Pages

Sunday, August 11, 2013

Shraavana Somavaarada Pooje

  ಶ್ರಾವಣ ಸೋಮವಾರದ ಪೂಜೆ ಮತ್ತು ವೈಶಿಷ್ಟ್ಯ




                                           ಶ್ರಾವಣ ಮಾಸ  ಬಂದಿತೆಂದರೆ ವ್ರತಗಳ  ಆಚರಣೆಗಳ ಸುಗ್ಗಿ . ಅದರಲ್ಲಿ ವಿಶೇಷವಾಗಿ  ಶಿವನಿಗೆ  ಸೋಮವಾರದಂದು  ವಿಶೇಷ ಅಭಿಷೇಕಗಳು,ಬಿಲ್ವಾರ್ಚನೆ ,ಸಹಸ್ರ ರುದ್ರಾಭಿಷೇಕ  ಹೀಗೆ ಹಲವಾರು ಕೈಂಕರ್ಯಗಳನ್ನು  ಆಚರಿಸವುದು ರೂಢಿಯಲ್ಲಿದೆ . ಕೆಲವರು ೧೬ ಸೋಮವಾರದ ವ್ರತವನ್ನು ಆಚರಿಸುತ್ತಾರೆ . ಈ  ವ್ರತವನ್ನು ಕನ್ಯೆಯರು  ಶೀಘ್ರ  ವಿವಾಹ ಪ್ರಾಪ್ತಿಗಾಗಿ ಆಚರಿಸುತ್ತಾರೆ ,ಮತ್ತೆ ಕೆಲವು ಮುತೈದೆಯರು ಸತ್ಸಂತಾನ ಪ್ರಾಪ್ತಿಗಾಗಿ ಆಚರಿಸುತ್ತಾರೆ .  ಹೀಗೆ ನಾನಾ  ರೀತಿ ಬೇಡಿಕೆಗಳನ್ನು ಸಲ್ಲಿಸಿ ಭಗವಾನ್ ಶಿವನನ್ನು ಆರಾಧಿಸುತ್ತಾರೆ .
ಈ ವ್ರತವು  ತಾಯಿ ಪಾರ್ವತಿ ದೇವಿಯು ಭಗವಾನ್  ಶಂಕರನನ್ನು ತನ್ನ ಪತಿಯನ್ನಾಗಿ  ಪಡಿಯಲು   ೧೬ ಸೋಮವಾರದ ವ್ರತವನ್ನು ಅನನ್ಯ ಭಕ್ತಿ ಹಾಗೂ  ಶ್ರದ್ಧೆಯಿಂದ ಆಚರಿಸಿದಳು  ಎಂಬ ನಂಬಿಕೆ ಇದೆ .

                                          ೧೬ ಸೋಮವಾರದ ವ್ರತವನ್ನು  ಆಚರಿಸುವವರು ಪ್ರಾತಃ ಕಾಲದ   ಕೈಂಕರ್ಯಗಳನ್ನು  ಮುಗಿಸಿ   ಮೊದಲು ವಿನಾಯಕನನ್ನು ಆವಾಹನೆ ಮಾಡಿ ,ಪೂಜಿಸಿ,ನೈವೇದ್ಯ ಅರ್ಪಿಸಿ ತದನಂತರ  ಈಶ್ವರನಿಗೆ  ಅಭಿಷೇಕ ಮಾಡಿ ,ಪೂಜೆ,ಅಷ್ಟೋತ್ತರ , ಪಂಚಾಕ್ಷರಿ ಮಂತ್ರ "ಓಂ ನಮಃ  ಶಿವಾಯ ", ಸಹಸ್ರನಾಮಾವಳಿಗಳಿಂದ ಅರ್ಚಿಸಿ  ಉಪವಾಸದಲ್ಲಿ  ವ್ರತ ಆಚರಣೆ ಮಾಡಬೇಕು . ಸಂಜೆ ಹುತ್ತದ ಮಣ್ಣಿನಿಂದ ಶಿವಲಿಂಗ ಮಾಡಿ ಶಿವನನ್ನು  ಷೋಡಷೋಪಚಾರದಿಂದ  ಪೂಜಿಸಬೇಕು.  ಈ ವ್ರತವನ್ನು ಆಚರಿಸುವವರು ಉಪ್ಪಿಲ್ಲದ ಆಹಾರವನ್ನು ಭುನ್ಜಿಸಬೇಕು ಹಾಗಾಗಿ ಗೋಧಿ ಹಿಟ್ಟಿನಿಂದ ತಂಬಿಟ್ಟು  ಅಥವಾ ಗುಳ್ಪಾವಟೆ  ಮಾಡಿ  ಅದನ್ನು ಮೂರು ಭಾಗಗಳಾಗಿ ವಿಭಜಿಸಿ ನೈವೇದ್ಯ ಮಾಡಬೇಕು. ಅದರಲ್ಲಿ ಒಂದು ಭಾಗ ಪುರೋಹಿತರಿಗೆ  ಫಲತಾಂಬೂಲ ದಕ್ಷಿಣೆ ಸಮೇತವಾಗಿ  ದಾನ ಕೊಡಬೇಕು ಇನ್ನೊಂದು ಕಾಮಧೇನುವಿಗೆ  (ಹಸುವಿಗೆ ) ಕೊಡಬೇಕು . ಮತ್ತೊಂದು ತಾನು ಭುಂಜಿಸಬೆಕು .  ಹೀಗೆ ಪ್ರತಿ ಸೋಮವಾರ ವ್ರತವನ್ನು ಆಚರಿಸಬೇಕು .

