ರಾಗ : ಆನಂದಭೈರವಿ
ತಾಳ : ಝಂಪೆ
ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ ।।ಪ।।
ಪುಟ್ಟಿಸಿದ ತಾಯಿ ತಂದೆ ಇಷ್ಟ ಮಿತ್ರನು ನೀನೆ
ಅಷ್ಟ ಬಂಧುವು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಟ ಮೂರುತಿ ಕೃಷ್ಣ ನೀನಿರುವ ತನಕ ।।೧।।
ಒಡ ಹುಟ್ಟಿದವ ನೀನೆ ಒಡಲಿಗಾಕುವ ನೀನೆ
ಉಡಲು ಹೊದಿಯಲು ವಸ್ತ್ರ ಕೊಡುವವ ನೀನೆ
ಮಡದಿ ಮಕ್ಕಳನೆಲ್ಲಾ ಕಡೆಹಾಯಿಸುವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ ।।೨।।
ವಿದ್ಯೆ ಹೇಳುವವ ನೀನೆ ಬುದ್ಧಿ ಕಲಿಸುವವ ನೀನೆ
ಉದ್ಧಾರ ಕರ್ತ ಮಮ ಸ್ವಾಮಿ ನೀನೆ
ಮುದ್ದು ಸಿರಿ ಪುರಂದರ ವಿಠಲ ನಿನ್ನಡಿ ಮೇಲೆ
ಬಿದ್ದುಕೊಂಡಿರುವ ಎನಗೇತರ ಭಯವೋ ।।೩।।
Meaning Of The Song
How can I be a poor and destitute until you are there to protect me . ||PA||
You are the Father / Mother who made me to born
You are the best friend and
You are my ornaments / jewels in the box.
I am safe until you protect me.||1||
You are my Brother/Sister.
You are the one who feeds me.
You are the one who gives clothes to wear/wrap around.
You are the one who gives salvation.||2||
You are the Master ; who protects me without forgetting/leaving.
You are the one ho teach me to become clever.
You are my Master;who leads me towards progress.
why I should have fear when I am lying at your feet
Sri Purandara ViThala.||3||
YouTube Link:
No comments :
Post a Comment