ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ
ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ
ಭಾಗ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ
ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ ।। (ಆದಿ )
ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ
ಭಾಗ್ಯ ತಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಕವ ತಾರಮ್ಮ
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ।। ( ಆದಿ )
ಕ್ಷೀರಾಬ್ಧಿ ತನಯೇ ಆನಂದ ನಿಲಯೇ ವಿಷ್ಣು ಪ್ರಿಯೆ ಬಾರೆ
ಕಮಲಾ ನಯನೆ ನಿಜ ಕಮಲಾ ವದನೆ ಕಮಲಾಕ್ಷ ವಲ್ಲಭೇ ಬಾರೆ
ಪುಷ್ಪಸುಗಂಧಿನಿ ಹರಿನಿವೋಲೋಚಿನಿ ಕರುಣೆಯನ್ನೇ ತೋರೆ
ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವನ್ನೇ ತಾರೆ ।। (ಆದಿ )
No comments :
Post a Comment