Pages

Monday, August 12, 2013

MangalaGowri Vrata 2015



                                                     ಮಂಗಳಗೌರಿ ಪೂಜೆ 

                                                                 
                                                                   
Mangala Gowri 2015 dates are as follows:
8/18/2015,8/25/2015,9/1/2015 and 9/8/2015
                                                                               

                                                  ಮಂಗಳಗೌರಿ ವ್ರತವನ್ನು  ಶ್ರಾವಣ ಮಾಸದ ಮಂಗಳವಾರದಂದು ಪ್ರಾತಃ ಕಾಲದಲ್ಲಿ  ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಹಾಗೂ  ಕನ್ಯೆಯರು  ಆಚರಿಸುತ್ತಾರೆ . ಈ ವ್ರತವನ್ನು ಐದು ವರ್ಷಗಳು ಆಚರಿಸಿ ತದನಂತರ ಉದ್ಯಾಪನೆ ಮಾಡುತ್ತಾರೆ . ಭವಿಷ್ಯೋತ್ತರ ಪುರಾಣದಲ್ಲಿ ಈ ವ್ರತವನ್ನು ಉಲ್ಲೇಖಿಸಿದ್ದಾರೆ . ಇದನ್ನು ಕನ್ಯೆಯರು ಮತ್ತು ಮುತೈದೆಯರು  ತಮ್ಮ ಪತಿಯ ಆಯುರ್  ವೃದ್ಧಿಗಾಗಿ  ಸಕಲ ಸೌಭಾಗ್ಯವನ್ನುಗಳಿಸಲು  ತಾಯಿ ಮಂಗಳಗೌರಿಯ ಪೂಜೆಯನ್ನು ಭಕ್ತಿಯಿಂದ ಆಚರಿಸುತ್ತಾರೆ .


ಪೂಜೆಗೆ ಬೇಕಾದ ಸಾಮಾಗ್ರಿಗಳು :ಮಣೆ , (ರಂಗೋಲಿ ಹಾಕಬೇಕು ) ಕಳಸ ,೩೨ (32)ವೀಳ್ಯದೆಲೆ ,೩೨(32) ಬಟ್ಳಡಿಕೆ (ಮದ್ರಾಸ್ ಸುಪಾರಿ ), ೫(5) ಜರಿ ಅಂಚಿನ ಬ್ಲೌಸ್ ಪೀಸ್ , ೨ (2) ಅರಿಶಿನ ಗೌರಿಗಳು ,ಗೌರಿಯನ್ನು ಇಡುವುದಕ್ಕೆ ೨ (2)ವೀಳ್ಯದೆಲೆ ,೨(2) ಅಡಿಕೆ ,ಕಳಸಕ್ಕೆ ೫ (5)ವೀಳ್ಯದೆಲೆ ,ಒಂದು ಮೌಚೆಕಾಯಿ ( steel or  brass spatula ) ಕಣ್ಣು  ಕಪ್ಪು  ಮಾಡುವುದಕ್ಕೆ ,ಒಂದು ಬೆಳ್ಳಿ ಗಣೇಶ , ಪಂಚಾಮೃತ ಅಭಿಷೇಕಕ್ಕೆ  ಹಾಲು,ಮೊಸರು,ತುಪ್ಪ,ಜೇನುತುಪ್ಪ  ಹಾಗು ಮೊಸರು .ಎಲ್ಲವನ್ನು ಒಂದು ತಟ್ಟೆಯಲ್ಲಿ ಈ ರೀತಿ ಜೋಡಿಸಬೇಕು.( ಹಾಲು  -ಮಧ್ಯದಲ್ಲಿ ಇಡಬೇಕು ,ಮೊಸರು - ಪೂರ್ವದಲ್ಲಿ ಇಡಬೇಕು. ತುಪ್ಪ- ದಕ್ಷಿಣದಲ್ಲಿ ಇಡಬೇಕು. ಜೇನು ತುಪ್ಪ - ಪಶ್ಚಿಮದ  ಕಡೆ ಇಡಬೇಕು  ಹಾಗು ಸಕ್ಕರೆಯನ್ನು - ಉತ್ತರದಲ್ಲಿ ಇಡಬೇಕು. )    ೨(2) ಒಣಕೊಬ್ಬರಿಬಟ್ಟಲು ,ಒಂದು ಕಂಚುಕ (ಚೊಂಬು ) ಅದ್ರಲ್ಲಿ ೧೬(16) ಸಣ್ಣ ತಂಬಿಟ್ಟು ಉಂಡೆ ಹಾಕಬೇಕು ಅದನ್ನು ಒಂದು ಬ್ಲೌಸ್ ಪೀಸ್ ಅನ್ನು ಬಳಸಿ  ಮುಚ್ಚಬೇಕು . ಒಂದು ಕನ್ನಡಿ ,ಬಳೆ  ಬಿಚ್ಚೋಲೆ ,ಅರಿಶಿನ ಕುಂಕುಮ  ಪೊಟ್ಟಣ , ದೀಪದ ಕಂಬಗಳು,ಆರತಿ ತಟ್ಟೆ ಹಾಗು ದೀಪಗಳು , ತುಪ್ಪದ ಮಂಗಳಾರತಿ ಬತ್ತಿ,ಹೂವುಗಳು ,ಪತ್ರೆಗಳು ,೧೬ (16)ತಂಬಿಟ್ಟು ಸೊಡಲು  ದೀಪ,  ೧೬ (16)ತುಪ್ಪದ ಬತ್ತಿ , ೧೬ (16)ಗುಳ್ಳ (make tambittu  in  triangle  shape  for  Lord Ganapathi)ತೆಂಗಿನಕಾಯಿಗಳು ನೈವೇದ್ಯಕ್ಕಾಗಿ  ೫(5) ಬಗೆಯ ಹಣ್ಣುಗಳು ತೆಂಗಿನಕಾಯಿ ತಾಂಬೂಲ ದಕ್ಷಿಣೆ , ಭಕ್ಷ್ಯಗಳು ,ಹಾಲು ಸಕ್ಕರೆ  .  ಯಥಾ ಶಕ್ತಿ ಏನಾದರು ಮಾಡಿ  ನೈವೇದ್ಯ ಮಾಡಬಹುದು . 
                                             
