Pages

Sunday, November 2, 2014

Bhooshanake Bhooshana

ರಚನೆ : ಶ್ರೀ ಶ್ರೀಪಾದರಾಜರು
ರಾಗ : ಸಾರಂಗ (ಮಾಲಕಂಸ )
ತಾಳ :ಝಂಪೆ


ಭೂಷಣಕೆ ಭೂಷಣ ಇದು ಭೂಷಣ
ಶೇಷಾದ್ರಿವಾಸ ಶ್ರೀ ವರವೇಂಕಟೇಶ ।ಪ।

ನಾಲಿಗೆಗೆ ಭೂಷಣ ನಾರಾಯಣ ನಾಮ
ಕಾಲಿಗೆ ಭೂಷಣ ಹರಿಯಾತ್ರೆಯು
ಆಳಯಕೆ ಭೂಷಣ ತುಲಸಿ  ವೃಂದಾವನ
ಕರ್ಣಕೆ  ಭೂಷಣ ವಿಷ್ಣು ಕಥೆಯು
ವಿಶಾಲ ಕರ್ಣಕೆ  ಭೂಷಣ ವಿಷ್ಣು ಕಥೆಯು ।೧।

ದಾನವೇ ಭೂಷಣ ಎರೆಡು  ಹಸ್ತಂಗಳಿಗೆ
ಮಾನವೇ ಭೂಷಣ ಮನುಜರಿಗೆ
ಜ್ಞಾನವೇ ಭೂಷಣ ಮುನಿ-ಯೋಗಿವರ್ಯರಿಗೆ
ಮಾನಿನಿಗೆ ಭೂಷಣ ಪತಿ ಭಕ್ತಿಯು ।೨।

ರಂಗನ್ನ  ನೋಡುವುದು ಕಂಗಳಿಗೆ ಭೂಷಣ
ಮಂಗಳಾಂಗಗೆ  ಮಣಿವ ಶಿರ ಭೂಷಣ
ಶೃಂಗಾರ ತುಳಸಿಮಣಿ ಕೊರಳಿಗೆ ಭೂಷಣ
ರಂಗ ವಿಠಲನ ನಾಮ ಅತಿ ಭೂಷಣ ।೩।

Audio Link :
http://gaana.com/song/bhooshanakebhooshana

No comments :

Post a Comment