ಬಿನ್ನವಿಸಿ ಬೇಡಲು ಬಿನ್ನಾಣ ಬಿಡಲಿಲ್ಲಾ
ಬಂದೆನ್ನ ಮನದಲ್ಲಿ ಕಾಡುತಿಹ ಶಿವನೇ ||ಪ||
ಒಂದು ಕ್ಷಣ ನಿನ್ನಲ್ಲಿ ಒಂದು ಕ್ಷಣ ನನ್ನಲ್ಲಿ ,
ಎನ್ನ ಮನ ಇಂತಾಗಿ ಹರಿದಾಡುತಿಹುದೈಯ್ಯಾ ||
ಅಂತರಂಗದಿಯೆಲ್ಲಾ ಕಾದುಬೆಂದಿಹುದು ,
ನೀ ನಿಂತಾಗಲೇ ಕ್ಷಣದಿ ಚಿಂತೆ ನಿಲ್ಲುವುದು||
ಕಂತುಹರ ನೀನೆನ್ನ ಬಾಳ ಬೆಳಕಾಗಿ ನಿಂದು ,
ಇಂತೂ ಬೇಡುತಿಹೆ ನಿನ್ನಾ ದೇವಿಸುತ ನಾನಿಂದು ||
Audio Link
Song/Binnavisi-Bedalu-171276
No comments :
Post a Comment