                                      ಮದುವೆಯಾದ ಹೆಣ್ಣುಮಗಳು ಮೊದಲವರ್ಷ ತಾಯಿಗೆ ಬಾಗಿನ ಕೊಡಬೇಕು  ಹಾಗೆ ೫ನೇ  ವರ್ಷ ತಾಯಿಗೆ ಒಂದು ಬೆಳ್ಳಿ ಚೊಂಬಿನಲ್ಲಿ ೧೬(16)ತಂಬಿಟ್ಟಿನ ಉಂಡೆಗಳನ್ನು ಹಾಕಿ ಅದನ್ನು ಒಂದು ಬ್ಲೌಸ್ ಪೀಸ್ ಇಂದ ಕಟ್ಟಬೇಕು ,ಮತ್ತು ಮೊರದಬಾಗಿನದಲ್ಲಿ  ಧಾನ್ಯಗಳ ಜೊತೆ ತಾಯಿಗೆ ಸೀರೆ ಕುಪ್ಪಸ ,ಬಳೆಗಳು  ,ಹಣ್ಣುಗಳು ,ಪುರಿ ಉಂಡೆ,
ಕಾಲುಂಗುರ,ಚಕ್ಕಲಿ,ತೇಂಗೋಳು,ಒಬ್ಬಟ್ಟು ,ಕರ್ಜಿಕಾಯಿ,ಹುರಿಗಾಳು ಸ್ವಲ್ಪ ಚಕ್ಕಲಿ ಹಿಟ್ಟು  ಹಾಕಿ ಬಾಗಿನ ಕೊಡಬೇಕು .  

Morada  Jothe  Ingredients 
new mora-2
news paper or  Banana leaves 
  1. rice-2 cups
  2. togari bele-1 cup
  3. kadale bele-1 cup
  4. uddina bele-1cup
  5. hesaru bele-1 cup
  6. rava(sooji ) or godi -1 cup 
  7. bellada achhu-1
  8. salt-1/2 cup(madhwas  will  add )
  9. balle- bichole-2
  10. gejje -vastra-2
  11. hoo bathi,mangalarathi bathi-5
  12. coconut-1
  13. arishina,kukuma-packets or dabbi
  14. chandra
  15. Bangles 
  16. blouse- piece-1
  17. elle-adikae
  18. fruits
  19. Dakshine 
  20. can keep saree,silver or  gold   items   in that mora as gift.

Method -

  1. Bring new mora,clean it,apply arishina kumkuma on it.
  2. Spread paper or  Banana leaves on a bottom mora.
  3. Keep all other things in separate plastic covers,arrange on the bottom mora, close with another mora ,keep betel leaves (pan leaves) adikae,dakshine ,one fruit on the top mora.

ಬಾಗಿನ ಕೊಡುವಾಗ ಸೆರಗನ್ನು ಹೊದ್ದಿಕೊಂಡು (ಬೆನ್ನ ಪೂರ್ತಿ )ಸೆರಗಿನ ಅಂಚನ್ನು ಹಿಡಿದುಕೊಂಡು ಹಾಗೆ ಬಾಗಿನ ತೆಗೆದುಕೊಳ್ಳುವರು ಸೆರಗಿನ ಅಂಚಿನಿಂದ  ಮೊರವನ್ನು ಹಿಡಿದು " ಮುತೈದೆ ಮುತೈದೆ ಬಾಗಿನ ತೊಗೋ" " ಸಾವಿತ್ರಿ ಸಾವಿತ್ರಿ ಬಾಗಿನ ಕೊಡು  "   ಎಂದು ಮೂರು ಬಾರಿ ಹೇಳಿ ಬಾಗಿನದ ಮುಚ್ಚಳ ತೆಗೆದು ತೋರಿಸಬೇಕು ನಂತರ ಆಶೀರ್ವಾದ  ಪಡೆದುಕೊಳ್ಳಬೇಕು .

Please check the below link to Shraavana mangalavara Mangalagowri vrata, Lalitha Ashttottara,Gowri
Ashttottara and vratakatha.

Mangalagowri Pooja Procedure And Vratakatha


Audio  Link :

Sri Mangala Gowri Vrata




Youtube Link:






No comments :

Post a Comment