನಿತಾಂ  ಲೋಕೈಕ ದೀಪಾನ್ಕುರಾಂ ।
                              ಶ್ರೀ ಮನ್ಮಂದ ಕಟಾಕ್ಷ  ಲಬ್ಧವಿಭವತ್  ಬ್ರಹ್ಮೇಂದ್ರ ಗಂಗಾಧರಾಂ 
                              ತ್ವಾಂತ್ರೈಲೋಕ್ಯಕುಟುಂಬಿನೀಂ ಸರಸಿಜಾಂವಂದೇಮುಕುಂದ ಪ್ರಿಯಾಂ ।।


                                  
                                                ಶ್ರೀ ವರಮಹಾಲಕ್ಷ್ಮೀ  ವ್ರತವನ್ನು ಶ್ರಾವಣ ಮಾಸದ  ಕೃಷ್ಣ ಪಕ್ಷದ ಎರಡನೆಯ ಶುಕ್ರವಾರದಂದು ಆಚರಿಸುವರು. ಈ ಹಬ್ಬವನ್ನು ಹಿಂದೂಗಳು  ಜಾತಿ ಭೇದವಿಲ್ಲದೆ ಅವರವರ ಸಂಪ್ರದಾಯದ ಪ್ರಕಾರ ಆಚರಿಸುವರು.

                                                 ಈ ವ್ರತವನ್ನು  ಮದುವೆಯಾದ   ಎಲ್ಲಾ  ದಂಪತಿಗಳು  ಆಚರಣೆ ಮಾಡುವ  ವಾಡಿಕೆ ಉಂಟು . ಈ ವ್ರತದ ಹಿನ್ನಲೆಯಲ್ಲಿ ಒಂದು ಕಥೆ ಈ ರೀತಿ ಇದೆ. ಒಮ್ಮೆ ಶಿವ ಪಾರ್ವತಿ ಇಬ್ಬರು ಪಗಡೆ ಆಟವನ್ನು ಆಡುತ್ತಿದ್ದರು . ಪಾರ್ವತಿದೇವಿಯು  ಆಡಿದ ಆಟವನೆಲ್ಲಾ  ಗೆಲ್ಲುತ್ತಿದ್ದಳು ಆದರೆ  ಪರಮಶಿವ  ಎಲ್ಲ ಆಟದ ಗೆಲುವನ್ನು ತನ್ನದು ಎಂದು ಘೋಷಿಸಿಕೊಳ್ಳುತಿದ್ದ  ಪಾರ್ವತಿ ದೇವಿಯನ್ನು  ಛೇಡಿಸಲು  . ಹೀಗಾಗಿ ಪಾರ್ವತಿ  ದೇವಿಯು ಆಟದಲ್ಲಿ ಮೋಸ ಆಗಬಾರದು ಎಂದು ತೀರ್ಪುಗಾರರು ಇರಲಿ ಎಂದು ಶಿವನಿಂದ  ಸೃಷ್ಟಿಸಲ್ಪಟ್ಟ  ಚಿತ್ರನೇಮಿಯನ್ನು  ನೇಮಿಸಿದಳು ಆದರೆ ಚಿತ್ರನೇಮಿಯೋ  ಶಿವನ ಭಂಟ ಶಿವನದೆ ಎಲ್ಲವು ಗೆಲುವು ಎಂದು ತೀರ್ಪು ನೀಡಿದ್ದರಿಂದ ಕುಪಿತಗೊಂಡ ಪಾರ್ವತಿಯು ಆತನನ್ನು ಭೂಲೋಕದಲ್ಲಿ ಜನಿಸಿ ಕುಷ್ಟರೋಗಿಯಾಗೆಂದು ಶಾಪವನಿತ್ತಳು . ಆಗ ಪರಮಶಿವನು  ಪಾರ್ವತಿ ದೇವಿಗೆ ತಾನು ಮಾಡಿದ್ದ ವೃತ್ತಾಂತವನ್ನು  ವಿವರಿಸಿದನು ; ಪಾರ್ವತಿ  ದೇವಿಗೆ ಅನ್ಯಾಯವಾಗಿ ಶಾಪವಿತ್ತನಲ್ಲ ಎಂದು ಭಾವಿಸಿದಳು.ಚಿತ್ರನೇಮಿಯು ತನ್ನ ಶಾಪದ ವಿಮೋಚನೆ ಹೇಗೆ ತಾಯಿ ಎಂದು ಕೇಳಿಕೊಂಡನು ಆಗ ತಾಯಿ ವರಮಹಾಲಕ್ಷ್ಮಿ ವ್ರತವನ್ನು  ಆಚರಿಸಿದರೆ ನಿನ್ನ ಕುಷ್ಟ ರೋಗವು ಪರಿಹಾರವಾಗಿ ಮಂಗಳವಾಗುವುದು .

