Pages

Thursday, November 10, 2011

Bannisi Gopi Harasidalu

ಬಣ್ಣಿಸಿ  ಗೋಪಿ  ಹರಸಿದಳು 

ರಚನೆ: ಶ್ರೀ ಪುರಂದರದಾಸರು
ರಾಗ: ಧನ್ಯಾಸಿ
ತಾಳ: ಆದಿ                                   http://www.raaga.com/play/?id=170617

ಬಣ್ಣಿಸಿ ಗೋಪಿ ಹರಸಿದಳು (ಪ)
ಎಣ್ಣೆಯನೊತ್ತುತ  ಯದುಕುಲ ತಿಲಕಗೆ  (ಅ.ಪ)


ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರಪಾಲಿಸು ರಕ್ಕಸರ ಸೋಲಿಸು
ವಾಯುಸುತಗೆ ನೀ ನೊಡಯನಾಗೆನುತ (೧)

ಧೀರನು ನೀನಾಗು ದಯಾಂಬುಧಿಯಾಗು
 ಆ ರುಕ್ಮಿಣಿಗೆ ನೀನರಸನಾಗು
ಮಾರನ ಪಿತನಾಗು ಮಧುಸೂದನನಾಗು
ದ್ವಾರವತಿಗೆ  ನೀ ದೊರೆಯಾಗೆನುತ (೨)

ಆನಂದ ನೀನಾಗು ಅಚ್ಚ್ಯುತ ನೀನಾಗು
ದಾನವಾಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರವಿಠಲನಾಗೆನುತ  (೩)


Song Link :
bannisi gopi_hungama.com

















































 


No comments :

Post a Comment