ಆರತಿ ಬೆಳಗಿರೆ ನಾರಿಯರು ಬೇಗ
ಆದಿ ಕೊಲ್ಹಾಪುರ ಮಹಾಲಕ್ಷ್ಮಿಗೆ ।। ಪ ॥
ಹಾಡುತ ಪಾಡುತ ಜಾಣೆಯರೆಲ್ಲರೂ
ಆದಿನಾರಾಯಣ ಪ್ರೀಯಳಿಗೆ ।।ಪ॥
ಪಿಳ್ಳೆಕಾಲುಂಗುರ ಲುಲ್ಲು ಪೈಜನರುಳಿ
ಗಿಲ್ಲು ಗಿಲ್ಲೆಂದು ಹೆಜ್ಜೆಯನಿಡುತ ।
ಉಲ್ಲಾಸದಿಂದಲಿ ನಡುವಿಗೊಡ್ಯಾಣ
ಪುಲ್ಲನಾಭನ ಪ್ರೀಯಳಿಗೆ ।।ಪ॥
ಜರದ ಪೀತಾಂಬರ ನಿರಿಗೆಗಳೆಳೆಯುತ
ಥಗತೆಗೆಯಿಂದ ಹೊಳೆಯುತಲಿ ।
ತೊಟ್ಟ ಕಂಚುಕವನು ಇಟ್ಟ ಒಂಕಿಯ ತೊಡೆ
ಬೆಟ್ಟದ ವೆಂಕೋಬನ ಮಡದಿಗೆ ।।ಪ॥
ಚೌರಿ ರಗುತ ಗೊಂಡೆ ಹೆರಳು ಬಂಗಾರ
ಬುಗ್ಗುಡಿ ವಾಲಿಗಳು ಹೊಳೆಯುತಲಿ ।
ಸಡಗರದಿಂದ ಕುಡಿಯ ಕುಂಕುಮ ಹಚ್ಚಿ
ಒಡೆಯ ವೆಂಕೋಬನ ಮಡದಿಗೆ ।।ಪ॥
ಆದಿ ಕೊಲ್ಹಾಪುರ ಮಹಾಲಕ್ಷ್ಮಿಗೆ ।। ಪ ॥
ಹಾಡುತ ಪಾಡುತ ಜಾಣೆಯರೆಲ್ಲರೂ
ಆದಿನಾರಾಯಣ ಪ್ರೀಯಳಿಗೆ ।।ಪ॥
ಪಿಳ್ಳೆಕಾಲುಂಗುರ ಲುಲ್ಲು ಪೈಜನರುಳಿ
ಗಿಲ್ಲು ಗಿಲ್ಲೆಂದು ಹೆಜ್ಜೆಯನಿಡುತ ।
ಉಲ್ಲಾಸದಿಂದಲಿ ನಡುವಿಗೊಡ್ಯಾಣ
ಪುಲ್ಲನಾಭನ ಪ್ರೀಯಳಿಗೆ ।।ಪ॥
ಜರದ ಪೀತಾಂಬರ ನಿರಿಗೆಗಳೆಳೆಯುತ
ಥಗತೆಗೆಯಿಂದ ಹೊಳೆಯುತಲಿ ।
ತೊಟ್ಟ ಕಂಚುಕವನು ಇಟ್ಟ ಒಂಕಿಯ ತೊಡೆ
ಬೆಟ್ಟದ ವೆಂಕೋಬನ ಮಡದಿಗೆ ।।ಪ॥
ಚೌರಿ ರಗುತ ಗೊಂಡೆ ಹೆರಳು ಬಂಗಾರ
ಬುಗ್ಗುಡಿ ವಾಲಿಗಳು ಹೊಳೆಯುತಲಿ ।
ಸಡಗರದಿಂದ ಕುಡಿಯ ಕುಂಕುಮ ಹಚ್ಚಿ
ಒಡೆಯ ವೆಂಕೋಬನ ಮಡದಿಗೆ ।।ಪ॥
No comments :
Post a Comment