                                              ಹೀಗೆ ಈ ವ್ರತದ ಆಚರಣೆಯನ್ನು ಭಗವಾನ್  ಶಿವ ಮತ್ತು ಪಾರ್ವತಿ ದೇವಿಯಿಂದ  ಭೂಲೋಕದಲ್ಲಿ ಎಲ್ಲರೂ  ಆಚರಿಸುವ ಪರಿ ಶುರುವಾಯಿತು . ಈ ವ್ರತವನ್ನು ಯಾರು ಆಚರಿಸುವರೋ  ಅವರಿಗೆ ಸಕಲ ಸೌಭಾಗ್ಯ ಮತ್ತು ಸಂಪತ್ತುಗಳಿಂದ  ತಾಯಿ ವರಮಹಾಲಕ್ಷ್ಮೀ  ದೇವಿಯು ಕರುಣಿಸುವಳು .

                                             ಮೊದಲು  ವಿನಾಯಕನ ಪೂಜೆ , ಯಮುನಾ ದೇವಿ ಕಲಶಕ್ಕೆ  ಪೂಜೆ ಸಲ್ಲಿಸಿ ತದನಂತರ ತುಲಸಿ  ಪೂಜೆ ಮಾಡಿ , ನಂತರ ವರಮಹಾಲಕ್ಷ್ಮೀ  ಪೂಜೆಯನ್ನು  ಆಚರಿಸಬೇಕು . ಯಮುನಾ ಕಲಶದ ಆಚರಣೆ  ಸಂಪ್ರದಾಯವಿದ್ದರೆ ಆಚರಿಸಬೇಕು .ಅವರವರ ಗುರು -ಹಿರಿಯರಲ್ಲಿ  ವಿಚಾರಣೆ ಮಾಡಿ ಆಚರಣೆ ಮಾಡಬಹುದು .  


ಯಮುನಾ ಕಲಶ  ಪೂಜೆ

ಧ್ಯಾನ :

ಲೋಕಪಾಲಸ್ತುತಾಂ  ದೇವೀಂ  ಇಂದ್ರನೀಲ ಸಮಪ್ರಭಾಮ್ ।
ಯಮುನೇ  ತ್ವಾಮಹಂ  ಧ್ಯಾಯೇತ್ಸರ್ವಕಾಮ್ಯಾರ್ಥಸಿದ್ಧಯೇ  ।।

ಶ್ರೀ ಯಮುನಾಯೈ  ನಮಃ । ಧ್ಯಾಯಾಮಿ  ಧ್ಯಾನಂ ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು .

ಆವಾಹನೆ :

ಕ್ಷೀರೋದಾರ್ಣವಸಂಭೂತೇ  ಕ್ಷೀರವರ್ಣೋದಶೋಭಿತೇ ।
ಪ್ರಸನ್ನಾ  ಭಾವ ಮೇ ದೇವಿ  ಯಮುನೇ  ತೇ ನಮೋ ನಮಃ ।।

ಶ್ರೀ ಯಮುನಾಯೈ  ನಮಃ ।ಆವಾಹಯಾಮಿ ।ಆವಾಹನಂ  ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು. 

ಸಿಂಹಾಸನ :

ಸಿಂಹಾಸನ  ಸಮಾರೂಢೇ ದೇವಶಕ್ತಿ  ಸಮನ್ವಿತೇ ।
ಸರ್ವಲಕ್ಷಣ ಸಂಪೂರ್ಣೇ    ಯಮುನಾಯೈ  ನಮೋಸ್ತುತೇ ।।

 ಶ್ರೀ ಯಮುನಾಯೈ  ನಮಃ । ಸಿಂಹಾಸನಂ  ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು.

