Pages

Thursday, August 1, 2013

Eke Brundavanadi




ಏಕೆ  ಬೃಂದಾವನದಿ  ನೆಲೆಸಿರುವೆ  ಗುರುವೇ
ನಾಕವಿಲಸಿತಗೀತೆ  ಲಾವಣ್ಯ ಮೂರ್ತೆ ।ಪ।
ಶ್ರೀಕಾಂತನೊಲಿಸಿದುದು   ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯ ಶ್ರೀ ರಾಘವೇಂದ್ರಾ ।।ಅ.ಪ।।


ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನಂದನ ಕಂದ ನಿನ್ನೆದುರು ಕುಣಿದ ।
ಒಂದು ಕ್ಷಣ ನಿನ್ನ ಬಿಟ್ಟಿರದೆ ಹರಿ ನಲಿಯುತಿರೆ
ಇನ್ಯಾರ ಒಲಿಸಲೆಂದಿಲ್ಲಿ  ಇಲ್ಲಿ ತಪಗೈಯುತಿರುವೆ ।।೧।।


ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶಿಷ್ಟ ನೀ  ಬಹು ಬಳಲಿ ಆಯಸಗೊಂಡಿಹೆಯಾ ।
ದುಷ್ಟವಾದಿಗಳ ವಾಗ್ಯುದ್ಧದಲಿ  ಜಯಸುತಲಿ
ಶ್ರೇಷ್ಟ  ಗ್ರಂಥವ ಬರೆದು ಬೇಸರವಾಯ್ತು ।।೨।।


ಪರಿ ಪರಿ ಅಭೀಷ್ಟಗಳ  ನೀಡೆಂದು ಜನ ಕಾಡೆ
ವರವಿತ್ತು  ಸಾಕಾಯ್ತೆ  ಕಮಲೇಶ ದಾಸ ।
ಧರಗೆ ಮರೆಯಾಗಿ ಬೃಂದಾವನವ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ।।೩।।


ವೀಣೆಯನು ನುಡಿಸುತಲಿ  ವೇಣುಗೋಪಾಲನು
ಜಾಣತನದಲಿ  ಮೆರೆಸಿ ಮೇರು ಮೆರೆದೆ ।
ಕಾಣದಿಹ ಪರಮಪದ ತಾಣವನು  ತೋರುತ
ಪ್ರವೀಣ ಬೃಂದಾವನದಿ ಎದ್ದು ಬಾರಯ್ಯ ।।೪।।







No comments :

Post a Comment