Pages

Sunday, February 11, 2018

How To Offer Bilwapatra Leaves To Lord Shiva?

*ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ*
*ಬಿಲ್ವಪತ್ರೆ*



*ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|*
*ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್||*
 – ಬಿಲ್ವಾಷ್ಟಕ, ಶ್ಲೋಕ ೧


ಅರ್ಥ: ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆ ಯನ್ನು ನಾನು ಶಿವನಿಗೆ ಅರ್ಪಿಸುತ್ತೇನೆ.

*ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದಿನ ಮನಃಶಾಸ್ತ್ರದ ಕಾರಣಗಳು*

೧. ಸತ್ತ್ವ, ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಉತ್ಪನ್ನವಾಗುತ್ತವೆ. ಕುಮಾರಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಅವಸ್ಥೆ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಅಂದರೆ ಶಂಕರನಿಗೆ ಈ ಮೂರೂ ಅವಸ್ಥೆಗಳ ಆಚೆಗೆ ಹೋಗುವ ಇಚ್ಛೆಯನ್ನು ಪ್ರಕಟಿಸಬೇಕು; ಏಕೆಂದರೆ ತ್ರಿಗುಣಾತೀತವಾಗುವುದರಿಂದ ಈಶ್ವರನ ಭೇಟಿಯಾಗುತ್ತದೆ.

*ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ಪದ್ಧತಿಯ ಹಿಂದಿನ ಅಧ್ಯಾತ್ಮಶಾಸ್ತ್ರ*

೧. ತಾರಕ ಅಥವಾ ಮಾರಕ ಉಪಾಸನೆಯ ಪದ್ಧತಿಗನುಸಾರ ಬಿಲ್ವವನ್ನು ಹೇಗೆ ಅರ್ಪಿಸಬೇಕು?
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.ಅ೧. ಶಿವನ *ತಾರಕ ರೂಪದ ಉಪಾಸನೆಯನ್ನು ಮಾಡುವವರು*. 
ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಶಿವನ ತಾರಕ ಉಪಾಸನೆಯು ಅವರ ಪ್ರಕೃತಿಗೆ ಹೊಂದು ವಂತಹ ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ. ಇಂತಹವರು ಶಿವನ ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. (ಬಿಲ್ವಂ ತು ನ್ಯುಬ್ಜಂ ಸ್ವಾಭಿಮುಖಾಗ್ರಂ ಚ|)

ಅ೨. ಶಿವನ *ಮಾರಕ ರೂಪದ ಉಪಾಸನೆಯನ್ನು ಮಾಡುವವರು*
ಶಾಕ್ತಪಂಥೀಯರು ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ.

ಅ. ಇಂತಹವರು ಶಿವನ ಮಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.

ಆ. ಲಿಂಗದಲ್ಲಿ ಆಹತ (ಲಿಂಗದ ಮೇಲೆ ಬೀಳುವ ನೀರಿನ ಆಘಾತದಿಂದ ನಿರ್ಮಾಣವಾಗುವ) ನಾದದಲ್ಲಿನ ಪವಿತ್ರಕಗಳು ಮತ್ತು ಅನಾಹತ (ಸೂಕ್ಷ್ಮ) ನಾದದಲ್ಲಿನ ಪವಿತ್ರಕಗಳು ಹೀಗೆ ಎರಡು ವಿಧದ ಪವಿತ್ರಕಗಳಿರುತ್ತವೆ. 
ಈ ಎರಡು ರೀತಿಯ ಪವಿತ್ರಕಗಳನ್ನು ಮತ್ತು ಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆಯಲ್ಲಿನ ಪವಿತ್ರಕಗಳನ್ನು, ಹೀಗೆ ಮೂರು ರೀತಿಯ ಪವಿತ್ರಕಗಳನ್ನು ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. 

ಎಳೆ ಬಿಲ್ವಪತ್ರೆಯು ಆಹತ (ನಾದ ಭಾಷೆ) ಮತ್ತು ಅನಾಹತ (ಪ್ರಕಾಶಭಾಷೆ) ಧ್ವನಿಗಳನ್ನು ಒಟ್ಟುಗೂಡಿಸಬಲ್ಲದು. ಬಿಲ್ವಪತ್ರೆಯನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖ ವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ. 
ಈ ಮೂರು ಪವಿತ್ರಕಗಳ ಶಕ್ತಿಯಿಂದ ತ್ರಿಗುಣಗಳು ಕಡಿಮೆಯಾಗಲು ಸಹಾಯವಾಗುತ್ತದೆ.

೨. ಬಿಲ್ವವನ್ನು ಅರ್ಪಿಸುವ ಪದ್ಧತಿಗನುಸಾರ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶಿವತತ್ತ್ವದಿಂದಾಗುವ ಲಾಭ. 
ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ಶಿವಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ಎಲೆಗಳ ತುದಿಗಳಿಂದ ಶಿವತತ್ತ್ವವು ವಾತಾವರಣದಲ್ಲಿ ಹರಡುವ ಪ್ರಮಾಣವು ಹೆಚ್ಚಿಗೆ ಇರುತ್ತದೆ. 
ಈ ಪದ್ಧತಿಯಿಂದ ಸಮಷ್ಟಿಗೆ ಹೆಚ್ಚು ಲಾಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಲಿಂಗದ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ತೊಟ್ಟಿನಿಂದ ಕೇವಲ ಬಿಲ್ವವನ್ನು ಅರ್ಪಿಸುವವನಿಗೆ ಮಾತ್ರ ಶಿವತತ್ತ್ವವು ಸಿಗುತ್ತದೆ. 
ಈ ಪದ್ಧತಿಯಿಂದ ವ್ಯಷ್ಟಿ ಸ್ತರದಲ್ಲಿ ಹೆಚ್ಚಿಗೆ ಲಾಭವಾಗುತ್ತದೆ.

*ಬಿಲ್ವಪತ್ರೆಯನ್ನು ಕೆಳಮುಖವಾಗಿ ಏಕೆ ಅರ್ಪಿಸಬೇಕು?*

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ *ನಿರ್ಗುಣ ಸ್ತರದಲ್ಲಿನ* ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.

ಶಿವನಿಗೆ *ತಾಜಾ ಬಿಲ್ವಪತ್ರೆ* ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ *ಸೋಮವಾರದ ಬಿಲ್ವಪತ್ರೆ* ಮರುದಿನ ನಡೆಯುವುದಿಲ್ಲ.*ಬಿಲ್ವಾರ್ಚನೆ*

*‘ಓಂ ನಮಃ ಶಿವಾಯ’* ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. 

ಬಿಲ್ವಪತ್ರೆಗಳನ್ನು ಇಡೀ *ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು*. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ.


No comments :

Post a Comment