ಪಾದ್ಯ :

ಗರುಡಾಗ್ರಜಸಂಭೂತೇ  ಶಂಕರಪ್ರಿಯಭಾಮಿನಿ ।
ಸರ್ವಕಾಮಪ್ರದೇ ದೇವಿ ಯಮುನೇ  ತೇ ನಮೋ ನಮಃ ।।

ಶ್ರೀ ಯಮುನಾಯೈ  ನಮಃ । ಪಾದಯೋಃ   ಪಾದ್ಯಂ ಪಾದ್ಯಂ ಸಮರ್ಪಯಾಮಿ ।। ಒಂದು ಉದ್ದರಣೆ  ನೀರನ್ನು  ಯಮುನಾ ಕಲಶಕ್ಕೆ ತೋರಿಸಿ ಅರ್ಘ್ಯ ಪಾತ್ರೆಗೆ ಬಿಡುವುದು .


ಅರ್ಘ್ಯ :

ರುದ್ರಪಾದೇ  ನಮಸ್ತುಭ್ಯಂ ಸರ್ವಲೋಕ ಹಿತೇ ಶುಭೇ ।
ಸರ್ವಪಾಪ ಪ್ರಶಮನೀ  ತರಂಗಿಣ್ಯೈ  ನಮೋಸ್ತುತೇ ।।

ಶ್ರೀ ಯಮುನಾಯೈ  ನಮಃ । ಹಸ್ತಯೋಃ  ಅರ್ಘ್ಯಮರ್ಘ್ಯಂ ಸಮರ್ಪಯಾಮಿ ।। ಒಂದು ಉದ್ದರಣೆ  ನೀರನ್ನು  ಯಮುನಾ ಕಲಶಕ್ಕೆ ತೋರಿಸಿ ಅರ್ಘ್ಯ ಪಾತ್ರೆಯಲ್ಲಿ ಬಿಡುವುದು . 


 ಪಂಚಾಮೃತ ಸ್ನಾನ :

ನಂದಿಪಾದೇ  ನಮಸ್ತುಭ್ಯಂ ಶಂಕರಾರ್ಧಶರೀರಿಣಿ ।
ಸರ್ವಲೋಕಹಿತೇ  ದೇವಿ ಭೀಮರಥ್ಯೈ  ನಮೋ ನಮಃ ।।
ಪಂಚಮೃತಸ್ನಾನಮಿದಂ  ದಧ್ಯಾಜ್ಯಮಧು  ಸಂಯುತಮ್ ।
ಶರ್ಕರಾಕ್ಷೀರ  ಸಂಯುಕ್ತಂ ಗೃಹಾಣ ಜಗದೀಶ್ವರಿ ।।

ಶ್ರೀ ಯಮುನಾಯೈ  ನಮಃ । ಪಂಚಾಮೃತ ಸ್ನಾನಂ ಸಮರ್ಪಯಾಮಿ ।। ಒಂದು ಹೂವಿನಿಂದ ಹಾಲು ,ಮೊಸರು ತುಪ್ಪ, ಸಕ್ಕರೆ , ಜೇನುತುಪ್ಪದಲ್ಲಿ ಅದ್ದಿ  ಕಲಶದ ಮೇಲೆ ಪ್ರೋಕ್ಷಿಸುವುದು .

ಗೋದಾವರ್ಯೈ  ನಮಸ್ತುಭ್ಯಂ  ಗೌತಮಸ್ಯಾಘನಾಶಿನಿ ।
ಸರ್ವಪಾಪ ಪ್ರಶಮಿನೀ  ಶಿವರೂಪಿ ನಮೋಸ್ತುತೇ ।।

ಶ್ರೀ ಯಮುನಾಯೈ  ನಮಃ ।ಶುದ್ಧೋದಕ  ಸ್ನಾನಂ ಸಮರ್ಪಯಾಮಿ ।।  ನೀರಿನಿಂದ  ಪ್ರೋಕ್ಷಣೆ ಮಾಡುವುದು .

              ಸ್ನಾನಾಂಗಮಾಚಮನಂ  ಸಮರ್ಪಯಾಮಿ ।।ಒಂದು ಉದ್ದರಣೆ  ನೀರನ್ನು ಅರ್ಘ್ಯ ಪಾತ್ರೆಗೆ  ಬಿಡುವುದು . 


ವಸ್ತ್ರ :

ವಿಷ್ಣುಪಾದಾಬ್ಜಸಂಭೂತೇ  ಗಂಗೇ  ತ್ರಿಪಥಗಾಮಿನಿ ।
ಸರ್ವಪಾಪಹರೇ ದೇವಿ ಭಾಗೀರಥ್ಯೈ  ನಮೋಸ್ತುತೇ ।।

ಶ್ರೀ ಯಮುನಾಯೈ  ನಮಃ । ಶ್ವೇತವಸ್ತ್ರದ್ವಯಂ  ಸಮರ್ಪಯಾಮಿ ।। ಗೆಜ್ಜೆವಸ್ತ್ರವನ್ನು ಕಲಶಕ್ಕೆ ಇಡುವುದು .

