Pages

Monday, December 1, 2014

Pavana Sambhuta Olidu....







ಇವನಾರೋ ಏನೋ  ಎಂದು ಉದಾಸೀನ ಮಾಡದಲೆನ್ನಾ
ಪವನ ಸಂಭೂತ ಒಲಿದು ತವಕದಿ ಕಾಯಬೇಕು ।।

ಕಪಿಪಕಪಿ  ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು  ಕಾಯ್ದೆಯಾಗಲು ।।ಪವನ।।

ಹರಿವೇಷಧರನೇ  ನರಹರಿ ಭಕುತರ ಪೊರೆವುದಕ್ಕೆ
ಹರಿಯಂತೆ ಒದೆಗುವೆಯೋ  ನೀನು ಹರಿ ದಾಸನು ನಾನು ।।ಪವನ ।।

ಅಜಸುತನ ಶಾಪದಿಂದ ಅಜಗರನಾದವನ ಪಾದ
ರಜದಿ  ಪುನೀತನ ಮಾಡಿದನೇ  ಅಜ ಪದವಿಗೆ ಬಹನೇ ।।ಪವನ।।

ಕಲಿಯುಗದಿ ಕವಿಗಳೆಲ್ಲಾ  ಕಲಿಬಾಧೆಯಿಂದ  ಬಳಲಿ
ಕಲಿವೈರಿಮುನಿಯೆಂದೆನಿಸಿದಿ  ಕಲಿಮಲವ ಕಳೆದಿ ।।ಪವನ।।

ಗುರುಪ್ರಾಣೇಶವಿಠಲ  ಹರಿಪದನೆಂಬೋ  ಜ್ಞಾನ
ಗುರುಮಧ್ವರಾಯ ಕರುಣಿಸೋ ದುರ್ಮತಿಗಳ  ಬಿಡಿಸೋ ।।ಪವನ।।


Lyrics In English :

IvanaarO EnO endu udaaseena maaDalEnnaa
pavana sambhuta Olidu tavakadi kaayabEku ||

kapipakapi aagnEyantE kapilana patniyannu
kapigaLu huDuki miDukalu kaaydEyaagalu ||pavana||

harivEshadharanE narahari bhakutara pOrEvudakkE
hariyantE OdEguvEyO neenu hari daasanu naanu ||pavana||

ajasutana shaapadinda ajagaranaadavana paada
rajadi puneetanE maaDidanE aja padavigE bahanE |\pavana||

kaliyugadi kavigaLElla kalibaadhEyinda baLali
kalivairimuniyEndEnisidi kalimalava kaLEdi ||pavana||

gurupraNEshaviThala  haripadanEmbO  jnana
gurumadhwaraya karuNisO durmatigaLa biDisO ||pavana||


Audio Link :
http://www.kannadaaudio.com/Pavana Sambhuta.php

No comments :

Post a Comment