                                       ಹೀಗೆ  ಮಾಡಿದ ೧೬ ಲಿಂಗಗಳನ್ನು ಪ್ರತ್ಯೇಖವಾಗಿ ಭಿನ್ನ ಮಾಡದೆ ಶೇಖರಿಸಿ ವ್ರತ ಮುಗಿದ ನಂತರ  ತೀರ್ಥಕ್ಷೇತ್ರದಲ್ಲಿ  ವಿಸರ್ಜನೆ ಮಾಡಬೇಕು .

 
 
ಸೋಮವಾರದ ವ್ರತ ಕಥೆ :
 
 
                           ಒಂದಾನೊಂದು ಕಾಲದಲ್ಲಿ  ಒಬ್ಬ ಶ್ರೀಮಂತ ಬಡ್ಡಿ ವ್ಯಾಪಾರಿ ವಾಸಿಸುತ್ತಿದ್ದ ,ಆತನಿಗೆ  ಶ್ರೀಮಂತಿಗೆ ಇದ್ದರು ಮಕ್ಕಳಿಲ್ಲದ ನೋವು ಸದಾ ಕಾಡುತಿತ್ತು . ಆ ವ್ಯಾಪಾರಿಯು ಮತ್ತು  ಆತನ   ಪತ್ನಿ ಪ್ರತಿ ಸೋಮವಾರವು  ಭಗವಾನ್  ಶಂಕರನನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ  ಆರಾಧಿಸುತ್ತಿದ್ದರು. ಹೀಗೆ  ಒಂದು ದಿನ ಪಾರ್ವತಿ ದೇವಿಯು ಭಗವಾನ್  ಶಂಕರನನ್ನು   ಕುರಿತು ಹೀಗೆ ಕೇಳುತ್ತಾಳೆ  ಸ್ವಾಮೀ ಇನ್ನಾದರೂ ಆ ದಂಪತಿಗಳ ಮೇಲೆ ಕೃಪೆ ತೋರಬಾರದೆ  ಅವರಿಗೆ  ಪುತ್ರ ಭಾಗ್ಯವನ್ನು ಕರುಣಿಸಬಾರದೆ . ತಕ್ಷಣವೇ ಭಗವಾನ್  ಶಂಕರನು  ಆ ವ್ಯಾಪಾರಿಯ  ಬಳಿ  ಬಂದು ನಿಮ್ಮ  ಭಕ್ತಿ ಶ್ರದ್ಧೆಯನ್ನು ನಾನು ಮೆಚ್ಚಿದೆ . ನಿಮ್ಮ ಇಷ್ಟಾರ್ಥವು  ಸಿದ್ಧಿಸಲಿ  ಎಂದು ಹೇಳಿ   ಒಂದು ಗಂಡು ಮಗುವನ್ನು ಕರುಣಿಸುತ್ತಾನೆ ಆದರೆ ಒಂದು ಷರತ್ತನ್ನು  ಆ ವ್ಯಾಪಾರಿಗೆ ತಿಳಿಸುತ್ತಾನೆ ; ನಿನ್ನ ಮಗನು  ಅಲ್ಪಾಯು ಅವನು ಕೇವಲ ೧೨ ವರ್ಷಗಳು ಬದುಕಿರುತ್ತಾನೆ ಎಂದು ತಿಳಿಸಿ ಅದೃಶ್ಯನಾಗುತ್ತಾನೆ .ಆ ವ್ಯಾಪಾರಿಯ ಹೆಂಡತಿ ಸ್ವಲ್ಪ ದಿನದಲ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ . ಮನೆಯಲ್ಲಿ ಎಲ್ಲರು ಸಂತೋಷದಲ್ಲಿರುತ್ತಾರೆ ಆದರೆ ಆ ವ್ಯಾಪಾರಿಗೆ ಮಾತ್ರ ಸಂತೋಷ ಆಗಿರಲಿಲ್ಲ ಆತನಿಗೆ ತನ್ನ ಮಗನು ಅಲ್ಪಾಯು ಎಂಬ ನೋವು  ಸದಾ ಕಾಡುತಿತ್ತು .
 