ರವಿಕೆ :
ತ್ರ್ಯಂಬಕಸ್ಯ  ಜಟೋ ದ್ಭೂತೇ  ದಿವ್ಯಶಕ್ತಿ ಸಮನ್ವಿತೇ ।
ಸಪ್ರಥಾ ಪ್ರಾಗತಂ ಯಾತೇ  ಗಂಗಾಯೈ  ತೇ ನಮೋ ನಮಃ ।।

ಶ್ರೀ ಯಮುನಾಯೈ  ನಮಃ । ಕಂಚುಕಂ ಸಮರ್ಪಯಾಮಿ ।। ರೇಷ್ಮೆಯ ಕಣ ಇಡುವುದು .


ಉಪವೀತ :

ಸೌವರ್ಣಂ  ಬ್ರಹ್ಮಸೂತ್ರಂ ಚ  ಬ್ರಹ್ಮಣಾ  ನಿರ್ಮಿತಂ  ಪುರಾ ।
ಅಹಂ ದಾಸ್ಯಾಮಿ ದೇವೇಶೀ  ಯಮುನಾಯೈ  ನಮೋಸ್ತುತೇ ।।

 ಶ್ರೀ ಯಮುನಾಯೈ  ನಮಃ । ಯಜ್ಞೋಪವೀತಂ  ಸಮರ್ಪಯಾಮಿ ।।ಹೂವು ಮಂತ್ರಾಕ್ಷತೆಗಳನ್ನು  ಅರ್ಪಿಸುವುದು . 


ಗಂಧ :

ಚಂದನಾಗರು  ಕಸ್ತೂರೀ  ರೋಚನಂ ಕುಂಕುಮಂ ತಥಾ ।
ಕರ್ಪೂರೇಣ  ಸಮಾಯುಕ್ತಾಂ ಗಂಧಂ ದಧ್ಮಿ ಚ ಭಕ್ತಿತಃ ।।

ಶ್ರೀ ಯಮುನಾಯೈ  ನಮಃ । ನಾನಾವಿಧ ಆಭರಣಾನಿ  ಸಮರ್ಪಯಾಮಿ ।। ಆಭರಣಗಳಿಂದ  ಅಲಂಕರಿಸುವುದು .

ಪುಷ್ಪ :

ಮಂದಾರಮಾಲತೀಜಾಜೀ  ಕೇತಕೀಪಾಟಲೈಶ್ಯುಭ್ಯೈಃ ।
ಪೂಜಯಾಮಿ ಸದಾ ದೇವಿ ಯಮುನೇ  ಭಕ್ತವತ್ಸಲೇ ।।

ಶ್ರೀ ಯಮುನಾಯೈ  ನಮಃ ।ನಾನಾವಿಧ ಪರಿಮಳ ಪುಷ್ಪಾಣಿ ಸಮ ಸಮರ್ಪಯಾಮಿ ।। ಹೂವಿನ ಮಾಲಿಕೆಯನ್ನು ಅರ್ಪಿಸುವುದು . 


ಅರಿಶಿನ :

ಸೌಭಾಗ್ಯ ಸುಖದೇ ದೇವಿ ಸರ್ವಮಂಗಳದಾಯಿಕೇ ।
ಹರಿದ್ರಾಂ ತೇ  ಪ್ರಯಚ್ಛಾಮಿ  ಗ್ಗೃಹಾಣ  ವರದಾ ಭವ ।।

ಶ್ರೀ ಯಮುನಾಯೈ  ನಮಃ । ಹರಿದ್ರಾಚೂರ್ಣಂ  ಸಮರ್ಪಯಾಮಿ ।। ಅರಿಶಿನದಿಂದ ಪೂಜಿಸುವುದು .


ಕುಂಕುಮ :

ಕುಂಕುಮಂ ಕಾಂತಿದಂ  ದಿವ್ಯಂ  ಸರ್ವಕಾಮಫಲಪ್ರದಂ ।
ಸರ್ವದೇವೈಶ್ಚ  ಸಂಪೂಜ್ಯೇ  ಗೃಹಾಣ  ಪರಮೇಶ್ವರೀ ।।

ಶ್ರೀ ಯಮುನಾಯೈ  ನಮಃ । ಕುಂಕುಮಚೂರ್ಣಂ  ಸಮರ್ಪಯಾಮಿ ।। ಕುಂಕುಮದಿಂದ ಪೂಜೆ ಮಾಡುವುದು .

