ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ ।ಪ।
ತೂಗಿರೆ ಯೋಗೇಂದ್ರ ಕರಕಮಲ ಪೂಜ್ಯರ
ತೂಗಿರೆ ಗುರುರಾಘವೇಂದ್ರರ ।ಅ.ಪ.।
ಕುಂದಣಮಯವಾದ ಚಂದದಿ ತೊಟ್ಟಿಲದೊಳು
ಆನಂದದಿ ಮಲಗ್ಯಾರೆ ತೂಗಿರೆ
ನಂದನ ಕಂದ ಮುಕುಂದನ ಗೋವಿಂದ
ನಂದದಿ ಭಾಜಿಪರ ತೂಗಿರೆ ।೧।
ಯೋಗನಿದ್ರೆಯನೇ ಬೇಗನೆ ಮಾಡುವ
ಯೋಗೀಶವಂದ್ಯಾರ ತೂಗಿರೆ
ಭೋಗಿಶಯನನವಾದ ಯೋಗದಿ ಭಜಿಪರ
ಭಾಗವತಾರನು ತೂಗಿರೆ ।೨।
ನೇಮದಿ ತನ್ನನ್ನು ಕಾಣುವ ಜನರಿಗೆ
ಕಾಮಿತ ಫಲ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಯವನುಕೂಲ
ಧೂಮಕೇತುವೆನಿಪರ ತೂಗಿರೆ ।೩।
ಅದ್ವೈತ ಮತದ ವಿದ್ವಂಸನ ನಿಜಗುರು
ಮಧ್ವಮತೋದ್ಧರರ ತೂಗಿರೆ
ಸಿದ್ಧಸಂಕಲ್ಪದಿ ಬದ್ಧ ನಿಜಭಕ್ತರ
ಉದ್ಧಾರಮಾಳ್ಪರ ತೂಗಿರೆ ।೪।
ಭಜಕಜನರ ಭವ ತೃಜನ ಮಾಡಿಸಿ ಅವರ
ನಿಜಗತಿಯಿಪ್ಪರ ತೂಗಿರೆ
ನಿಜಗುರುಜಗನ್ನಾಥವಿಠಲನ ಪದಕಂಜ
ಭಜನೆಯ ಮಾಳ್ಪರ ತೂಗಿರೆ ।೫।
ತೂಗಿರೆ ಯತಿಕುಲ ತಿಲಕರ ।ಪ।
ತೂಗಿರೆ ಯೋಗೇಂದ್ರ ಕರಕಮಲ ಪೂಜ್ಯರ
ತೂಗಿರೆ ಗುರುರಾಘವೇಂದ್ರರ ।ಅ.ಪ.।
ಕುಂದಣಮಯವಾದ ಚಂದದಿ ತೊಟ್ಟಿಲದೊಳು
ಆನಂದದಿ ಮಲಗ್ಯಾರೆ ತೂಗಿರೆ
ನಂದನ ಕಂದ ಮುಕುಂದನ ಗೋವಿಂದ
ನಂದದಿ ಭಾಜಿಪರ ತೂಗಿರೆ ।೧।
ಯೋಗನಿದ್ರೆಯನೇ ಬೇಗನೆ ಮಾಡುವ
ಯೋಗೀಶವಂದ್ಯಾರ ತೂಗಿರೆ
ಭೋಗಿಶಯನನವಾದ ಯೋಗದಿ ಭಜಿಪರ
ಭಾಗವತಾರನು ತೂಗಿರೆ ।೨।
ನೇಮದಿ ತನ್ನನ್ನು ಕಾಣುವ ಜನರಿಗೆ
ಕಾಮಿತ ಫಲ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಯವನುಕೂಲ
ಧೂಮಕೇತುವೆನಿಪರ ತೂಗಿರೆ ।೩।
ಅದ್ವೈತ ಮತದ ವಿದ್ವಂಸನ ನಿಜಗುರು
ಮಧ್ವಮತೋದ್ಧರರ ತೂಗಿರೆ
ಸಿದ್ಧಸಂಕಲ್ಪದಿ ಬದ್ಧ ನಿಜಭಕ್ತರ
ಉದ್ಧಾರಮಾಳ್ಪರ ತೂಗಿರೆ ।೪।
ಭಜಕಜನರ ಭವ ತೃಜನ ಮಾಡಿಸಿ ಅವರ
ನಿಜಗತಿಯಿಪ್ಪರ ತೂಗಿರೆ
ನಿಜಗುರುಜಗನ್ನಾಥವಿಠಲನ ಪದಕಂಜ
ಭಜನೆಯ ಮಾಳ್ಪರ ತೂಗಿರೆ ।೫।
No comments :
Post a Comment