 
                                                                 ಹೀಗೆ ಆ ಬಾಲಕನಿಗೆ ೧೧  ವರ್ಷವಾಯಿತು ಆಗ ವ್ಯಾಪಾರಿಯು ಬಾಲಕನ ವಿದ್ಯಾಭ್ಯಾಸದ ಸಲುವಾಗಿ ಬಾಲಕನನ್ನು  ಕಾಶಿಗೆ ಕಳುಹಿಸಲು ಅಣಿಮಾಡಿದ. ಹಾಗಾಗಿ ಬಾಲಕನು ತನ್ನ ಸೋದರಮಾವನ ಜೊತೆ ಕಾಶಿಗೆ ಹೊರಟ .ಮಾರ್ಘದ ಮಧ್ಯದಲ್ಲಿ  ತನ್ನ ತಂದೆಯ ಆಘ್ನೆಯ ಮೇರೆಗೆ  ಯಾಗ -ಯಜ್ಞಾದಿಗಳನ್ನು  ಮಾಡಿ ಬ್ರಾಹ್ಮಣರಿಗೆ ದಕ್ಷಿಣೆ ದಾನಾದಿಗಳನ್ನು ನೀಡಿದರು . ಹೀಗೆ ಸಂಚರಿಸುತ್ತಿರುವಾಗ ದಾರಿಯಲ್ಲಿ ಒಂದು ವಿವಾಹ ಸಂಭ್ರಮದ ದಿಬ್ಬಣವನ್ನು ನೋಡಿದರು ಅಲ್ಲಿ ವರನಿಗೆ  ಒಂದು ಕಣ್ಣು  ಸರಿಯಾಗಿಲ್ಲದ ಕಾರಣ ವಿವಾಹವು ಮುರಿದುಬಿದ್ದಿತ್ತು . ಹಾಗಾಗಿ ಈ ಬಾಲಕನೇ  ವರನಾಗಿ ಆ  ಶ್ರೀಮಂತ ವ್ಯಾಪಾರಿಯ ಮಗಳನ್ನು  ವಿವಾಹವಾದನು . ಬಾಲಕನು  ವಿದ್ಯಾಭ್ಯಾಸದ ಸಲುವಾಗಿ ಕಾಶಿಗೆ ತೆರಳಿದ  ತನ್ನ ಮಾವನ ಜೊತೆ .
 
 
                                            ಒಂದು ದಿನ  ಬಾಲಕನ  ಸೋದರಮಾವ  ಯಾಗ ಯಜ್ಞಾದಿಗಳನ್ನು ಆಚರಿಸಬೇಕಂದು   ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಾಗ ,ಬಾಲಕನು ಅನಾರೋಗ್ಯದಿಂದ  ಮಲಗಿದ. ಬಾಲಕನಿಗೆ ೧೨ ವರ್ಷವಾದ್ದರಿಂದ  ಶಿವನ ಆಣತಿಯಂತೆ  ಅವನು ಮರಣವನ್ನು ಹೊಂದಿದ .  ಎಲ್ಲರು ಬಾಲಕನ ಕಳೆಬರದ ಮುಂದೆ ಕೂತು ದುಃಖಿಸುತ್ತಿರುವಾಗ   ಆಗ ಭಗವಾನ್ ಶಂಕರನು ಮತ್ತು ಪಾರ್ವತಿ ದೇವಿಯು ಆ ಬಾಲಕನಿಗೆ  ಜೀವದಾನವನ್ನು  ಅನುಗ್ರಹಿಸಿದರು . ನಿಮ್ಮ ಅನನ್ಯ ಭಕ್ತಿ -ಶ್ರಧ್ಧೆಯನ್ನು ಮೆಚ್ಚಿದೆವು . ಎಲ್ಲರು ಭಗವಾನ್ ಶಂಕರನನ್ನು  ಹಾಗೆ ಪಾರ್ವತಿ ದೇವಿಯನ್ನು ಸಂತೋಷದಿಂದ ಹಾಡಿ  ಹೊಗಳಿದರು .  
 
 
                                        ಹೀಗೆ ಯಾರು ಈ ವ್ರತವನ್ನು ಶ್ರಧ್ಧೆ ಭಕ್ತಿಯಿಂದ ಆಚರಿಸುತ್ತಾರೋ ಅವರಿಗೆ ಭಗವಾನ್ ಶಂಕರನು ಹಾಗೆ ಪಾರ್ವತಿ ದೇವಿಯು ತಮ್ಮ ಸಕಲ  ಇಷ್ಟಾರ್ಥವನ್ನು   ನೆರವೇರಿಸುತ್ತಾರೆ .  

No comments :

Post a Comment