ಚಂದ್ರ :

ಮಹಾದೇವಿ  ನಮಸ್ತುಭ್ಯಂ ಸಂಧ್ಯಾವಂದರುಣಪ್ರಭಮ್ ।
ವೀರಾಲಂಕರಣಂ  ದಿವ್ಯಂ ಸಿಂಧೂರಂ  ಪ್ರತಿಗುಹ್ಯತಾಮ್ ।।

ಶ್ರೀ ಯಮುನಾಯೈ  ನಮಃ । ಸಿಂಧೂರಂ  ಸಮರ್ಪಯಾಮಿ ।। ಚಂದನದಿಂದ ಪೂಜೆ ಮಾಡುವುದು .


                                                          ಅಂಗ  ಪೂಜಾ

ಓಂ ಚಂಚಲಾಯೈ  ನಮಃ                              ಪಾದೌ  ಪೂಜಯಾಮಿ
ಓಂ ಚಪಲಾಯೈ  ನಮಃ                                ಜಾನುನೀಂ  ಪೂಜಯಾಮಿ
ಓಂ ಭಕ್ತವತ್ಸಲಾಯೈ  ನಮಃ                           ಕಟಿಂ ಪೂಜಯಾಮಿ
ಓಂ ಮಹೋದರಾಯೈ  ನಮಃ                         ನಾಭಿಂ ಪೂಜಯಾಮಿ
ಓಂ ಭಾಗೀರಥ್ಯೈ  ನಮಃ                                 ಹೃದಯಂ  ಪೂಜಯಾಮಿ
ಓಂ ಕೃಷ್ಣವೇಣ್ಯೈ  ನಮಃ                                  ಸ್ತನೌ  ಪೂಜಯಾಮಿ
ಓಂ ಲಲಿತಾಯೈ  ನಮಃ                                  ಭುಜೌ ಪೂಜಯಾಮಿ
ಓಂ ನೀಲವರ್ಣಾಯೈ  ನಮಃ                            ಸ್ಕಂದೌ ಪೂಜಯಾಮಿ
ಓಂ ಉತ್ಕಂಠ್ಯೈ  ನಮಃ                                   ಕಂಠಮ್  ಪೂಜಯಾಮಿ
ಓಂ ರಮಾಯೈ  ನಮಃ                                    ಮುಖಂ ಪೂಜಯಾಮಿ
ಓಂ ತ್ರೈಲೋಕ್ಯಜನನ್ಯೈ  ನಮಃ                          ಲಲಾಟಂ  ಪೂಜಯಾಮಿ
ಓಂ ಭಾಗೀರಥ್ಯೈ  ನಮಃ                                   ಶಿರಃ ಪೂಜಯಾಮಿ
ಓಂ ಯಮುನಾಯೈ  ನಮಃ                                ಸರ್ವಾಣ್ಯಂಗಾನಿ  ಪೂಜಯಾಮಿ


                                            ನಾಮ ಪೂಜಾ

ಓಂ ಯಮುನಾಯೈ  ನಮಃ                                             ಓಂ ಸಂಸರತ್ಯೈ  ನಮಃ
ಓಂ ಸೀತಾಯೈ  ನಮಃ                                                  ಓಂ ಕಾವೇರ್ಯೈ  ನಮಃ
ಓಂ ವಿಮಲಾಯೈ  ನಮಃ                                                ಓಂ  ಸಿಂಧವೇ  ನಮಃ
ಓಂ ಉತ್ಪಲಾಯೈ  ನಮಃ                                                ಓಂ ಗೌತಮ್ಯೈ  ನಮಃ
ಓಂ  ಅಭೀಷ್ಟದಾಯೈ  ನಮಃ                                            ಓಂ ಗಾಯತ್ರ್ಯೈ  ನಮಃ
ಓಂ  ನರ್ಮದಾಯೈ  ನಮಃ                                              ಓಂ ಗರುಡಾಯೈ ನಮಃ
ಓಂ  ಗೌರ್ಯೈ  ನಮಃ                                                      ಓಂ ಗಿರಿಜಾಯೈ  ನಮಃ
ಓಂ  ಭಾಗೀರಥ್ಯೈ  ನಮಃ                                                  ಓಂ ಚಂದ್ರಚೂಡಾಯೈ  ನಮಃ  
ಓಂ  ತುಂಗಾಯೈ  ನಮಃ                                                  ಓಂ ಸರ್ವೈಶ್ವರ್ಯೈ  ನಮಃ
ಓಂ  ಭದ್ರಾಯೈ  ನಮಃ                                                     ಓಂ ಮಹಾಲಕ್ಷ್ಮ್ಯೈ  ನಮಃ
ಓಂ  ಕೃಷ್ಣವೇಣ್ಯೈ  ನಮಃ                                                    ಓಂ ಯಮುನಾಯೈ  ನಮಃ
ಓಂ  ಭವನಾಶಿನ್ಯೈ  ನಮಃ                                                  ಓಂ ಹರಿಹರರೂಪಿಣ್ಯೈ  ನಮಃ


