Pages

Saturday, May 16, 2015

Jaya Mangalam Nithya Shubha Mangalam

ರಚನೆ : ಶ್ರೀ ವಾದಿರಾಜ ತೀರ್ಥರು
ರಾಗ : ಭೈರವಿ
ತಾಳ : ಆದಿ



ಜಯ ಮಂಗಳಂ ನಿತ್ಯ ಶುಭ ಮಂಗಳಂ  ।।ಪ ।।


ವಸುದೇವತನಯನಿಗೆ  ವೈಕುಂಠನಿಲಯನಿಗೆ
ಕುಸುಮನಾಭನಿಗೆ   ಕೋಮಲರೂಪಗೆ ।

ಯಶೋದೆಯ ನಂದನಿಗೆ  ವಸುಧೆಯ ರಮಣನಿಗೆ
ನಸುನಗೆಯೊಳ್ಳೊಪ್ಪುವ  ನರಸಿಂಹಗೆ ।।
                                                  ।।ಜಯ ಮಂಗಳಂ।।

ಪಕ್ಷಿವಾಹನನಿಗೆ ಪರಮಪಾವನನಿಗೆ
ಕುಕ್ಷಿಯೊಳು  ಜಗವನಿಂಬಿಟ್ಟವನಿಗೆ ।
ಲಕ್ಷುಮಿಕಾಂತನಿಗೆ  ಲಕ್ಷಣವಂತನಿಗೆ
ಲಕ್ಷಣದೊಳ್ಳೊಪ್ಪುವ  ನರಸಿಂಹಗೆ ।।
                                             ।। ಜಯ ಮಂಗಳಂ।।

ಭಕ್ತವತ್ಸಲನಿಗೆ  ಭವದುಃಖದೂರನಿಗೆ
ಮುಕ್ತಿದಾಯಕಗೆ ಚಿನ್ಮಯರೂಪಗೆ ।
ಮಿತ್ರೇ  ರುಕ್ಮಿಣಿಗೆ  ಸತ್ಯಭಾಮೆಯರಸನಿಗೆ
ನಿತ್ಯಕಲ್ಯಾಣ  ಶ್ರೀಹಯವದನಗೆ ।।
                                           ।।ಜಯ ಮಂಗಳಂ।।


Audio_Jayamangalam.mp3

No comments :

Post a Comment