Pages

Friday, November 20, 2015

Varava Kode Vaarijaakshi


ಉತ್ಥಾನ ದ್ವಾದಶಿ  ಹಬ್ಬ (ತುಳಸಿ ಹಬ್ಬ ಅಥವಾ ತುಳಸಿ ವಿವಾಹ ) ೨೨ನೇ  ತಾರೀಖು ನವೆಂಬರ್  ೨೦೧೫  ರಂದು  ಆಚರಿಸಲಾಗುವುದು. ಈ ಕೆಳಕಂಡ ಹಾಡನ್ನು ಪೂಜೆ ಮಾಡುತ್ತಾ  ಹಾಗು ಆರತಿ ಮಾಡುವಾಗ ಹೇಳುವ ಹಾಡು .




ರಚನೆ : ಅಂಬಾಬಾಯಿ

ವರವ ಕೊಡೆ ವಾರಿಜಾಕ್ಷಿ ನೀರೆ ತುಳಸಿಯೇ
ಕರಕರೆಯಗೊಳಿಸಬೇಡ  ಕರುಣಪೂರ್ಣಳೇ ।।ಪ।।



ಸಿರಿವರಣ ಸಹಿತ ನಿನ್ನ ಪೂಜಿಪೆ ಮುನ್ನ
ಪರಿಪರಿಯ ಧೂಪ ದೀಪ ಗಂಧಾಕ್ಷತೆಗಳಿಂ ।।೧।।

ವಾರಿಜಾಕ್ಷಿ  ಷಡ್ರಸಗಳ  ಆರೋಗಣೆ ಕೊಳ್ಳೆ
ನಾರಿ ನಿನಗೆ ಸರ್ವ ವಿಧದಿ ನಾನು ಎರಗುವೇ ।।೨।।

ಸಿರಿವರ ಗೋಪಾಲಕೃಷ್ಣವಿಠ್ಠಲ ನರಸಿಯೇ
ಕರೆದು ಎನಗೆ ಸರ್ವಾಭೀಷ್ಟ  ಕೊಟ್ಟು ಪಾಲಿಸೆ ।।೩।।

No comments :

Post a Comment