ಸರ್ವಪಾಪಹರೇ ದೇವೀ ಸರ್ವೋಪದ್ರವನಾಶಿನೀ ।
ಸರ್ವಸಂಪತ್ಪ್ರದೇ  ದೇವೀ ಯಮುನಾಯೈ  ನಮೋಸ್ತುತೇ ।।
ನಾಮಪೂಜಾಂ  ಸಮರ್ಪಯಾಮಿ ।।


ಧೂಪ :

ದಶಾಂಗಂ  ಗುಗ್ಗುಲೋಪೇತಂ  ಸುಗಂಧಂ ಚ ಮನೋಹರಮ್ ।
ಕಪಿಲಾಘೃತ  ಸಂಯುಕ್ತಂ ಧೂಪಂ ಸ್ವೀಕುರು  ಸೂರ್ಯಜೇ ।।

ಶ್ರೀ ಯಮುನಾಯೈ  ನಮಃ । ಧೂಪಮಾಘ್ರಾಪಯಾಮಿ ।। ಅಗರಬತ್ತಿ ಬೆಳಗುವುದು .


ಏಕಾರ್ತಿದೀಪ :

ಘೃತವರ್ತಿ  ಸಮಾಯುಕ್ತಂ ವಹ್ನಿನಾ ಯೋಜಿತಂ  ಮಯಾ ।
ಗೃಹಾಣ  ದೀಪಂ ದೇವಿ ತ್ವಂ ಸರ್ವೈಶ್ವರ್ಯಪ್ರದಾಯಿನೀ ।।

ಶ್ರೀ ಯಮುನಾಯೈ  ನಮಃ ।ಏಕಾರ್ತಿದೀಪಂ  ದರ್ಶಯಾಮಿ ।। ಮೂರು ತುಪ್ಪದ ಬತ್ತಿಗಳನ್ನು  ಹಚ್ಚಿ ಬೆಳಗುವುದು .


ಧೂಪದೀಪಾನಂತರೇ  ಆಚಮನಮ್ ।ಆಚಮನಾನಂತರೇ  ಪತ್ರಪುಷ್ಪಾಣಿ  ಸಮರ್ಪಯಾಮಿ ।। ಒಂದು ಉದ್ಧರಣೆ ನೀರನ್ನು ಬಿಟ್ಟು ಹೂವನ್ನು  ಪೂಜಿಸುವುದು .

ನೈವೇದ್ಯ :

ಸರ್ವಭಕ್ಷ್ಯೈಶ್ಚಭೋಜ್ಯೈಶ್ಚ  ರಸೈಃ  ಷಡ್ಭಿಃ  ಸಮನ್ವಿತಂ ।
ನೈವೇದ್ಯಂ  ಚ  ಸಮಾನೀತಂ  ಸ್ವೀಕುರುಷ್ವ  ಮಹೇಶ್ವರೀ ।।

ಮಂಡಲ ಮಾಡಿ , ನೈವೇದ್ಯಕ್ಕೆ  ಇಟ್ಟು, ಪ್ರೋಕ್ಷಿಸಿ , ಪ್ರದಿಕ್ಷಿಣಾಕಾರವಾಗಿ  ಪರಿಷೇಚನ  ಮಾಡುವುದು .


