Pages

Saturday, February 10, 2018

Bhojana Padarthagala Parichaya

*ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ*
 ನಾವು ನಮಗೆ ಅರಿವಿಲ್ಲದೆ ಭೋಜನ ರೂಪದಲ್ಲಿ ಭಗವನ್ನಾಮಸ್ಮರಣೆ ಮಾಡುತ್ತೇವೆ. ಶ್ರೀ ಹರಿಯ ೨೪ ನಾಮಗಳನ್ನು ಭೋಜನ ಬಡಿಸುವ ಕ್ರಮಾನುಸಾರವಾಗಿ  ನೆನೆಯುತ್ತೇವೆ . ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. 

1 *ಉಪ್ಪು* (ಸೌಗಂಧಿ ಸಹಿತ ಜನಾರ್ಧನ)

2 *ಚಟ್ನಿ, ಕೋಸಂಬರಿ,* ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)

3 *ಕೊಬ್ಬರಿ ಬಳಸಿರುವ ಪಲ್ಯ* (ಬುದ್ಧಿಸಹಿತ ಪದ್ಮನಾಭ)

4 *ಸೊಪ್ಪು ಬಳಸಿರುವ ಪಲ್ಯಗಳು* (ಮಂಗಳಾದೇವಿ ಸಹಿತ ಹೃಶೀಕೇಷ)

5 *ಹುಳಿರಹಿತ ಪದಾರ್ಥಗಳು* (ಹರಿಣಿ ಸಹಿತ ಸಂಕರ್ಷಣ)

6 *ಕಟು ಅಥವಾ ಕಹಿ ಪದಾರ್ಥಗಳು* (ನಿತ್ಯ ಸಹಿತ ಅನಿರುದ್ಧ)

7 *ಹುಳಿ ಪದಾರ್ಥಗಳು* (ಇಂದಿರಾ ಸಹಿತ ದಾಮೋದರ)

8 *ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು* (ಕಮಲಾ ಸಹಿತ ಯಾಧವ)

9 *ಹೋಳಿಗೆ* (ಕಮಲಾಲಯ ಮಧುಸೂದನ)

10 *ಗೊಜ್ಜು ಮತ್ತು ಕರಿದ ಪದಾರ್ಥಗಳು* (ಸದಾಶ್ರಯ ಅಧೋಕ್ಷಜ )

11 *ಜಹಾಂಗೀರು, ವಡೆ* ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಅಚ್ಯುತ)

12 *ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ* ಮುಂತಾದುವು (ಲಕ್ಷ್ಮೀನರಸಿಂಹ)

13 *ಹಣ್ಣು ಮತ್ತು ಪಾನಕಗಳು* (ಸುಂದರಿ ಸಹಿತ ಉಪೇಂದ್ರ)

14 *ತೊವ್ವೆ* (ಧಾನ್ಯ ಸಹಿತ ಶ್ರೀಧರ)

15 *ಪರಮಾನ್ನ -ಪಾಯಸ* (ಲಕ್ಷ್ಮೀ ಸಹಿತ ನಾರಾಯಣ)

16 *ಅನ್ನ* (ಶ್ರೀಕೇಶವ)

17 *ತುಪ್ಪ* (ಪದ್ಮಾ ಸಹಿತ ಗೋವಿಂದ)

18 *ಬೆಣ್ಣೆ* (ರಮಾ ಸಹಿತ ತ್ರಿವಿಕ್ರಮ)

19 *ಹಾಲು / ಕ್ಷೀರ* (ಪದ್ಮಿನೀ ಸಹಿತ ಗೋವಿಂದ)

20 *ಮೊಸರು* (ವೃಕ್ಷಾಕಪಿ ಸಹಿತ ವಾಮನ)

21 *ಕುಡಿಯುವ ನೀರು* (ಶ್ರೀಕೃಷ್ಣ)

22 *ಸಕ್ಕರೆ, ಬೇಳೆ* (ದಕ್ಷಿಣಾ ಸಹಿತ ವಾಸುದೇವ)

23 *ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ*,ಮುಂತಾದುವು (ಆನಂದ ಸಹಿತ ಪುರುಷೋತ್ತಮ)

24 *ವೀಳ್ಯದೆಲೆ* (ಶ್ರೀಹರಿ)

25 *ಪಾನಕ - ನಿಂಬೆ* (ವಿಶ್ವ)

ವಿಷಯಸೂಚಿ :-'

1. ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.

2. ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.

No comments :

Post a Comment