Pages

Thursday, November 10, 2011

Sulabha Poojeya Maadi Song

ಸುಲಭ ಪೂಜೆಯ ಮಾಡಿ ಬಲವಿಲ್ಲದವರು (ಪ)                                                          ರಾಗ:ಕಾಮ್ಬೋದಿ
 ನಳಿನನಾಭನ ಪಾದ ನಳಿನ ಸೇವಕರು  (ಅ .ಪ)                                                        ತಾಳ:ಝಮ್ಪೆತಾಳ

ಇರಳು ಹಚ್ಚುವ ದೀಪ ಹರಿಗೆ ನೀರಾಜನವು
ಮರೆಮಾಡುವ ವಸ್ತ್ರ ಪರಮ ಮಡಿಯು
ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯೂ......( ೨)
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು (೧)


ನುಡಿವ ಮಾತುಗಳೆಲ್ಲ ಕಡಲಶಯನನ ಜಪವು
ಮಡದಿ ಮಕ್ಕಳು ಮತ್ತೆ ಒಡನೆ ಪರಿವಾರ
ನಡುಮನೆಯ ಅಂಗಳವು ಉಡುಪಿ ಭೂ ವೈಕುಂಟಗಳು
ಎಡ ಬಲದ ಮನೆಯವರು ಕಡು ಭಾಗವತರು (೨)

ಹೀಗೆ ಅನುದಿನ ತಿಳಿದು ಹಿಗ್ಗುವ ಜನರ..... ಭವ
ರೋಗ ಪರಿಹರವು ಮೂಜಗದಿ ಸುಕವು
ಹೋಗುತಿದೆ ಈ ಆಯು ಬೇಗದಿಂದಲಿ ನಮ್ಮ
ಯೋಗೇಶ ಪುರಂದರ ವಿಟ್ಟಲನ ನೆನೆನೆನೆದು (೩)

                                                                                                               

No comments :

Post a Comment