ಓಂ  ವಿಶ್ವಾಮಿತ್ರ  ಋಶಿಃ । ಸವಿತಾ ದೇವತಾ ಗಾಯತ್ರಿ ಛಂದಃ ।
ಓಂ ತತ್ಸ ..........................................  ಪ್ರಚೋದಯಾತ್ ।


ಸತ್ಯಂತ್ವರ್ತೇನ    ಪರಿಷಿಂಚಾಮಿ ।।

ಓಂ ಪ್ರಾಣಾಯ ಸ್ವಾಹಾ । ಓಂ ಅಪಾನಾಯ ಸ್ವಾಹಾ  । ಓಂ  ವ್ಯಾನಾಯ ಸ್ವಾಹಾ  । ಓಂ ಉದಾನಾಯ ಸ್ವಾಹಾ  । ಓಂ ಸಮಾನಾಯ ಸ್ವಾಹಾ  । ಓಂ ಬ್ರಹ್ಮಣೇ ಸ್ವಾಹಾ ।। ಶ್ರೀ ಯಮುನಾಯೈ  ನಮಃ ।ನಾನಾವಿಧ ನೈವೇದ್ಯಂ  ಸಮರ್ಪಯಾಮಿ ।
ನಾರಿಕೇಳಫಲಂ (ತೆಂಗಿನಕಾಯಿ ) ಕದಲೀಫಲಂ  (ಬಾಳೆಹಣ್ಣು ) ನಿವೇದಯಾಮಿ ।। ಹಸ್ತಪ್ರಕ್ಷಾಲನಂ  ಸಮರ್ಪಯಾಮಿ ।
ಪಾದಪ್ರಕ್ಷಾಲನಂ , ಪುನರಾಚಮನಂ  ಸಮರ್ಪಯಾಮಿ ।। ಮೂರು ಸಾರಿ ನೀರನ್ನು ಬಿಡುವುದು .


ತಾಂಬೂಲ :

ಫೂಗೀಫಲ  ಸಮಾಯುಕ್ತಂ ನಾಗವಲ್ಲೀದಳೈರ್ಯುತಮ್ ।
ಕರ್ಪೂರಚೂರ್ಣಸಂಯುಕ್ತಂ  ತಾಂಬೂಲಂ  ಪ್ರತಿಗುಹ್ಯತಾಂ ।।

ಶ್ರೀ ಯಮುನಾಯೈ  ನಮಃ ।ಫೂಗೀಫಲ  ತಾಂಬೂಲಂ ಸಮರ್ಪಯಾಮಿ ।।ಸುವರ್ಣಪುಷ್ಪದಕ್ಷಿಣಾಂ  ಸಮರ್ಪಯಾಮಿ ।। ತಾಂಬೂಲ , ದಕ್ಷಿಣೆ  ಸಹಿತ ನೀರು ಬಿಡುವುದು .

ತಾಂಬೂಲಾನಂತರೇ  ಆಚಮನಂ  ಸಮರ್ಪಯಾಮಿ । ಆಚಮನಾನಂತರೇ  ಪತ್ರಪುಷ್ಪಾಣಿ  ಸಮರ್ಪಯಾಮಿ ।। ಒಂದು ಉದ್ಧರಣೆ ನೀರನ್ನು  ಬಿಟ್ಟು ಹೂಗಳನ್ನು  ಸಮರ್ಪಿಸುವುದು .

ನೀರಾಜನಂ :

ನೀರಾಜನಂ ಸಕರ್ಪೂರಂ ಘೃತವರ್ತಿ  ಸಮನ್ವಿತಂ ।
ಗೃಹಾಣ  ಮಂಗಳಂ ದೀಪಂ  ಯಮುನಾಯೈ  ನಮೋಸ್ತುತೇ ।।

ಶ್ರೀ ಯಮುನಾಯೈ  ನಮಃ ।ಕರ್ಪೂರ ಮಂಗಳ ನೀರಾಜನಂ ದರ್ಶಯಾಮಿ ।। ಅಗರಬತ್ತಿ  ಹಚ್ಚಿ , ಕರ್ಪೂರ ಮಂಗಳಾರತಿ ಮಾಡುವುದು .

ನೀರಜನಾನಂತರೇ   ಆಚಮನಮ್ । ಆಚಮನಾನಂತರೇ  ಪತ್ರಪುಷ್ಪಾಣಿ  ಸಮರ್ಪಯಾಮಿ ।। ಒಂದು ಉದ್ಧರಣೆ ನೀರು ಹಾಕಿ  ಹೂವನ್ನು  ಸಮರ್ಪಿಸುವುದು .


ಪ್ರದಕ್ಷಿಣೆ :

ಕೇತಕೀಜಾಜಿಕುಸುಮೈಃ  ಮಲ್ಲಿಕಾಮಾಲತೀಶುಭ್ಯೈಃ ।
ಪುಷ್ಪಾಂಜಲಿರ್ಮಯಾದತ್ತೋರುದ್ರಪ್ರೀತ್ಯೈ  ನಮೋಸ್ತುತೇ ।।

ಶ್ರೀ ಯಮುನಾಯೈ  ನಮಃ ।ಪುಷ್ಪಾಂಜಲೀಂ  ಸಮರ್ಪಯಾಮಿ । ಪ್ರದಕ್ಷಿಣ  ನಮಸ್ಕಾರಾನ್  ಸಮರ್ಪಯಾಮಿ ।। ಪ್ರದಕ್ಷಿಣೆ  ನಮಸ್ಕಾರ ಮಾಡಬೇಕು .



ಯಸ್ಯ  ಸ್ಮೃತ್ಯಾ  ಚ ನಾಮೋಕ್ತ್ಯಾ  ತಪಃ ಪೂಜಾ ಕ್ರಿಯಾದಿಷು ।
ನ್ಯೂನ್ಯಂ  ಸಂಪೂರ್ಣತಾಂ  ಯಾತಿ ಸದ್ಯೋ  ವಂದೇ ವಿಷ್ಣುಪ್ರಿಯಾಮ್ ।।
ಮಂತ್ರಹೀನಂ  ಕ್ರಿಯಾಹೀನಂ  ಭಕ್ತಿಹೀನಂ  ಹರಿವಲ್ಲಭೇ ।
ಯತ್ಪೂಜಿತಂ ಮಯಾ  ದೇವಿ  ಪರಿಪೂರ್ಣಂ  ತದಸ್ತು ಮೇ ।।


ಅನೇನ ಶ್ರೀ ಯಮುನಾ ಪೂಜಾವಿಧಾನೇನ  ಭಗವತೀ  ಸರ್ವಾತ್ಮಿಕಾ ಶ್ರೀ ಯಮುನಾದೇವೀ  ಸುಪ್ರೀತಾ ಸುಪ್ರಸನ್ನಾ ವರದಾ ಭವತು ।ಒಂದು ಉದ್ಧರಣೆ ನೀರು ಬಿಡುವುದು .


ಸುರಾಸುರೇಂದ್ರಾದಿ  ಕಿರೀಟ  ಮೌಕ್ತಿಕೈಃಯುಕ್ತಂ  ಸದಾಯುತ್ತವ ಪಾದಪಂಕಜಮ್ ।
ಪರಾರವಂ  ಪಾತು ವರಂ  ಸುಮಂಗಳಂ  ನಮಾಮಿ  ಭಕ್ತ್ಯಾ  ಮಾಮ ಕಾಮ ಸಿದ್ಧಯೇ ।।

ನಮಸ್ಕರಿಸಿ  ಪ್ರಸಾದ  ತೆಗೆದುಕೊಳ್ಳುವುದು . ಕರ್ತೃವು  ಯಮುನಾ ಕಲಶದ  ತಟ್ಟೆಯನ್ನು  ಕೈಯಲ್ಲಿ  ಹಿಡಿದು  ಉತ್ತರ ಅಥವಾ ಪೂರ್ವದಿಕ್ಕಿಗೆ  ನಿಂತುಕೊಳ್ಳುವುದು . ಆರತಿ ಮಾಡಿದ ಮೇಲೆ  ಶಂಖ , ಜಾಗಟೆ , ಘಂಟೆ  ಮುಂತಾದ ಮಂಗಳವಾದ್ಯದೊಡನೆ  ಗೃಹಪ್ರವೇಶ  ಮಾಡುವುದು .  ಯಮುನಾ ಕಲಶದ ನೀರನ್ನು  ಕಲಶಗಳಿಗೆ ಹಾಕುವುದು


ಯಮುನಾ ಪೂಜೆಯ ನಂತರ ವರಮಹಾಲಕ್ಷ್ಮೀ  ವ್ರತವನ್ನು  ಆಚರಿಸಬೇಕು . 


Please check the below link for full vratha vidhana  and kathe in Kannada script:

                                            Varamahalakshmi Vrata


Audio  link :

SriVaramahalakshmiVrata.php


Significance of Lakshmi,Ganesha Stotram And History



Youtube  link :

ಹಾಲಿನ ಕಡಲಿಂದ ......
ಘಲ ಘಲನೆ ಗೆಜ್ಜೆ .....

No comments :

Post a Comment